Home ಜಿಲ್ಲೆ ಯೋಗ ದೈನಂದಿನ ಜೀವನದಲ್ಲಿ ಆಚರಿಸಿ ಆರೋಗ್ಯ ಕಾಪಾಡಿಕೊಳ್ಳಿ: ಭವರಲಾಲ್ ಆರ್ಯ

ಯೋಗ ದೈನಂದಿನ ಜೀವನದಲ್ಲಿ ಆಚರಿಸಿ ಆರೋಗ್ಯ ಕಾಪಾಡಿಕೊಳ್ಳಿ: ಭವರಲಾಲ್ ಆರ್ಯ

ಬೀದರ್: ಜಗತ್ತಿಗೆ ಭಾರತವು ನೀಡಿದ ಅತ್ಯಮೂಲ್ಯ ಕೊಡುಗೆಯೆಂದರೆ ಅದು ಯೋಗ. ಪತಂಜಲಿ ಯೋಗಪೀಠದ ಯೋಗಗುರು ಬಾಬಾ ರಾಮದೇವ ಅವರ ಅವಿರತ ಪ್ರಯತ್ನದಿಂದ ಹಾಗೂ ಪ್ರಧಾನಮಂತ್ರಿ ನರೇಂದ್ರ ಮೋದಿಯವರ ವಿಶೇಷ ಮುತುವರ್ಜಿಯಿಂದ ಜಾಗತಿಕ ಮಟ್ಟದಲ್ಲಿ ಯೋಗಕ್ಕೆ ಅಪಾರ ಪ್ರಚಾರ ದೊರೆತಿದೆ. ಪ್ರತಿಯೊಬ್ಬರೂ ಆರೋಗ್ಯಯುತ ಜೀವನ ರೂಪಿಸಿಕೊಳ್ಳಲು ಯೋಗವನ್ನು ಕೇವಲ ನೋಡುವುದಲ್ಲ, ಬದಲಿಗೆ ತಮ್ಮ ದೈನಂದಿನ ಜೀವನದ ಭಾಗವಾಗಿಸಿಕೊಳ್ಳಬೇಕು ಎಂದು ಕರ್ನಾಟಕ ರಾಜ್ಯ ಪತಂಜಲಿ ಯೋಗಪೀಠದ ರಾಜ್ಯ ಪ್ರಭಾರಿ ಭವರಲಾಲ್ ಆರ್ಯ ಕರೆ ನೀಡಿದರು.
ನಗರದ ಬರೀದಶಾಹಿ ಉದ್ಯಾನವನದಲ್ಲಿ ಹಮ್ಮಿಕೊಳ್ಳಲಾಗಿದ್ದ ವಿಶೇಷ ಯೋಗ ಶಿಬಿರ ಉದ್ಘಾಟಿಸಿ ಮಾತನಾಡಿದರು.
ಇಂದಿನ ಆಧುನಿಕ ಬದುಕಿನಲ್ಲಿ ಮೊಬೈಲ್ ಮತ್ತು ಸಾಮಾಜಿಕ ಜಾಲತಾಣಗಳಿಗೆ ಸೀಮಿತವಾಗದೆ, ದೈಹಿಕ ಮತ್ತು ಮಾನಸಿಕ ಸ್ವಾಸ್ಥ್ಯಕ್ಕಾಗಿ ಪ್ರತಿಯೊಬ್ಬರೂ ಯೋಗಾಭ್ಯಾಸ ಮಾಡಬೇಕು. ದೇಶದ 140 ಕೋಟಿ ಜನಸಂಖ್ಯೆಯಲ್ಲಿ ಕೇವಲ ಶೇಕಡಾ 1ರಷ್ಟು ಅಂದರೆ ಸುಮಾರು 14 ಲಕ್ಷ ಜನ ಮಾತ್ರ ನಿಯಮಿತವಾಗಿ ಯೋಗ ಮಾಡುತ್ತಿದ್ದಾರೆ. ಬೀದರನಲ್ಲೂ ಯೋಗವನ್ನು ವೀಕ್ಷಿಸುವವರ ಸಂಖ್ಯೆ ಹೆಚ್ಚಿದ್ದರೂ, ಆಚರಿಸುವವರ ಸಂಖ್ಯೆ ಬೆರಳೆಣಿಕೆಯಷ್ಟು ಮಾತ್ರ ಇರುವುದು ದುರದೃಷ್ಟಕರ ಎಂದು ಕಳವಳ ವ್ಯಕ್ತಪಡಿಸಿದರು.
