ಪ್ರಬಲ ಭೂಕಂಪನಕ್ಕೆ ಆಫ್ಘಾನ್ ತತ್ತರ : ೮೦೦ ಮಂದಿ ಸಾವು

ಸಾವಿರಾರು ಜನರಿಗೆ ಗಾಯ೧ಡಿ೨

ಕಾಬೂಲ್,ಸೆ.೧ ಆಫ್ಘಾನಿಸ್ತಾನದ ಹಲವು ಭಾಗಗಳಲ್ಲಿ ಇಂದು ಮುಂಜಾನೆ ನಾಲ್ಕು ಬಾರಿ ರಿಕ್ಟರ್ ಮಾಪನದಲ್ಲಿ ೬.೩ರಷ್ಟು ತೀವ್ರತೆಯ ಪ್ರಬಲ ಭೂಕಂಪ ಸಂಭವಿಸಿದೆ. ಇದರ ಪರಿಣಾಮ ೮೦೦ಕ್ಕೂ ಮಂದಿ ಸಾವನ್ನಪ್ಪಿದ್ದು ಸಾವಿರಾರು ಜನರು ಗಾಯಗೊಂಡಿದ್ದಾರೆ. ಮೃತರ ಸಂಖ್ಯೆ ಇನ್ನಷ್ಟು ಏರಿಕೆಯಾಗುವ ಆತಂಕ ಎದುರಾಗಿದೆ.

ಪ್ರಬಲ ಭೂಕಂಪನದಿಂದ ತತ್ತರಿಸುವ ಆಫ್ಘಾನ್ ಕುನಾರ್ ಪ್ರಾಂತ್ಯದ ಮೂರು ಹಳ್ಳಿಗಳು ಸಂರ್ಪೂಣವಾಗಿ ನೆಲಸಮಗೊಂಡಿವೆ. ಅವಶೇಷಗಳಡಿಯಲ್ಲಿ ಸಿಕ್ಕಿ ಹಾಕಿಕೊಂಡವರ ರಕ್ಷಣೆಗಾಗಿ ಪರಿಹಾರ ಕಾರ್ಯಗಳು ಚುರುಕುಗೊಳಿಸಲಾಗಿದೆ ಎಂದು ವಿದೇಶಾಂಗ ಕಚೇರಿ ವಕ್ತಾರರು ತಿಳಿಸಿದ್ದಾರೆ.

ಭೂಕಂಪದ ಕೇಂದ್ರಬಿಂದು ಕಾಬೂಲ್‌ನಿಂದ ಕೇವಲ ೨೩ ಕಿಲೋಮೀಟರ್ ದೂರದಲ್ಲಿದೆ. ಆಫ್ಘಾನಿಸ್ತಾನದಲ್ಲಿ ಸಂಭವಿಸಿದ ಭೂಕಂಪನದ ಪರಿಣಾಮ ನೆರೆಯ ದೇಶಗಳಾಧ ಪಾಕಿಸ್ತಾನ, ತಜಿಕಿಸ್ತಾನ್ ಮತ್ತು ಉತ್ತರ ಭಾರತದ ಕೆಲವು ಭಾಗಗಳಲ್ಲಿ ಆತಂಕದ ವಾತಾವರಣ ಸೃಷ್ಟಿ ಮಾಡಿದೆ.

ಈ ಕಂಪನಗಳು ನಾಲ್ಕು ದೇಶಗಳ ಜನರಲ್ಲಿ ಆತಂಕದ ವಾತಾವರಣ ಸೃಷ್ಟಿ ಮಾಡಿದ್ದು ಭೂಕಂಪನದ ಅನುಭವ ಆಗುತ್ತಿದ್ದಂತೆ ಜನರು ಹಿಡಿ ಜೀವ ಹಿಡಿದು ರಕ್ಷಣೆಗಾಗಿ ಓಡಾಗಿ ಒದ್ದಾಡಿದ ಘಟನೆ ನಡೆದಿದೆ. ಮನೆ ಕಟ್ಟಡದಡಿ ಸಿಲುಕಿರುವ ಮಂದಿಯ ರಕ್ಷಣಾ ಕಾರ್ಯ ಭರದಿದಂದ ಸಾಗಿದೆ, ಗಾಯಾಳುಗಳನ್ನು ಆಸ್ಪತ್ರೆಗೆ ದಾಖಲು ಮಾಡಲಾಗಿದ್ದು ಸಾವು ನೋವಿನ ಸಂಖ್ಯೆ ಮತ್ತಷ್ಟು ಹೆಚ್ಚಾಗುವ ಸಾಧ್ಯತೆ ಇದೆ ಎಂದು ಹೇಳಲಾಗಿದೆ.

ಪಾಕಿಸ್ತಾನದ ಕೆಲವು ಭಾಗಗಳು ಸೇರಿದಂತೆ ಆಫ್ಘಾನಿಸ್ತಾನದ ಪ್ರದೇಶದಾದ್ಯಂತ ಕಂಪನದ ಅನುಭವವಾಗಿದೆ. ಕಂಪನಕ್ಕೆ ಸುಮಾರು ೮೦೦ಕ್ಕೂ ಹೆಚ್ಚು ಜನರು ಸಾವನ್ನಪ್ಪಿದ್ದು ಸುಮಾರು ಸಾವಿರಾರು ಜನರು ಗಾಯಗೊಂಡಿದ್ದಾರೆ. ಸಾವು ನೋವಿನ ಸಂಖ್ಯೆ ಮತ್ತಷ್ಟು ಹೆಚ್ಚಾಗುವ ಸಾಧ್ಯತೆಯಿದೆ.

