Home ಜಿಲ್ಲೆ ಕಲಬುರಗಿ ಕೆಜಿಬಿ ಓಂ ನಗರ ಶಾಖೆಯಿಂದ ಪ್ರಧಾನ ಮಂತ್ರಿ ಜೀವನ್ ಜ್ಯೋತಿ ವಿಮೆ ವಿತರಣೆ

ಕೆಜಿಬಿ ಓಂ ನಗರ ಶಾಖೆಯಿಂದ ಪ್ರಧಾನ ಮಂತ್ರಿ ಜೀವನ್ ಜ್ಯೋತಿ ವಿಮೆ ವಿತರಣೆ

ಕಲಬುರಗಿ ಫೆ26: ಕರ್ನಾಟಕ ಗ್ರಾಮೀಣ ಬ್ಯಾಂಕ್ ಓಂ ನಗರ ಶಾಖೆಯ ಗ್ರಾಹಕ ಶಿವ ಕುಮಾರ್ ಸ್ವಾಮಿ ಅಕಾಲಿಕ ಮರಣ ಹೊಂದಿ ದ್ದರಿಂದ ಪ್ರಧಾನ ಮಂತ್ರಿ ಜೀವನ್ ಜ್ಯೋತಿ ವಿಮಾ ಯೋಜನೆ ಅಡಿಯಲ್ಲಿ 2,00,000/-ಲಕ್ಷ ರೂಪಾಯಿ ನಾಮಿನಿ ಆದ ಅವರ ಪತ್ನಿಯ ಖಾತೆಗೆ ಜಮಾ ಮಾಡಲಾಯಿತು.

ಶಿವಕುಮಾರ್ ಸ್ವಾಮಿ ಮರಣಕ್ಕೂ ಮುಂಚೆ ಓಂ ನಗರ ಶಾಖೆಯಲ್ಲಿ ಪ್ರಧಾನ ಮಂತ್ರಿ ಜೀವನ್ ಜ್ಯೋತಿ ವಿಮಾ ಯೋಜನೆಯ 436 ರೂ ಪಾವತಿಸಿ ವಿಮೆ ಮಾಡಿಸಿದ್ದರು. ವಿಮೆ ಮೊತ್ತ ಸ್ವೀಕರಿಸಿ ಮಾತನಾಡಿದ ಅವರ ಪತ್ನಿ ಭಾರತಿ ಇಬ್ಬರು ಹೆಣ್ಣು ಮಕ್ಕಳಿದ್ದು ಅವರ ಮುಂದಿನ ವಿದ್ಯಾಭ್ಯಾಸಕ್ಕೆ ಈ ಹಣ ಸಹಾಯವಾಗಲಿದೆ ಎಂದರು ಹಾಗೂ ಬ್ಯಾಂಕಿಗೆ ಮತ್ತು ಕೇಂದ್ರ ಸರಕಾರಕ್ಕೆ ಧನ್ಯವಾದಗಳು ತಿಳಿಸಿದರು.
ಕೆ.ಜಿ.ಬಿ ಓಂ ನಗರ ಶಾಖಾ ವ್ಯವಸ್ಥಾಪಕ ಕಿರಣ ಕಟ್ಟಿಮನಿ ಮಾತಾನಾಡಿ ಕೇಂದ್ರ ಸರ್ಕಾರದ ಜನಪರ ಯೋಜನೆಗಳಾದ ಪ್ರಧಾನ ಮಂತ್ರಿ ಜೀವನ ಜ್ಯೋತಿ ವಿಮಾ ಯೋಜನೆ, ಪ್ರಧಾನ ಮಂತ್ರಿ ಸುರಕ್ಷಾ ವಿಮಾ ಯೋಜನೆ ಹಾಗೂ ಅಟಲ್ ಪಿಂಚಣಿ ಯೋಜನೆ ಪಾಲಿಸಿಗಳನ್ನು ಪ್ರತಿಯೊಬ್ಬರು ಪಡೆಯಬೇಕು ಎಂದು ಸಲಹೆ ನೀಡಿದರು.
ಶಿವಕುಮಾರ ಬಗಲೂರ,ಲಲಿತಾ ರಾಯನ, ಮಾಲಾಪೂಜಾರಿ ,ಜಗದೇವಿ ಸೇರಿದಂತೆ ಇತರರು ಉಪಸ್ಥಿತರಿದ್ದರು.