ಜೇವರ್ಗಿ:ಸೆ.೨:ತಾಲ್ಲೂಕು ಪ್ರಾಥಮಿಕ ಸಹಕಾರ ಕೃಷಿ ಮತ್ತು ಗ್ರಾಮೀಣಾಭಿವೃದ್ಧಿ ಬ್ಯಾಂಕ್‌ನ ನೂತನ ಅಧ್ಯಕ್ಷರಾಗಿ ಕಾಂಗ್ರೆಸ್ ಬೆಂಬಲಿತ ಪ್ರತಾಪ ಚಿದಾನಂದ ಕಟ್ಟಿ ಹಾಗೂ ಉಪಾಧ್ಯಕ್ಷರಾಗಿ ಸಾಂಬಶಿವ ಮಲ್ಲಯ್ಯ ಹಿರೇಮಠ ಗೆಲುವು ಸಾಧಿಸಿದ್ದಾರೆ.
ಪಟ್ಟಣದ ಪಿಕಾರ್ಡ್ ಬ್ಯಾಂಕಿನ ಸಭಾಂಗಣದಲ್ಲಿ ಸೋಮವಾರ ನಡೆದ ಚುನಾವಣೆಯಲ್ಲಿ ಅಧ್ಯಕ್ಷ ಸ್ಥಾನಕ್ಕೆ ಅಂಕಲಗಾ ಕ್ಷೇತ್ರದಿಂದ ಅವಿರೋಧವಾಗಿ ಆಯ್ಕೆಯಾಗಿದ್ದ ಕಾಂಗ್ರೆಸ್ ಬೆಂಬಲಿತ ಪ್ರತಾಪ ಚಿದಾನಂದ ಕಟ್ಟಿ ಹಾಗೂ ಯಡ್ರಾಮಿ ಕ್ಷೇತ್ರದಿಂದ ಚುನಾಯಿತರಾದ ಜೆಡಿಎಸ್ ಬೆಂಬಲಿತ ಬಾಬುಗೌಡ ಪಾಟೀಲ ನಾಮಪತ್ರ ಸಲ್ಲಿಸಿದ್ದರು.
ಉಪಾಧ್ಯಕ್ಷ ಸ್ಥಾನಕ್ಕೆ ಮಳ್ಳಿ ಕ್ಷೇತ್ರದಿಂದ ಗೆಲುವು ಸಾಧಿಸಿದ ಕಾಂಗ್ರೆಸ್ ಬೆಂಬಲಿತ ಸಾಂಬಶಿವ ಮಲ್ಲಯ್ಯ ಹಿರೇಮಠ ಹಾಗೂ ಬಿಳವಾರ ಕ್ಷೇತ್ರದಿಂದ ಗೆಲುವು ಸಾಧಿಸಿದ ಜೆಡಿಎಸ್ ಬೆಂಬಲಿತ ಇಂದಿರಾ ಚನ್ನಪ್ಪಗೌಡ ನಾಮಪತ್ರ ಸಲ್ಲಿಸಿದ್ದರು.
‘ಚುನಾವಣಾ ಪ್ರಕ್ರಿಯೆಯಲ್ಲಿ ಕಾಂಗ್ರೆಸ್ ಬೆಂಬಲಿತ ೮, ಜೆಡಿಎಸ್ ಬೆಂಬಲಿತ ೬ ಹಾಗೂ ಬಿಜೆಪಿ ಬೆಂಬಲಿತ ೧ ಸೇರಿದಂತೆ ಎಲ್ಲಾ ೧೫ ಜನ ನಿರ್ದೇಶಕರು ಭಾಗವಹಿಸಿದ್ದರು. ಬೆಂಬಲಿತರು ತಲಾ ೮ ಮತಗಳನ್ನು ಕಾಂಗ್ರೆಸ್
ಜೇವರ್ಗಿಯ ಪಿಕಾರ್ಡ್ ಬ್ಯಾಂಕ್‌ನ ಅಧ್ಯಕ್ಷ, ಉಪಾಧ್ಯಕ್ಷರಾಗಿ ಕಾಂಗ್ರೆಸ್ ಬೆಂಬಲಿತರು ಚುನಾಯಿತರಾದರು ಹಿಂದೆ ಇವರ ತಂದೆ ದಿವಂಗತ ಯಮನಪ್ಪ ಕಟ್ಟಿ ಇಟಗ ೧೯೯೬ ರಿಂದ ೧೯೯೯ ವರೆಗೆ ಪಿ ಕಾರ್ಡ್ ಅಧ್ಯಕ್ಷರಾಗಿದ್ದರು ಅವರ ತಂದೆ ಹಾದಿಯಲ್ಲಿ ಇಂದು ಮಗ ಪಿಕಾರ್ಡ್ ಅಧ್ಯಕ್ಷರಾಗಿದ್ದಾರೆ ಎಂದು ಸ್ಮರಿಸಬಹುದು ಗೆಲುವು ಹಿನ್ನಲೆ ವಿಜಯೋತ್ಸವ ಆಚರಿಸಲಾಯಿತುಪಡೆದು ಗೆಲುವು ಸಾಧಿಸಿದ್ದಾರೆ’ ಎಂದು ಚುನಾವಣಾಧಿಕಾರಿಯಾಗಿ ಕರ್ತವ್ಯ ನಿರ್ವಹಿಸಿದ ಪ್ರಮೋದ ಕರಣಮ್ ತಿಳಿಸಿದ್ದಾರೆ.ಆಡಳಿತಾಧಿಕಾರಿ ಸಂಜೀವಕುಮಾರ ಕಪೂರ, ವ್ಯವಸ್ಥಾಪಕ ಕಲ್ಯಾಣರಾವ ಕಣಮೇಶ್ವರ ಇದ್ದರು.
