ರಾಮಾಯಣದ ಪ್ರಚಂಡಕಾAಡ ಸುಂದರಕಾAಡ


ಸತ್ತೂರು,ಮೇ.೧೯: ಮೂವತ್ತೆರಡೂ ಲಕ್ಷಣಗಳನ್ನು ಹೊಂದಿರುವ ಸುಂದರನಾದ ಹನುಮಂತ ದೇವರ ಪ್ರತಿಪಾದನೆ ಮಾಡುವ ಪ್ರಚಂಡ ಕಾಂಡ ಸುಂದರಕಾAಡ. ಈ ಕಾಂಡದಲ್ಲಿ ಹನುಮಂತ ದೇವರು
ಸೀತಾನ್ವೇಷಣಕ್ಕಾಗಿ ಸಮುದ್ರವನ್ನು ದಾಟಿ ಅನೇಕ ಅಡಚಣೆಗಳನ್ನು ಎದುರಿಸಿ, ರಾಮದೂತನಾಗಿ ಸೀತಾಮಾತೆಗೆ ಉಂಗುರ ನೀಡಿ, ಚೂಡಾಮಣಿಯನ್ನು ಸ್ವೀಕರಿಸಿ, ರಾಮಚಂದ್ರನಿಗೆ ತಲುಪಿಸಿದ, ಲಂಕೆಯಲ್ಲಿ ರಾವಣನ ಸೈನ್ಯದ ಸಾಮರ್ಥ್ಯ ಅರಿಯಲು, ಹಾಗೂ ಬಾಲದಿಂದ ಲಂಕೆಗೆ ಬೆಂಕಿ ಹಚ್ಚುವ ಮಹಾ ಸಾಹಸಮಯ ಘಟನೆ ಮತ್ತು ಇನ್ನಿತರ ಅನೇಕ ವಿಷಯಗಳನ್ನು ತಿಳಿಸುವ ರಾಮಾಯಣದ ಐದನೇ ಕಾಂಡವಾದ ಸುಂದರಕಾAಡ. ಈ ಕಾಂಡದ ಪ್ರವಚನ , ಚಿಂತನೆ, ಉಪಾಸನೆ ,ಸ್ಮರಣೆ ,ಮಾಡಿದರೆ ವಿಶೇಷವಾಗಿ ,ಬುದ್ಧಿ (ಅರ್ಥೈಸುವಿಕೆ , ನಿರ್ಧಾರಣಾ ಶಕ್ತಿ) ಬಲ (ದೈಹಿಕ, ಮಾನಸಿಕ) ಜೀವನದಲ್ಲಿ ಯಶಸ್ಸು (ಇತರರಿಂದ ಮನಸಾರೆ ಹೊಗಳುವಿಕೆ) ಅಚಲತೆಯಿಂದ ಕೂಡಿರುವ ಧೈರ್ಯ, ನಿರ್ಭಯತ್ವ (ಮನಸ್ಸಿನಲ್ಲಿರುವ ಭಯಕಂಪನ) , ದುಷ್ಟರಿಗೆ ಹೆದರದಿರುವುದು, ಅರೋಗತ, ಯಾವ ಅಂಗದಲ್ಲಿ ರೋಗದಿಲ್ಲರುವುದು, ಸೋಮಾರಿತನವಿಲ್ಲದ್ದು, ಒಳ್ಳೆ ಮಾತುಗಾರಿಕೆ ಹಾಗೂ ನಮ್ಮ ಜೀವನವನ್ನು ಸುಂದರವಾಗಿ ರೂಪಿಸುತ್ತದೆ ಎಂದು ಪಂ. ಸುಬ್ರಹ್ಮಣ್ಯ ಆಚಾರ ತಡಕೋಡ ತಿಳಿಸಿದರು.


ಸುತ್ತೂರಿನ ನಾರಾಯಣ ಪಾರಾಯಣ ಬಳಗದ ಆಶ್ರಯದಲ್ಲಿ ವಾದಿರಾಜ ಆಚಾರ ಮನೆಯಲ್ಲಿ ನಡೆದ ರಾಮಾಯಣದ ಸುಂದರಕಾAಡ ಉಪನ್ಯಾಸ ಸರಣಿಯಲ್ಲಿ ಮಾತನಾಡಿದರು.


ಕಾರ್ಯಕ್ರಮದ ಪೂರ್ವದಲ್ಲಿ ನಾರಾಯಣಿ ಭಜನಾ ಮಂಡಳಿಯಿAದ ಭಜನಾ ಕಾರ್ಯಕ್ರಮ ಹಾಗೂ ಬಳಗದ ಸದಸ್ಯರಿಂದ ಶ್ರೀ ಹರಿವಾಯುಗಳ ಸ್ತೋತ್ರ ಪಾರಾಯಣ ಕಾರ್ಯಕ್ರಮದಲ್ಲಿ ರಘೋತ್ತಮ ಅವಧಾನಿ, ಡಿ.ಕೆ. ಜೋಷಿ , ಆನಂದ ದೇಶಪಾಂಡೆ, ಡಾ. ಶ್ರೀನಾಥ, ಪಟ್ಟಣಕೋಡಿ, ಡಾ. ರವಿ ದುಮ್ಮವಾಡ, ಕೇಶವ ಕುಲಕರ್ಣಿ, ಸಂಜೀವ ಗೊಳಸಂಗಿ, ಧೀರೇಂದ್ರ ತಂಗೋಡ, ಸಂಜೀವ ಜೋಶಿ, ಬದ್ರಿನಾಥ ಬೆಟಗೇರಿ, ಪಾಂಡುರAಗ ಕುಲಕರ್ಣಿ ಎಲ್. ವಿ. ಜೋಶಿ ,ಉದಯ ದೇಶಪಾಂಡೆ, ಪ್ರಕಾಶ ದೇಸಾಯಿ ಉಪಸ್ಥಿತರಿದ್ದರು.