Home ಜಿಲ್ಲೆ ಕಲಬುರಗಿ ಯಶಸ್ವಿಯಾಗಿ ಜರುಗಿದ ಪೋಷಣ ಮಾಸಾಚರಣೆ

ಯಶಸ್ವಿಯಾಗಿ ಜರುಗಿದ ಪೋಷಣ ಮಾಸಾಚರಣೆ

ಕಲಬುರಗಿ,ಅ.15:ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ ಕಲಬುರಗಿ (ನಗರ) ಯೋಜನೆಯ ವತಿಯಿಂದ “ಪೆÇೀಷಣ್ ಮಾಸಾಚರಣೆ ಸಮಾರೋಪ ಸಮಾರಂಭ”ವು ಕಲಬುರಗಿಯ ಆಳಂದ ರಸ್ತೆಯ ಸರ್ಕಾರಿ ಬಾಲಕಿಯರ ಬಾಲಮಂದಿರದಲ್ಲಿ ಬುಧವಾರ ಅತ್ಯಂತ ಯಶಸ್ವಿಯಾಗಿ ಜರುಗಿತು.

ಕಾರ್ಯಕ್ರಮವನ್ನು ಉದ್ಘಾಟಿಸಿ ಕಲಬುರಗಿ ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆಯ ಜಿಲ್ಲಾ ನಿರೂಪಣಾಧಿಕಾರಿ ಮುರುಗೇಶ್ ಗುಣಾರಿ ಅವರು ಮಾತಮಾಡಿ, ಪೆÇೀಷಣ್ ಮಾಸಾಚರಣೆಯು ಕೇವಲ ಒಂದು ತಿಂಗಳ ಆಚರಣೆಯಾಗಿ ಉಳಿಯಬಾರದು, ಇದು ನಿರಂತರ ಜೀವನಶೈಲಿಯಾಗಬೇಕು. ಪ್ರತಿಯೊಂದು ಮನೆಯಲ್ಲೂ ಪೌಷ್ಟಿಕತೆಯ ಜಾಗೃತಿ ಮೂಡಿಸುವ ಮೂಲಕ ಹಸಿವು ಮತ್ತು ಅಪೌಷ್ಟಿಕ ಮುಕ್ತ ಕಲಬುರಗಿ ಜಿಲ್ಲೆಯನ್ನಾಗಿ ಮಾಡುವುದು ನಮ್ಮ ಗುರಿಯಾಗಿದೆ. ಅಂಗನವಾಡಿ ಕೇಂದ್ರಗಳ ಮೂಲಕ ಸರ್ಕಾರ ನೀಡುತ್ತಿರುವ ಪೌಷ್ಟಿಕ ಆಹಾರ ಪದಾರ್ಥಗಳು ತಳಮಟ್ಟದ ಜನರಿಗೆ ತಲುಪುತ್ತಿರುವುದು ಸಂತಸದ ಸಂಗತಿ. ಇಲಾಖೆಯ ಎಲ್ಲಾ ಹಂತದ ಅಧಿಕಾರಿಗಳು ಮತ್ತು ಸಿಬ್ಬಂದಿಗಳು ಈ ಮಾಸಾಚರಣೆಯ ಉದ್ದಕ್ಕೂ ಹಗಲಿರುಳು ಶ್ರಮಿಸಿ ಗ್ರಾಮೀಣ ಮತ್ತು ನಗರ ಪ್ರದೇಶಗಳಲ್ಲಿ ಯಶಸ್ವಿ ಕಾರ್ಯಕ್ರಮಗಳನ್ನು ಸಂಘಟಿಸಿದ್ದಾರೆ. ತಾಯಂದಿರು ತಮ್ಮ ಮಕ್ಕಳಿಗೆ ಜಂಕ್ ಫುಡ್ ನೀಡುವ ಅಭ್ಯಾಸವನ್ನು ಬಿಟ್ಟು, ಮನೆಯಲ್ಲೇ ತಯಾರಿಸಿದ ಪೌಷ್ಟಿಕ ಆಹಾರವನ್ನು ನೀಡಬೇಕು. ಹೆಣ್ಣು ಮಕ್ಕಳ ಆರೋಗ್ಯ ಮತ್ತು ಶಿಕ್ಷಣಕ್ಕೆ ಹೆಚ್ಚಿನ ಆದ್ಯತೆ ನೀಡಿದಾಗ ಮಾತ್ರ ಸದೃಢ ಸಮಾಜ ನಿರ್ಮಾಣ ಸಾಧ್ಯ ಎಂದು ಒತ್ತಿ ಹೇಳಿದರು.

