ತಿರಂಗಾ ಯಾತ್ರೆಯಲ್ಲಿ ಪ್ರಭು ಚವ್ಹಾಣ ಪಾಲ್ಗೊಂಡಿದ್ದು ಸ್ವಾಗತಆದರೆ ನಿಮ್ಮ ಮಗ ಎಲ್ಲಿ?: ರವೀಂದ್ರ ಸ್ವಾಮಿ ಪ್ರಶ್ನೆ

ಬೀದರ: ಅ.15:ಗುರುವಾರ ಔರಾದನಲ್ಲಿ ನಡೆದ ಹರ್ ಘರ್ ತಿರಂಗಾ ಅಭಿಯಾನದಲ್ಲಿ ಕ್ಷೇತ್ರದ ಶಾಸಕರು ಹಾಗೂ ಮಾಜಿ ಮಂತ್ರಿಗಳಾದ ಪ್ರಭು ಚವ್ಹಾಣ ಅವರು ಪಾಲ್ಗೊಂಡಿರುವುದು ಸಂತೋಷ. ಆದರೆ ಇತ್ತಿಚಿಗೆ ಮೂವರು ಯುವತಿಯರ ಜೀವನದ ಜೊತೆಗೆ ಚೆಲ್ಲಾಟವಾಡಿ ಅವಿತುಕೊಂಡಿರುವ ತಮ್ಮ ಪುತ್ರ ಪ್ರತೀಕ ಚವ್ಹಾಣಗೆ ಎಲ್ಲಿ ಬಚ್ಚಿಟ್ಟಿದ್ದೀರಿ? ಎಂದು ಏಕತಾ ಫೌಂಡೇಶನ್ ಅಧ್ಯಕ್ಷ ರವೀಂದ್ರ ಸ್ವಾಮಿ ಪ್ರಶ್ನಸಿದರು.
ಗುರುವಾರ ಪತ್ರಿಕಾ ಪ್ರಕಟಣೆ ಹೊರಡಿಸಿರುವ ಅವರು ಇತ್ತಿಚಿಗೆ ಔರಾದ ಹಾಗೂ ಕಮಲನಗರ ತಾಲೂಕುಗಳಲ್ಲಿ (ಔರಾದ ಮೀಸಲು ಕ್ಷೇತ್ರದಲ್ಲಿ) ವಿಪರೀತ ಮಳೆಯಾಗುತಿದ್ದು, ರೈತರು ತಮ್ಮ ಬೇಸಾಯದ ವೃತ್ತಿಯಲ್ಲಿ ಬಿಜಿಯಾಗಿರುವುದು ಒಂದು ಕಡೆಯಾದರೆ ಅನೇಕ ಬಡವರ ಮನೆಗಳು ಮಳೆಯಿಂದ ಕುಸಿದು ಪ್ರಾಣಹಾನಿ, ಬೆಳೆಹಾನಿ ಉಂಟಾಗುತ್ತಿದ್ದರೂ ಕ್ಷೇತ್ರದ ಶಾಸಕ ಪ್ರಭು ಚವ್ಹಾಣ ಅವರು ಆ ಕಡೆ ಗಮನ ಹರಿಸದೆ ಕರ್ತವ್ಯದಿಂದ ವಿಮುಖರಾಗಿರುವರು. ಅಲ್ಲದೇ ಪ್ರತೀ ಮೂರು ತಿಂಗಳಿಗೊಮ್ಮೆ ಕರ್ನಾಟಕ ಅಭಿವೃದ್ಧಿ ಕಾರ್ಯಕ್ರಮಗಳ ಕುರಿತು (ಕೆಡಿಪಿ) ನಡೆದ ಸಭೆಯಲ್ಲಿ ಭಾಗವಹಿಸದೆ ದೂರ ಉಳಿದಿದ್ದು ಅಲ್ಲದೆ ಕ್ಷೇತ್ರದಲ್ಲಿನ ಎಲ್ಲಾ ಅಭಿವೃದ್ಧಿ ಕಾರ್ಯಕ್ರಮಗಳಿಂದ ವಿಮುಖರಾಗಿದ್ದಾರೆ. ಸಂವಿಧಾನದ ನಾಲ್ಕನೇ ಅಂಗವೆಂದು ಕರೆಸಿಕೊಳ್ಳುವ ಪತ್ರಿಕಾ ದಿನಾಚರಣೆಯಲ್ಲಿಯೂ ಸಹ ಭಾಗವಹಿಸದೇ ಇರುವುದು ವಿಪರ್ಯಾಸದ ಸಂಗತಿ ಎಂದರು.
ತಾಲೂಕಿನಲ್ಲಿ ರೈತರಿಗೆ ರಸಗೊಬ್ಬರದ ಕೊರತೆ ಉಂಟಾಗಿದ್ದು, ಅಲ್ಲಿ ಕೇಳುವ ಜನಪ್ರತಿನಿಧಿಗಳೇ ಇಲ್ಲದಿರುವಾಗ ರೈತರ ಪರಿಸ್ಥಿತಿ ಏನಾಗಬೇಕು? ಇಂತಹ ಸಂದಿಗ್ಧ ಪರಿಸ್ಥಿತಿಯಲ್ಲಿ ಕ್ಷೇತ್ರದ ಶಾಸಕರು ಎದುರು ನಿಂತು ಸಮರ್ಪಕ ಗೊಬ್ಬರ ವಿತರಣೆಗೆ ವ್ಯವಸ್ಥೆ ಮಾಡಬೇಕಾಗಿತ್ತು. ಆದರೆ ಅವರೇ ಎಲ್ಲಾ ಜವಾಬ್ದಾರಿಗಳಿಂದ ನುಣುಚಿಕೊಂಡರೆ ಹೇಗೆ? ಎಂದು ಪ್ರಶ್ನೆ ಮಾಡಿದ ರವೀಂದ್ರ ಸ್ವಾಮಿಯವರು ಈ ನೆಲದ ಕಾನೂನು ಎಲ್ಲರಿಗೂ ಅಷ್ಟೆ. ಶಾಸಕರಿಗೊಂದು, ಜನರಿಗೊಂದು ಇರುವುದಿಲ್ಲವೆಂಬುದನ್ನು ಅರಿತು ಈಗಲಾದರೂ ತಾವುಗಳು ಕ್ಷೇತ್ರದಲ್ಲಿ ನಿರಂತರವಾಗಿ ಇದ್ದು, ಜವಾಬ್ದಾರಿ ವ್ಯಕ್ತಿಯಾಗಿ ತಮ್ಮ ಮಗನನ್ನು ಬಚ್ಚಿಡದೆ ಕಾನೂನಿಗೆ ಗೌರವ ನೀಡಿ ಅವರನ್ನು ನ್ಯಾಯಾಲಯಕ್ಕೆ ಒಪ್ಪಿಸಬೇಕೆಂದು ಸ್ವಾಮಿ ಎಚ್ಚರಿಸಿದರು.