ಪ್ರದೀಪ್‌ಈಶ್ವರ್ ಹಟಾವೋ ಚಿಕ್ಕಬಳ್ಳಾಪುರ ಬಚಾವೋ ಆಂದೋಲನ

ಚಿಕ್ಕಬಳ್ಳಾಪುರ.ಆ೧೩:ಸ್ಥಳೀಯ ಶಾಸಕ ಪ್ರದೀಪ್ ಈಶ್ವರವರು ತಮ್ಮ ಸ್ಥಾನದ ಶಾಶ್ವತ ಭದ್ರತೆಗಾಗಿ ದಲಿತ ವರ್ಗವನ್ನು ಒಡೆದು ಆಳುತ್ತಿರುವುದು ಖಂಡನೀಯ ಮುಂದಿನ ದಿನಗಳಲ್ಲಿ ಪ್ರದೀಪ್ ಈಶ್ವರ್ ಅಥವಾ ಚಿಕ್ಕಬಳ್ಳಾಪುರ ಬಚಾವೋ ಎಂಬ ಆಂದೋಲನ ಹಮ್ಮಿಕೊಳ್ಳಲಾಗುವುದು ಎಂದು ಮಹಾನಾಯಕ ಡಾ. ಬಿ.ಆರ್.ಅಂಬೇಡ್ಕರ್ ಸೇನೆ ರಾಜ್ಯಾಧ್ಯಕ್ಷ ಡಿ ವಿ ನಾರಾಯಣಸ್ವಾಮಿ, ಹೇಳಿದರು.


ಅವರು ನಗರದ ಪತ್ರಕರ್ತರ ಭವನದಲ್ಲಿ ನಡೆದ ಸುದ್ದಿಗೋಷ್ಠಿಯಲ್ಲಿ ಭಾಗವಹಿಸಿ ಮಾತನಾಡಿ, ದಲಿತ ವರ್ಗಕ್ಕೆ ಸೇರಿದ ಮಾಜಿ ಶಾಸಕ ಎಸ್ ಎಂ ಮುನಿಯಪ್ಪ ಇವರ ಪುತ್ರ ಜಗದೀಶ್ ದಲಿತ ವರ್ಗಕ್ಕೆ ಸೇರಿದ್ದರು ಸಹ ಶಾಸಕರ ಕಿರುಕುಳ ತಳಲಾರದೆ ಎಸ್‌ಎಂ ಮುನಿಯಪ್ಪ ಅವರು ತಮ್ಮ ಗ್ಯಾರಂಟಿ ಯೋಜನೆ ಅನುಷ್ಠಾನ ಪ್ರಾಧಿಕಾರದ ಅಧ್ಯಕ್ಷ ಸ್ಥಾನಕ್ಕೆ ರಾಜೀನಾಮೆ ಕೊಟ್ಟರು ಪ್ರದೀಪ್ ಈಶ್ವರ್ ಅವರ ಚುನಾವಣೆಯಲ್ಲಿ ಹಗಲಿರಳು ಪಕ್ಷ ನಿಷ್ಠೆಯಿಂದ ಪ್ರಚಾರ ನಡೆಸಿದ್ದ ಜಗದೀಶ್ ಮೂಲೆಗುಂಪಾದರು, ಮೈಲಪ್ಪನಹಳ್ಳಿ ಸಮೀಪದ ಪೆಟ್ರೋಲ್ ಬಂಕ್ ಒಂದರಲ್ಲಿ ದಲಿತ ಯುವಕ ಆತ್ಮಹತ್ಯೆ ಮಾಡಿಕೊಂಡ ಸಂದರ್ಭದಲ್ಲಿ ಶಾಸಕರ ದಲಿತ ಪ್ರೇಮ ಎಲ್ಲಿ ಹೋಗಿತ್ತು, ಅದೇ ರೀತಿ ಕೆಳಗಿನ ತೋಟಗಳಲ್ಲಿ ದಲಿತ ವ್ಯಕ್ತಿಗೆ ಸೇರಿದ್ದ ತೋಟದಲ್ಲಿ ೩೦೦೦ ರೋಜ ಬೆಳೆಯನ್ನ ಹಾಳು ಮಾಡಿದಾಗ ದಲಿತ ವ್ಯಕ್ತಿಯ ಪರ ಶಾಸಕರು ಏಕೆ ನಿಲ್ಲಲಿಲ್ಲ ಎಂದು ಕಟುವಾಗಿ ಪ್ರಶ್ನೆ ಮಾಡಿದರು.