ಕಲಬುರಗಿ (ಸಂತಾನೋತ್ಪತ್ತಿ ಮತ್ತು ಮಕ್ಕಳ ಆರೋಗ್ಯ ಅಧಿಕಾರಿ) ಆರ್.ಸಿ.ಹೆಚ್. ಅಧಿಕಾರಿ ಸಿದ್ದಣ್ಣ ಪಾಟೀಲ್ ಅವರು ಮಾತನಾಡಿ, ತಾಯಿ ಮತ್ತು ಮಗುವಿನ ಆರೋಗ್ಯವೇ ದೇಶದ ನಿಜವಾದ ಸಂಪತ್ತು. ಗರ್ಭಿಣಿಯರು ಹಾಗೂ ಬಾಣಂತಿಯರು ಸರಿಯಾದ ಸಮಯದಲ್ಲಿ ಪೌಷ್ಟಿಕ ಆಹಾರವನ್ನು ಸೇವಿಸುವುದು ಕಡ್ಡಾಯವಾಗಿದೆ. ಕಲಬುರಗಿ ಜಿಲ್ಲೆಯಲ್ಲಿ ಅಪೌಷ್ಟಿಕತೆಯನ್ನು ಸಂಪೂರ್ಣವಾಗಿ ನಿರ್ಮೂಲನೆ ಮಾಡಲು ಆರೋಗ್ಯ ಇಲಾಖೆ ಮತ್ತು ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ ಜಂಟಿಯಾಗಿ ಶ್ರಮಿಸುತ್ತಿವೆ. ಪ್ರತಿಯೊಂದು ಮಗುವಿಗೂ ಹುಟ್ಟಿದ ಆರು ತಿಂಗಳವರೆಗೆ ಕೇವಲ ತಾಯಿಯ ಹಾಲನ್ನು ಮಾತ್ರ ನೀಡಬೇಕು. ನಂತರ ಪೂರಕ ಪೌಷ್ಟಿಕ ಆಹಾರವನ್ನು ಪ್ರಾರಂಭಿಸಬೇಕು. ರಕ್ತಹೀನತೆ (ಂಟಿemiಚಿ) ತಡೆಗಟ್ಟಲು ಕಬ್ಬಿಣಾಂಶದ ಮಾತ್ರೆಗಳು ಮತ್ತು ಸ್ಥಳೀಯವಾಗಿ ದೊರೆಯುವ ಹಸಿರು ಸೊಪ್ಪು, ತರಕಾರಿಗಳನ್ನು ಆಹಾರದಲ್ಲಿ ಅಳವಡಿಸಿಕೊಳ್ಳಬೇಕು. ಮಗುವಿನ ಆರಂಭಿಕ ದಿನಗಳ ನೂರು ದಿನಗಳ ಪೆÇೀಷಣೆ ಅತ್ಯಂತ ಪ್ರಮುಖವಾಗಿದೆ. ಆರೋಗ್ಯವಂತ ಸಮಾಜದ ನಿರ್ಮಾಣಕ್ಕೆ ತಾಯಂದಿರ ಪಾತ್ರ ಹಿರಿದಾಗಿದ್ದು, ಇಲಾಖೆಯ ಸೌಲಭ್ಯಗಳನ್ನು ಪ್ರತಿಯೊಬ್ಬರೂ ಸದುಪಯೋಗಪಡಿಸಿಕೊಳ್ಳಬೇಕು ಎಂದು ತಿಳಿಸಿದರು.

ಕಲಬುರಗಿ ನಗರ ಶಿಶು ಅಭಿವೃದ್ಧಿ ಯೋಜನಾಧಿಕಾರಿ ಮಲ್ಲಣ್ಣ ದೇಸಾಯಿ ಅವರು, ಮಾತನಾಡಿ, ಕಲಬುರಗಿ ನಗರ ವ್ಯಾಪ್ತಿಯಲ್ಲಿ ಪೆÇೀಷಣ್ ಮಾಸಾಚರಣೆಯನ್ನು ಅಭೂತಪೂರ್ವವಾಗಿ ಆಚರಿಸಲಾಗಿದೆ. ನಗರ ಪ್ರದೇಶದ ಕೊಳಚೆ ಪ್ರದೇಶಗಳು ಹಾಗೂ ಆರ್ಥಿಕವಾಗಿ ಹಿಂದುಳಿದ ವರ್ಗಗಳ ತಾಯಂದಿರಿಗೆ ಪೌಷ್ಟಿಕಾಂಶದ ಮಹತ್ವವನ್ನು ತಿಳಿಸಿಕೊಡುವುದು ನಮ್ಮ ಪ್ರಮುಖ ಆದ್ಯತೆಯಾಗಿದೆ. ಅಂಗನವಾಡಿ ಕಾರ್ಯಕರ್ತೆಯರು ಮನೆ ಮನೆಗೆ ಭೇಟಿ ನೀಡಿ ಗರ್ಭಿಣಿಯರ ನೊಂದಣಿ, ತೂಕ ತಪಾಸಣೆ ಹಾಗೂ ಪೌಷ್ಟಿಕ ಆಹಾರ ವಿತರಣೆಯನ್ನು ಅತ್ಯಂತ ಜವಾಬ್ದಾರಿಯಿಂದ ನಿರ್ವಹಿಸಿದ್ದಾರೆ. ಇಂದಿನ ಸಮಾರೋಪ ಸಮಾರಂಭವು ನಮ್ಮ ಮುಂದಿನ ಜವಾಬ್ದಾರಿಯನ್ನು ಮತ್ತಷ್ಟು ಹೆಚ್ಚಿಸಿದೆ. ನಗರ ಯೋಜನೆಯ ಪ್ರತಿಯೊಂದು ಅಂಗನವಾಡಿ ಕೇಂದ್ರವೂ ಪೌಷ್ಟಿಕತೆಯ ಮಾದರಿ ಕೇಂದ್ರವಾಗಬೇಕು. ಇಲಾಖೆಯ ಯೋಜನೆಗಳನ್ನು ಅತ್ಯಂತ ಪಾರದರ್ಶಕವಾಗಿ ಮತ್ತು ಅರ್ಹ ಫಲಾನುಭವಿಗಳಿಗೆ ತಲುಪಿಸಲು ನಮ್ಮ ಇಡೀ ತಂಡ ಬದ್ಧವಾಗಿದೆ ಎಂದರು.