ವಿಜಯೋತ್ಸವ: ಪಿಕಾರ್ಡ್ ಬ್ಯಾಂಕ್‌ಗೆ ಕಾಂಗ್ರೆಸ್ ಬೆಂಬಲಿತರು ಗೆಲುವು ಸಾಧಿ-ಸುತ್ತಿದ್ದಂತೆ ಕಾರ್ಯಕರ್ತರು ಪಟಾಕಿ ಸಿಡಿಸಿ, ಸಿಹಿ ವಿತರಿಸಿ ವಿಜಯೋತ್ಸವ ಆಚರಿಸಿದರು.
ಜೇವರ್ಗಿ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಸಿದ್ದಲಿಂಗ ರೆಡ್ಡಿ ಇಟಗಿ, ರುಕುಂ ಪಟೇಲ ಇಜೇರಿ, ರಾಜಶೇಖರ ಸಾಹು ಸೀರಿ, ಶಾಂತಪ್ಪ ಕೂಡಲಗಿ, ಚಂದ್ರಶೇಖರಹರನಾಳ, ಷಣ್ಮುಖಪ್ಪಗೌಡ ಹಿರೇಗೌಡ, ಶಿವಕುಮಾರ ಕಲ್ಲಾ, ಕಾಶಿರಾಯಗೌಡ ಯಲಗೋಡ, ಎ.ಬಿ.ಹಿರೇಮಠ, ವಿಜಯಕುಮಾರ ಹಿರೇಮಠ, ಸಂಗಣಗೌಡ ಪಾಟೀಲ ಗುಳ್ಯಾಳ, ನೀಲಕಂಠ ಅವಂಟಿ, ಕಾಶಿಂ ಪಟೇಲ್ ಮುದಬಾಳ , ಸಂಗಣ್ಣ ಇಟಗ ಶಾಂತಪ್ಪ ಯಲಗೋಡ ಸಕ್ರೆಪ್ ಗೌಡ ಹರನೂರ ಅಬ್ದುಲ್ ರಜಾಕ್ ಮನಿಯಾರ, ಸುಭಾಷ ಚನ್ನೂರ, ರುಕುಂ ತೋಲಾ, ಮೈಲಾರಿ ಗುಡೂರ, ಚಂದ್ರಶೇಖರ ನೇರಡಗಿ, ರಾಜು ಮುತ್ತಕೋಡ, ಬಸವರಾಜ ಬಾಗೇವಾಡಿ, ಇಮ್ರಾನ್ ಕಾಸರಬೋಸಗಾ, ರಫೀಕ್ ಜಮಾದಾರ, ಅಜ್ಜು ಲಕ್ಷತಿ, ರಾಯಪ್ಪ ಬಾರಿಗಿಡ, ಬಸವರಾಜ ಸುಬೇದಾರ, ಮಾಜಿ ಶೆಟ್ ಗಿರಣಿ ಮರಿಯಪ್ಪ ಸರಡಗಿ ಶರಣಗೌಡ ಸರಡಗಿ, ಶ್ರೀಹರಿ ಕರಕಿಹಳ್ಳಿ ಪ್ರೇಮಕಟ್ಟಿ ಚಂದ್ರು ಮ್ಯಾಗೇರಿ ಶಾನುವಾಲೆ ಶರಣು ಗುತ್ತೇದಾರ್ ರಿಯಾಜ್ ಪಟೇಲ್ ಮಲ್ಲಿಕಾರ್ಜುನ್ ಬೂದಿಹಾಳ ಸೇರಿದಂತೆ ಅನೇಕರಿದ್ದರು.