ಪತಂಜಲಿ ಯೋಗಪೀಠವು ಇತರೆ ಸಂಘ-ಸಂಸ್ಥೆಗಳ ಸಹಯೋಗದೊಂದಿಗೆ ಹಳ್ಳಿ-ಹಳ್ಳಿಗಳಲ್ಲಿ ಮತ್ತು ಪ್ರತಿ ವಾರ್ಡ್‍ಗಳಲ್ಲಿ ಉಚಿತ ಯೋಗ ಶಿಬಿರಗಳನ್ನು ಆಯೋಜಿಸಿ, ಜನಸಾಮಾನ್ಯರಲ್ಲಿ ಯೋಗದ ಮಹತ್ವವನ್ನು ತಲುಪಿಸಲು ಪಣ ತೊಟ್ಟಿದ್ದು 2008 ರಲ್ಲಿ ಬೀದರನಿಂದಲೆ ಯೋಗ ಜಾಗರಣೆ ಅಭಿಯಾನವನ್ನು ಕೈಗೊಂಡಿದ್ದೆ ಅದು ಅತ್ಯಂತ ಯಶಸ್ವಿಯಾಗಿತ್ತು ಇಂದು ಮತ್ತೆ ಬೀದರನಿಂದಲೆ ಜನರ ಉತ್ತಮ ಆರೋಗ್ಯಕ್ಕಾಗಿ ಯೋಗದ ಆಂದೋಲನ ಕೈಗೊಂಡಿದ್ದೆನೆ ಇದು ಇಡಿ ರಾಜ್ಯಾಂದ್ಯಂತ ನಡೆಯಲಿದೆ ಇದಕ್ಕೆ ಎಲ್ಲರ ಸಹಕಾರವಿರಲಿ ಎಂದರು.
ಕಲಬುರಗಿ ವಿಭಾಗ ಸಂಯೋಜಕರಾದ ಶಿವಾನಂದ ಸಾಲಿಮಠ ಅವರು ಮಾತನಾಡಿ ರೋಗಮುಕ್ತ ಮತ್ತು ಸದೃಢ ಜೀವನ ಶೈಲಿಯನ್ನು ರೂಢಿಸಿಕೊಳ್ಳಲು ಯೋಗವೇ ರಾಮಬಾಣವಾಗಿದೆ. ಈ ನಿಟ್ಟಿನಲ್ಲಿ ಇಡಿ ರಾಜ್ಯಾದ್ಯಂತ ಭವರಲಾಲ್ ಆರ್ಯ ಅವರ ನೇತೃತ್ವದಲ್ಲಿ ವಿವಿಧ ಸಂಘ-ಸಂಸ್ಥೆಗಳ ಪ್ರಮುಖರು, ಯೋಗ ಸಾಧಕರ ಸಹಕಾರದೊಂದಿಗೆ ಯೋಗ ಶಿಬಿರಗಳನ್ನು ಮಾಡಲಾಗುತ್ತಿದೆ ಎಂದರು.
ಈ ಸಂದರ್ಭದಲ್ಲಿ ಮಾಜಿ ಸಚಿವ ಭಗವಂತ ಖೂಬಾ, ಪ್ರಮುಖರಾದ ಗಣಪತರಾವ ಖೂಬಾ, ಅಣ್ಣಯಪ್ಪಾ ಸ್ವಾಮಿ, ಶ್ರೀದೆವಿ ಶಿವಕುಮಾರ, ಮಂಜುಳಾ ತಡಿಬಿಡಿಮಠ, ಗುರುದತ್ತ ವಿದ್ಯಾರ್ಥಿ, ಪತಂಜಲಿ ಯೋಗ ಪೀಠದ ಜಿಲ್ಲೆಯ ಪ್ರಮುಖರಾದ ಗೋರಖನಾಥ ಕುಂಬಾರ, ಅಜಯಕುಮಾರ ದುಬೆ, ಗುರುನಾಥ ಮೂಲಗೆ, ರೂಪಾ ಪಾಟೀಲ, ವಿದ್ಯಾವತಿ ಹಿರೇಮಠ, ಜಗದೀಶ ಖೂಬಾ, ಗುರುನಾಥ ರಾಜಗೀರಾ, ನಂದಕುಮಾರ ತಾಂದಳೆ, ಮಂಜುಳಾ ಮುಚಳಂಬೆ, ಗಣಪತಿ ಭತಮುರ್ಗೆ, ರವಿಂದ್ರ ತೆಲಗಣಿ ಸೇರಿದಂತೆ ಇತರರಿದ್ದರು.