ರಾಷ್ಟ್ರೀಯ ಭೂಕಂಪಶಾಸ್ತ್ರ ಕೇಂದ್ರದ ಮಾಹಿತಿ ಪ್ರಕಾರ, ಭೂಕಂಪ ಮುಂಜಾನೆ ಸಂಭವಿಸಿದೆ. ಮೊದಲು ೬.೩ ತೀವ್ರತೆಯ ಭೂಕಂಪ ಸಂಭವಿಸಿದೆ, ನಂತರ ೪ ರಿಂದ ೫ರ ನಡುವಿನ ತೀವ್ರತೆಯ ಕಂಪನಗಳು ಸಂಭವಿಸಿವೆ. ಅದರಲ್ಲಿ ೪.೭ ತೀವ್ರತೆಯ ಭೂಕಂಪವು ಸುಮಾರು ೧೪೦ ಕಿ.ಮೀ. ಆಳದಲ್ಲಿ ಸಂಭವಿಸಿದೆ ಎಂದು ಹೇಳಲಾಗಿದೆ.

ಆಫ್ಘಾನಿಸ್ತಾನದಲ್ಲಿ ನಾಲ್ಕು ಭೂಕಂಪನ ಸಂಭವಿಸಿದ್ದು ಅದರಲ್ಲಿ ೪.೭ ತೀವ್ರತೆಯ ಭೂಕಂಪನ ಸಂಭವಿಸಿದೆ, ಬಳಿಕ, ಕ್ರಮವಾಗಿ ೧೪೦ ಕಿ.ಮೀ. ಮತ್ತು ೪೦ ಕಿ.ಮೀ. ಆಳದಲ್ಲಿ ೪.೩ ಮತ್ತು ೫.೦ ತೀವ್ರತೆಯ ಮತ್ತಷ್ಟು ಭೂಕಂಪಗಳು ಸಂಭವಿಸಿವೆ ಎಂದು ಹೇಳಲಾಗಿದೆ.

ಭೂಮಿಯ ಮೇಲ್ಮೈಗೆ ಹತ್ತಿರ ಅಥವಾ ಮಧ್ಯಮ ಆಳದ ಭೂಕಂಪಗಳು ಅಪಾಯಕಾರಿ ಆಳವಾದ ಭೂಕಂಪಗಳು ಸಾಮಾನ್ಯವಾಗಿ ಹೆಚ್ಚು. ಏಕೆಂದರೆ ಇವುಗಳ ಕಂಪನ ತರಂಗಗಳು ಮೇಲ್ಮೈಗೆ ತಲುಪಲು ಕಡಿಮೆ ಸಮಯ ತೆಗೆದುಕೊಳ್ಳುತ್ತವೆ. ಇದರಿಂದ ನೆಲದ ಕಂಪನಗಳು ಹೆಚ್ಚು ತೀವ್ರವಾಗಿ ಮತ್ತು ಕಟ್ಟಡಗಳಿಗೆ ಹೆಚ್ಚು ಹಾನಿ ಮತ್ತು ಸಾವು-ನೋವುಗಳೀಗೆ ಕಾರಣವಾಗಲಿದೆ ಎಂದು ಹೇಳಲಾಗಿದೆ.

ರೆಡ್ ಕ್ರಾಸ್ ಸಂಸ್ಥೆಯ ಪ್ರಕಾರ, ಆಫ್ಘಾನಿಸ್ತಾನದಲ್ಲಿ ಈ ಹಿಂದೆ ಅನೇಕ ಪ್ರಬಲ ಭೂಕಂಪಗಳನ್ನು ಅನುಭವಿಸಿದೆ. ಮತ್ತು ಹಿಂದೂ ಕುಶ್ ಪರ್ವತ ಶ್ರೇಣಿಯು ಭೌಗೋಳಿಕವಾಗಿ ಸಕ್ರಿಯವಾಗಿದೆ, ಪ್ರತಿ ವರ್ಷವೂ ಭೂಕಂಪಗಳು ಸಂಭವಿಸುತ್ತವೆ.

ಆಫ್ಘಾನಿಸ್ತಾನವು ಇಂಡೋ-ಯುರೇಷಿಯನ್ ಟೆಕ್ಟೋನಿಕ್ ಪ್ಲೇಟ್‌ಗಳ ನಡುವಿನ ಹಲವಾರು ಭೂಪದರಗಳ ಮೇಲೆ ಇದೆ, ಮತ್ತು ಹೆರಾಟ್ ಮೂಲಕವೂ ಒಂದು ಭೂಪದರ ಹಾದು ಹೋಗುತ್ತದೆ.

ಆಫ್ಘಾನಿಸ್ತಾನ ಪಾಕಿಸ್ತಾನ, ತಜಿಕಿಸ್ತಾನ್ ಮತ್ತು ಉತ್ತರ ಭಾರತದ ಕೆಲವು ಭಾಗಗಳಲ್ಲಿ ಭೂಕಂಪನ

ಆಫ್ಘಾನಿಸ್ತಾನದ ನಾಲ್ಕು ಕಡೆ ಮುಂಜಾನೆ ಪ್ರಭಲ ಭೂಕಂಪನ

೮೦೦ ಮಂದಿ ಸಾವು, ಸಾವಿರಾರು ಮಂದಿಗೆ ಗಾಯ

ಸಾವು ನೋವಿನ ಸಂಖ್ಯೆ ಹೆಚ್ಚಾಗುವ ಭೀತಿ

ಗಾಯಾಳುಗಳನ್ನು ಆಸ್ಪತ್ರಗೆ ದಾಖಲು