ಕಾರ್ಯಕ್ರಮದಲ್ಲಿ ಹಿರಿಯ ಮೃಲ್ವಿಚಾರಕಿ ಗೀತಾ ಚೌವ್ಹಾಣ್ ಅವರು ಮಾತನಾಡಿ, ಇಡೀ ತಿಂಗಳು ನಡೆದ ವಿವಿಧ ಚಟುವಟಿಕೆಗಳು, ಪ್ರಭಾತ್ ಫೇರಿಗಳು, ಪೌಷ್ಟಿಕ ಆಹಾರ ಪ್ರದರ್ಶನಗಳು ಹಾಗೂ ಜಾಗೃತಿ ಜಾಥಾಗಳಲ್ಲಿ ನಮ್ಮ ಇಡೀ ಸಿಬ್ಬಂದಿ ವರ್ಗವು ಅತ್ಯಂತ ಸಕ್ರಿಯವಾಗಿ ಪಾಲ್ಗೊಂಡಿದ್ದಾರೆ ಎಂದರು.

ಕಾರ್ಯಕ್ರಮದಲ್ಲಿ ಜಿಲ್ಲೆಯ ಪ್ರಮುಖ ಅಧಿಕಾರಿಗಳು ಹಾಗೂ ಇಲಾಖೆಯ ಸಿಬ್ಬಂದಿಗಳು, ತಾಲೂಕು ಸಂಯೋಜಕರು (ಪೆÇೀಷಣ್ ಅಭಿಯಾನ, ಕಲಬುರಗಿ ನಗರ ಯೋಜನೆ), ಇಲಾಖೆಯ ಎಲ್ಲಾ ಹಿರಿಯ ಮತ್ತು ವಲಯ ಮೇಲ್ವಿಚಾರಕರು ಹಾಗೂ ಕಲಬುರಗಿ ನಗರ ಯೋಜನೆಯ ಅಧಿಕಾರಿಗಳು ಮತ್ತು ಸಿಬ್ಬಂದಿ ವರ್ಗದವರು ಉಪಸ್ಥಿತರಿದ್ದರು. ಕಾರ್ಯಕ್ರಮದಲ್ಲಿ ಹಿರಿಯ ಮೇಲ್ವಿಚಾರಕಿ ಅಶ್ವನಿ ಭದ್ರಶೆಟ್ಟಿ ಸ್ವಾಗತಿಸಿದರು.

ಕಾರ್ಯಕ್ರಮದಲ್ಲಿ ಗರ್ಭಿಣಿ, ತಾಯಂದಿರು ಹಾಗೂ ಮಕ್ಕಳಿಗೆ ಆರೋಗ್ಯ ಶಿಬಿರವನ್ನು ಹಮ್ಮಿಕೊಳ್ಳಲಾಗಿತ್ತು. ಅಂಗನವಾಡಿ ಮಕ್ಕಳಿಂದ ಆಕರ್ಷಕ ನೃತ್ಯ ಪ್ರದರ್ಶನ, ಗಾಯನ ಹಾಗೂ ಪೌಷ್ಟಿಕ ಆಹಾರ ಮತ್ತು ಹಸಿರು ತರಕಾರಿಗಳ ಉಡುಗೆ ತೊಟ್ಟು ನಡೆಸಿದ ವಿಶಿಷ್ಟ ಫ್ಯಾಶನ್ ಶೋ ಎಲ್ಲರ ಗಮನ ಸೆಳೆಯಿತು.