ಪೋಷಣ್ ಅಭಿಯಾನ: ಪೀಳಿಗೆಯ ಆರೋಗ್ಯದ ಹೂಡಿಕೆ : ಗೀತಾ ಪಾಟೀಲ

ಇಂಡಿ: ಸೆ.10:ಪೆÇೀಷಣ್ ಅಭಿಯಾನವು ಕೇವಲ ಯೋಜನೆಯಲ್ಲ, ಭವಿಷ್ಯದ ಪೀಳಿಗೆಯ ಆರೋಗ್ಯದ ಹೂಡಿಕೆ ಎಂದು ವಿಜಯಪುರ ಜಿಲ್ಲಾ ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆಯ ಜಿಲ್ಲಾ ಮಿಷನ್ ಸಂಯೋಜಕಿ ಗೀತಾ ಪಾಟೀಲ ಹೇಳಿದ್ದರು.

ಮಂಗಳವಾರ ತಡವಲಗಾ ಗ್ರಾಮದ 5ನೇ ಅಂಗನವಾಡಿ ಕೇಂದ್ರದ ಆವರಣದಲ್ಲಿ ನಡೆದ ಪೆÇೀಷಣ್ ಅಭಿಯಾನ ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದ ಅವರು, ಈ ಅಭಿಯಾನವನ್ನು ಪ್ರಧಾನಮಂತ್ರಿ 2018ರ ಮಾರ್ಚ್ 8ರಂದು ಚಾಲನೆ ನೀಡಿದ್ದರು. ಆರೋಗ್ಯ, ಸ್ವಾಸ್ಥ್ಯ ಮತ್ತು ರೋಗನಿರೋಧಕ ಶಕ್ತಿಯನ್ನು ಬೆಳೆಸಲು, ಅಪೌಷ್ಠಿಕತೆಯ ವಿರುದ್ಧ ಹೋರಾಡಲು ಇದು ಮಹತ್ವದ ಹೆಜ್ಜೆ ಎಂದು ತಿಳಿಸಿದರು.

ವಲಯ ಅಂಗನವಾಡಿ ಮೇಲ್ವಿಚಾರಕಿ ತೃಪ್ತಿ ತಿಳಿಗೊಳ ಮಾತನಾಡಿ, ಗ್ರಾಮದಲ್ಲಿ ವಿವಿಧ ಅಂಗನವಾಡಿಗಳ ಗರ್ಭಿಣಿಯರನ್ನು ಸೇರಿಸಿ ಸಾಂಪ್ರದಾಯಿಕ ಉಡಿ ತುಂಬುವ ಹಾಗೂ ಸಿಂಮತ್ ಕಾರ್ಯಕ್ರಮ ಆಯೋಜಿಸಿರುವುದು ವಿಶೇಷವೆಂದರು. ಜೊತೆಗೆ ಅಂಗನವಾಡಿ ಮಕ್ಕಳ ಹುಟ್ಟುಹಬ್ಬವನ್ನು ಹಣ್ಣು-ಹಂಪಲು, ತರಕಾರಿ, ಸೋಪು, ದ್ವಿದಾನ್ಯ ಕಾಳುಗಳೊಂದಿಗೆ ಹಬ್ಬದ ಸಂಭ್ರಮದಲ್ಲಿ ಆಚರಿಸಲಾಯಿತು.

ಕಾರ್ಯಕ್ರಮದಲ್ಲಿ ತಡವಲಗಾ ಗ್ರಾಮ ಪಂಚಾಯಿತಿ ಅಧ್ಯಕ್ಷೆ ಸುನಂದಾ ವಾಲಿಕಾರ ಕಾರ್ಯಕ್ರಮ ದ ಅಧ್ಯಕ್ಷತೆ ವಹಿಸಿದ್ದರು. ಗ್ರಾಮ ಪಂಚಾಯಿತಿ ಅಭಿವೃದ್ಧಿ ಅಧಿಕಾರಿ ಮಂಜುನಾಥ ಡೊಳ್ಳಿ, ಅಂಗನವಾಡಿ ನೌಕರರ ಸಂಘದ ತಾಲೂಕು ಅಧ್ಯಕ್ಷೆ ಭಾರತಿ ವಾಲಿ, ಆರೋಗ್ಯ ಇಲಾಖೆಯ ಅಧಿಕಾರಿ ನೀಲಮ್ಮ ಅವಟಿ, ಪೆÇೀಷಣ್ ಅಭಿಯಾನ ಇಂಡಿ ತಾಲೂಕು ಸಂಯೋಜಕಿ ಸಹನಾ ಶೇಖ್ ಸೇರಿದಂತೆ ಹಲವರು ಹಾಜರಿದ್ದರು.