ಸದರಿ ಚಾಲಕ ಬಾಬು ಆತ್ಮಹತ್ಯೆ ಪ್ರಕರಣದಲ್ಲಿ ಡಾಕ್ಟರ್ ಕೆ ಸುಧಾಕರ್ ಅವರ ಹೆಸರಿರುವ ಕಾರಣದಿಂದಾಗಿ ಶಾಸಕ ಪ್ರದೀಪ್ ಈಶ್ವರ್ ಈ ರೀತಿಯಾಗಿ ಅತಿರೇಕದ ರಾಜಕಾರಣ ಹಾಗೂ ದ್ವೇಷ ಮನೋಭಾವನೆಯಿಂದ ಈ ರೀತಿ ವರ್ತಿಸುತ್ತಿದ್ದಾರೆ ಶಾಸಕರ ಜೊತೆ ಈಗಿರುವ ಅನೇಕ ದಲಿತ ಮುಕಂದರು ಈ ಹಿಂದೆ ಡಾಕ್ಟರ್ ಕೆ ಸುಧಾಕರ್ ಶಾಸಕ ಸಚಿವರಾಗಿದ್ದ ಸಂದರ್ಭದಲ್ಲಿ ಅವರಿಂದ ಫಲಾನುಭವಿಗಳಾಗಿದ್ದರು ಎಂದು ಅವರು ಆರೋಪಿಸಿದರು.


ಸಾಮಾಜಿಕ ಹೋರಾಟಗಾರ ಹರೀಶ್ ರೆಡ್ಡಿ ಮಾತನಾಡಿ, ಚಾಲಕ ಬಾಬು ಅವರ ಆತ್ಮಹತ್ಯೆ ಇಡೀ ಪ್ರಕರಣವನ್ನು ಶಾಸಕ ಪ್ರದೀಪ್ ಈಶ್ವರ್ ಅವರು ತಮಗೆ ಅನುಕೂಲ ಆಗುವ ರೀತಿ ರಾಜಕೀಯ ಕೆಸರು ಎರಚಾಟದಲ್ಲಿ ತೊಡಗಿದ್ದಾರೆ ಬಾಬು ಆತ್ಮಹತ್ಯೆ ಪ್ರಕರಣದಲ್ಲಿ ಸಂಸದ ಡಾಕ್ಟರ್ ಕೆ ಸುಧಾಕರ್ ರವರ ಹೆಸರು ಪ್ರಸ್ತಾಪ ಆಗುವುದಕ್ಕೂ ಮುಂಚೆ ಕ್ಷೇತ್ರದಲ್ಲಿ ಅನೇಕ ದಲಿತರ ಆತ್ಮಹತ್ಯೆಗಳಾಗಿವೆ ಆದರೆ ಡಾಕ್ಟರ್ ಕೆ ಸುಧಾಕರ್ ಹೆಸರು ಪ್ರಸ್ತಾಪಿತ ಎಂಬ ಒಂದೇ ಕಾರಣದಿಂದ ಶಾಸಕ ಪ್ರದೀಪ್ ಈಶ್ವರ್ ಈ ಸಮಸ್ಯೆಯನ್ನು ರಾಜಕೀಯ ಗೊಳಿಸುತ್ತಿದ್ದಾರೆ ಇದು ಅವರ ಸ್ಥಾನಕ್ಕೆ ತಕ್ಕದಾದುದಲ್ಲ ಎಂದರು


ಕ್ಷೇತ್ರದ ಸಮಸ್ಯೆ ಅರಿಯುವುದಕ್ಕಿಂತ ಹೆಚ್ಚಾಗಿ ಚಾಲಕ ಬಾಬು ಆತ್ಮಹತ್ಯೆ ಪ್ರಕರಣದಲ್ಲಿ ಕಾಲ ಕಳೆಯುತ್ತಿದ್ದಾರೆ ಎಂದರು.


ಸುದ್ದಿಗೋಷ್ಠಿಯಲ್ಲಿ ಡಿ.ಎಸ್‌ಎಸ್ ಜಿಲ್ಲಾ ಮುಖಂಡ , ನಲ್ಲಕದರೇನಹಳ್ಳಿ ಗಂಗಪ್ಪ, ತಾಲೂಕು ಅಧ್ಯಕ್ಷರಾದ ಡಿ ಹೊಸೂರು ದೇವದಾಸ್, ಸಮಾಜ ಸೇವಕ ರಾದ ಮಂಜುನಾಥ್, ಸಾಗರ್, ತಾಲೂಕು ಉಪಾಧ್ಯಕ್ಷ ಮುಸ್ಟೂರು ಮುನಿರಾಜು ನಾಗೇಶ್, ಹರೀಶ್, ಚನ್ನಪ್ಪ ಮಂಜುನಾಥ್ ಸೇರಿದಂತೆ ಇತರರು ಇದ್ದರು.