ನಿಜಶರಣ ಅಂಬಿಗರ ಚೌಡಯ್ಯನ ಭಾವಚಿತ್ರ ಮೆರವಣಿಗೆ

ಕಾಳಗಿ : ಜ.15:ಪಟ್ಟಣದ ಶ್ರೀ ನಿಜಶರಣ ಅಂಬಿಗರ ಚೌಡಯ್ಯ ಜಾತ್ರೆಯ ಅಂಗವಾಗಿ ಬುಧವಾರ ಶ್ರೀ ನಿಜಶರಣ ಅಂಬಿಗರ ಚೌಡಯ್ಯನವರ ಭವ್ಯ ಮೆರವಣಿಗೆ ಅದ್ದೂರಿಯಾಗಿ ನಡೆಯಿತು.

ಭಕ್ತರ ಜಯಘೋಷ, ವಾದ್ಯಮೇಳ ಹಾಗೂ ಧಾರ್ಮಿಕ ವೈಭವದೊಂದಿಗೆ ಮೆರವಣಿಗೆ ಪಟ್ಟಣದ ಪ್ರಮುಖ ಬೀದಿಗಳಲ್ಲಿ ಸಂಚರಿಸಿತು.

ಶ್ರೀ ನಿಜಶರಣ ಅಂಬಿಗರ ಚೌಡಯ್ಯ ದೇವಸ್ಥಾನದಿಂದ ಆರಂಭವಾದ ಮೆರವಣಿಗೆಗೆ ಶ್ರೀ ನೀಲಕಂಠ ಮರಿದೇವರು ಚಾಲನೆ ನೀಡಿದರು. ಮೆರವಣಿಗೆ ಉದ್ದಕೂ ಭಕ್ತರು ದೇವರ ದರ್ಶನ ಪಡೆದು ಪೂಜೆ ಸಲ್ಲಿಸಿದರು.

ಈ ಸಂದರ್ಭದಲ್ಲಿ ದೇವಸ್ಥಾನದ ಗೌರವಧ್ಯಕ್ಷರಾದ ಭೀಮರಾಯ ಮಲಘಾಣ, ಅಧ್ಯಕ್ಷ ಪ್ರಸಾದ ರಟಕಲ್, ಮುಖಂಡರಾದ ನೀಲಕಂಠ ಗುತ್ತೇದಾರ, ಶಿವಶರಣಪ್ಪ ಕಮಲಾಪುರ, ಪ್ರಶಾಂತ ಕದಂ, ರಾಘವೇಂದ್ರ ಗುತ್ತೇದಾರ, ರಮೇಶ ಕಿಟ್ಟದ, ಗುರುರಾಜ ಮದ್ದೂರ, ದತ್ತು ಗುತ್ತೇದಾರ, ರಾಜಕುಮಾರ ರಾಜಾಪುರ, ಜಗನ್ನಾಥ ಚಂದನಕೇರಿ, ಪರಮೇಶ್ವರ ಮಡಿವಾಳ, ಶೇಖರ ಪಾಟೀಲ, ಪ್ರಭಾಕರ ರಟಕಲ್, ಶಿವಶರಣಪ್ಪ ಗುತ್ತೇದಾರ, ಅನಿಲಕುಮಾರ ಪಾಟೀಲ, ವಿಠ್ಠಲ್ ಸೇಗಾಂವಕರ, ರವಿದಾಸ ಪತಂಗೆ, ಸುನಿಲ ಕಡಬೂರ, ಜಗು ಪಾಟೀಲ, ರೇವಣಸಿದ್ಧ ಕಲಶೆಟ್ಟಿ, ಶೇಖರ ಮಾನಶೆಟ್ಟಿ, ಬಲರಾಮ ವಲ್ಲ್ಯಾಪುರ, ಬಾಬು ನಾಟಿಕಾರ, ರಾಹುಲ ಚಿತ್ತಾಪುರ, ಗಣೇಶ ಸಿಂಗಶೆಟ್ಟಿ, ಸೇರಿದಂತೆ ಅನೇಕ ಗಣ್ಯರು, ಭಕ್ತಾದಿಗಳು ಭಾಗವಹಿಸಿದ್ದರು.