Home ಜಿಲ್ಲೆ ಕಲಬುರಗಿ ಪ್ರಸಾದ ಭಗವಂತನ ಅನುಗ್ರಹದ ಸಂಕೇತ: ಪೂಜ್ಯ ಡಾ ಸದಾಶಿವ ಸ್ವಾಮೀಜಿ

ಪ್ರಸಾದ ಭಗವಂತನ ಅನುಗ್ರಹದ ಸಂಕೇತ: ಪೂಜ್ಯ ಡಾ ಸದಾಶಿವ ಸ್ವಾಮೀಜಿ

ಸೇಡಂ,ಆ,23:ಮಾನವ ಬದುಕಿನ ಸೋಪಾನ ಶ್ರಾವಣ ಸತ್ಸಂಗ ಸರಣಿ -8 ರ ಅನುಭಾವ ಕಾರ್ಯಕ್ರಮವು ಸೇಡಮ್ ನಗರದ ಶರಣ ಶ್ರೀ ಶಿವಯ್ಯ ಸ್ವಾಮಿ ಬಿಬ್ಬಳ್ಳಿ ಅವರ ನಿವಾಸದಲ್ಲಿ ಭಕ್ತಿಪೂರ್ವಕವಾಗಿ ಜರುಗಿತು.
ಶ್ರಾವಣ ಮಾಸದ ಸರಣಿ ಸತ್ಸಂಗ -8 ರ ಕಾರ್ಯಕ್ರಮದ ಪ್ರವಚನವು ಸೇಡಮ್ ನಗರದ ಆರಾಧ್ಯದೈವ ಶ್ರೀ ಕೊತ್ತಲ ಬಸವೇಶ್ವರ ದೇವಾಲಯದ ಪೂಜ್ಯರಾದ ಶ್ರೀ ಡಾ.ಸದಾಶಿವ ಶ್ರೀಗಳು ಪ್ರವಚನ ಕಾರ್ಯಕ್ರಮದಲ್ಲಿ ಅಷ್ಟಾವರಣದ ಮಹತ್ವದ ಜೊತೆಗೆ ಪ್ರಸಾದ ದೃಷ್ಟಿ ಕುರಿತು ಅನುಭಾವದ ನುಡಿಗೈಯುತ್ತಾ, ಪ್ರಸಾದ ಭಗವಂತನ ಅನುಗ್ರಹಿಸಿದ ಸಂಕೇತ ಹಾಗೂ ನಮ್ಮ ದೇಹವೂ ಭಗವಂತ ನಮಗೆ ಕರುಣಿಸಿದ ಪ್ರಸಾದವೆಂದರು.ಶ್ರೀಗಳು ತಮ್ಮ ಪ್ರವಚನದಲ್ಲಿ ಗುರು ಲಿಂಗ ಜಂಗಮರ ಕೃಪೆಯೇ ಪವಿತ್ರ ಪ್ರಸಾದವೆಂದರು.ಸೇಡಮ್ ನಗರದ ಶರಣ ಶ್ರೀ ಶಿವಯ್ಯಾ ಸ್ವಾಮಿ ಬಿಬ್ಬಳ್ಳಿ ಅವರ ನಿವಾಸದಲ್ಲಿ ಏರ್ಪಡಿಸಿದ ಸರಣಿ ಸತ್ಸಂಗದ ಅನುಭಾವಾದ ನುಡಿಯು ಭಕ್ತರನ್ನು ಭಗವಂತನ ಕೃಪೆ ಕರುಣಿಸಿತು.