
ಕಲಬುರಗಿ: ನ.3:ಜೇವರ್ಗಿ ಪಟ್ಟಣದ ಕೋರ್ಟ್ ಎದುರುಗಡೆಯಿರುವ ಸರ್ಕಾರಿ ಸ್ವತಂತ್ರ ಪದವಿ ಪೂರ್ವ ಕಾಲೇಜಿನಲ್ಲಿ ಪ್ರಾಚಾರ್ಯರಾಗಿ ಸೇವೆ ಸಲ್ಲಿಸಿ ವಯೋನಿವೃತ್ತಿ ಹೊಂದಿರುವ ಬಸವರಾಜ ಬಿರಾಜದಾರ ಅವರಿಗೆ ಸತ್ಕರಿಸಿ, ಬೀಳ್ಕೊಡಲಾಯಿತು.
ಜಿಲ್ಲಾ ಸರ್ಕಾರಿ ಪದವಿ ಪೂರ್ವ ಕಾಲೇಜುಗಳ ಪ್ರಾಚಾರ್ಯರ ಸಂಘದ ಅಧ್ಯಕ್ಷರು ಆದ ಬಿರಾಜದಾರ ಅವರಿಗೆ ಕಾಲೇಜಿನಲ್ಲಿ ಶುಕ್ರವಾರ ಏರ್ಪಡಿಸಿದ್ದ ಬೀಳ್ಕೊಡುಗೆ ಕಾರ್ಯಕ್ರಮದಲ್ಲಿ ಕಾಲೇಜು, ಜೇವರ್ಗಿ ತಾಲೂಕು ಮತ್ತು ಜಿಲ್ಲೆಯ ವಿವಿಧ ಸರ್ಕಾರಿ, ಅನುದಾನಿತ ಮತ್ತು ಖಾಸಗಿ ಪದವಿ ಪೂರ್ವ ಕಾಲೇಜುಗಳ ಪ್ರಾಚಾರ್ಯರು, ಉಪನ್ಯಾಸಕರು ಬಿರಾಜದಾರ ಅವರಿಗೆ ಸತ್ಕರಿಸಿ, ಅವರ ಅನುಪಮ ಸೇವೆಯನ್ನು ಸ್ಮರಿಸಿದರು.
ಕಾರ್ಯಕ್ರಮದಲ್ಲಿ ಕಾಲೇಜಿನ ಪ್ರಬಾರಿ ಪ್ರಾಚಾರ್ಯ ಯಶವಂತ ಗಾಣಿಗೇರ, ವಿವಿಧ ಕಾಲೇಜುಗಳ ಪ್ರಾಚಾರ್ಯರು ಮತ್ತು ಉಪನ್ಯಾಸಕರಾದ ಶ್ರೀಶೈಲಪ್ಪ ಬೋನಾಳ, ಶಿವಶರಣಪ್ಪ ಮಸ್ಕನಳ್ಳಿ, ಶಿವಾನಂದ ಖಜೂರ್ಗಿ, ಬಿ.ಎಸ್.ಮಾಲಿಪಾಟೀಲ್, ಬಿ.ಎಚ್.ನಿರಗುಡಿ, ಶರಣಗೌಡ ಪಾಟೀಲ್, ಬಸವರಾಜ ಗಾಣೂರೆ, ಶಾರದಾ ಆಲಗೂರ್, ಎಚ್.ಬಿ.ಪಾಟೀಲ್, ರಾಜಶೇಖರ ಹಿರೇಗೌಡ, ಅಮರೇಶ್, ಇಮಾಮ್ ಪಟೇಲ್, ಸತೀಶ್, ದುಂಡಪ್ಪ ಯರಗೋಳ್, ಪಿಡ್ಡಪ್ಪ, ಸುರೇಶ್, ಡಾ.ಈರಣ್ಣ ಹವಾಲ್ದಾರ, ಡಾ.ಸಿದ್ದಲಿಂಗಪ್ಪ, ಸಿದ್ದಣ್ಣ ಪೂಜಾರಿ, ಉಸ್ಮಾನ ಖಾಜಿ, ರಘುನಂದನ್, ಶೈಲೇಂದ್ರಸಿಂಗ ಠಾಕೂರ್, ನಿವೃತ್ತ ಪ್ರಾಚಾರ್ಯ ಸುಧೀರ ಹೆಬ್ಬಾಳಕರ್, ನಿವೃತ್ತ ಉಪನ್ಯಾಸಕರಾದ ಬಸವರಾಜ ಉಪ್ಪಿನ್, ಸುಜಾತಾ ದೇಶಪಾಂಡೆ ಸೇರಿದಂತೆ ಇನ್ನಿತರರಿದ್ದರು.






























