Home ಜಿಲ್ಲೆ ಬೆಂಗಳೂರು ಅಕ್ರಮ ಲೇಔಟ್‌ಗಳಿಗೆ ಕಡಿವಾಣ ಹಾಕಲು ಪಿಡಿಒಗಳಿಗೆ ಅಧಿಕಾರ

ಅಕ್ರಮ ಲೇಔಟ್‌ಗಳಿಗೆ ಕಡಿವಾಣ ಹಾಕಲು ಪಿಡಿಒಗಳಿಗೆ ಅಧಿಕಾರ

ಬಂಗಾರಪೇಟೆ,ಆ,೧೩-ಇತ್ತೀಚಿಗೆ ತಾಲ್ಲೂಕಿನ ನಾನಾ ಗ್ರಾಮಗಳಲ್ಲಿ ಅಕ್ರಮ ಲೇಔಟ್‌ಗಳು ನಿರ್ಮಾಣವಾಗುತ್ತಿದೆ,ಬಡವರು ತಿಳಿಯದೆ ಹಣ ಕೊಟ್ಟು ಮೋಸಹೋಗುತ್ತಿದ್ದಾರೆ ಇದನ್ನ ತಪ್ಪಿಸುವ ಸಲುವಾಗಿ ಕಠಿಣ ಕ್ರಮಗಳನ್ನ ಕೈಗೊಳ್ಳವಂತೆ ಪಿಡಿಓಗಳಿಗೆ ಸೂಚಿಸಲಾಗಿದೆ ಎಂದು ಶಾಸಕ ಎಸ್.ಎನ್.ನಾರಾಯಣಸ್ವಾಮಿ ಹೇಳಿದರು.


ನಗರದ ನಗರಸಭೆಯ ಡಾ.ಬಿ.ಆರ್.ಅಂಬೇಡ್ಕರ್ ಸಭಾಂಗಣದಲ್ಲಿ ಆಡಳಿತ ಅಧಿಕಾರಿಗಳ ತಾಲ್ಲೂಕು ಪಂಚಾಯ್ತಿ ಪಿಡಿಓಗಳ ಮತ್ತು ತಾಲ್ಲೂಕು ಮಟ್ಟದ ಅಧಿಕಾರಿಗಳ ಬರಗಾಲ,ಕುಡಿಯುವ ನೀರಿನ ಸಮಸ್ಯೆಯ ಸಭೆಯನ್ನು ಉದ್ದೇಶಿಸಿ ಮಾತನಾಡಿ,ನಗರವ್ಯಾಪ್ತಿಯ ಮತ್ತು ಪಂಚಾಯ್ತಿವ್ಯಾಪ್ತಿಯಲ್ಲಿ ಕುಡಿಯುವ ನೀರು ಸರ್ವಾಜನಿಕರಿಗೆ ತೊಂದರೆಯಾಗದಂತೆ ಯಾವ ರೀತಿ ಸರಬರಾಜು ಮಾಡಬೇಕು,ಎಲ್ಲೆಲ್ಲಿ ವ್ಯಾತ್ಯಸವಾದರೆ ಯಾವ ರೀತಿಯಲ್ಲಿ ಕ್ರಮತಗೋಬೇಕು ಎಂದು ವಿಶೇಷವಾಗಿ ಪಿಡಿಒಗಳಿಗೆ ಮತ್ತು ಆಡಳಿತ ಅಧಿಕಾರಿಗಳಿಗೆ ಸೂಚಿಸಲಾಯ್ತು.ಯಾವುದೇ ಗ್ರಾಮದಲ್ಲೂ ಸಹ ಕುಡಿಯುವ ನೀರಿನ ಸಮಸ್ಯೆ ಬರಬಾರದು,ಒಂದು ವೇಳೆ ಸಮಸ್ಯೆ ಬಂದರೆ ತಕ್ಷಣ ನಾವುಗಳು ಸ್ವಂದಿಸುತ್ತೇವೆ.ಅನಾಧಿಕೃತವಾಗಿ ಲೇಔಟ್ ಮಾಡುವವರ ವಿರುದ್ಧ ಕ್ರಮಕೈಗೊಳ್ಳುವಂತೆ ಆಯಾ ಪಂ.ವ್ಯಾಪ್ತಿಯ ಪಿಡಿಓಗಳಿಗೆ ಅಧಿಕಾರವನ್ನು ಕೋಟ್ಟಿದ್ದೀನಿ.

ಪಂಚಾಯ್ತಿವ್ಯಾಪ್ತಿಯಲ್ಲಿನ ಯಾವ ಯಾವ ಗ್ರಾಮಗಳಲ್ಲಿ ಯಾರು ಯಾರು ಕಂದಾಯ ಪಾವತಿಸಿಲ್ಲ ಅಂತವರಿಂದ ಕಂದಾಯ ಕಟ್ಟಿಸಿಕೊಳ್ಳಿ ಎಂಬ ವಿಚಾರವನ್ನ ಚರ್ಚೆ ಮಾಡಲಾಯ್ತು.


ನಮ್ಮ ಸರ್ಕಾರದ ಮಹತ್ವರವಾದ ಯೋಜನೆ ಭಾರತ್‌ಜೋಡೋ ಯುವಸೈನ್ಯ ಸಂಸ್ಧಾನೆಯನ್ನ ಮಾಡುತ್ತಿರುವ ವಿಷಯವನ್ನ ಸಹ ಚರ್ಚಿಸಿ ಪ್ರತಿಗ್ರಾಮದಲ್ಲೂ ಯುವಸೈನವನ್ನ ಸ್ಧಾಪನೆ ಮಾಡಿ ಆ ಮುಖಾಂತರ ಸಮಾಜಸೇವೆಯನ್ನ ಮಾಡಲಿಕ್ಕೆ ಹಾಗೂ ಸರ್ಕಾರದ ಎಲ್ಲ ಯೋಜನೆಗಳನ್ನ ಮನೆ ಬಾಗಿಲಿಗೆ ತಲುಪಿಸುವಂತ ಕಾರ್ಯ ಈ ಯುವಸೈನ್ಯದಾಗಿರುತ್ತದೆ.


ಕುಡಿಯುವನೀರಿನ, ಬರಗಾಲದ ಸಮಸ್ಯೆ,ಹೊಸಗ್ರಾಮ ಪಂಚಾಯ್ತಿ ಕಟ್ಟಡಗಳ ಖಾತೆ ಮಾಡುವ ಬಗ್ಗೆ.ಇ ಸ್ವತ್ತುನ್ನ ಮಂಡಿಸುವ ವಿಚಾರ ಇಜಿಪಿ ಇತ್ಯಾದಿ..ಈ ಎಲ್ಲ ವಿಚಾರಗಳ ಬಗ್ಗೆ ಪಿಡಿಒಗಳ ಸಭೆ ಕರೆದು ಚರ್ಚಿಸಿ ಅವರಿಗೆ ಸೂಕ್ತ ಮಾರ್ಗದರ್ಶನ ನೀಡಲಾಗಿದೆ ಎಂದು ತಿಳಿಸಿದರು. ಸಭೆಯಲ್ಲಿ:ನಗರಸಭೆಯ ನೂತನ ಪೌರಾಯುಕ್ತ ಹೆಚ್.ಜಿ.ಜಗರೆಡ್ಡಿ,ಇಓ ರವಿಕುಮಾರ್,ಬಿಒ ಚಂದ್ರಶೇಖರ್, ಹಾಗೂ ತಾಲ್ಲೂಕಿನ ಪಿಡಿಒಗಳು ಹಾಜರಿದ್ದರು.