Home ಜಿಲ್ಲೆ ಅರಕೇರಿಯ ಸರ್ಕಾರಿ ಪ್ರೌಢಶಾಲೆಯ ಪೂಜಾ ಕೋಳೇಕರ ರಾಜ್ಯಮಟ್ಟದ ಅಥ್ಲೆಟಿಕ್ಸ್ಗೆ ಆಯ್ಕೆ

ಅರಕೇರಿಯ ಸರ್ಕಾರಿ ಪ್ರೌಢಶಾಲೆಯ ಪೂಜಾ ಕೋಳೇಕರ ರಾಜ್ಯಮಟ್ಟದ ಅಥ್ಲೆಟಿಕ್ಸ್ಗೆ ಆಯ್ಕೆ

ಸಂಜೆವಾಣಿ ವಾರ್ತೆ,
ವಿಜಯಪುರ, ಅ. ೨೯: ನಗರದ ಡಾ. ಬಿ.ಆರ್. ಅಂಬೇಡ್ಕರ್ ಜಿಲ್ಲಾ ಕ್ರೀಡಾಂಗಣದಲ್ಲಿ ನಡೆದ ಪ್ರಾಥಮಿಕ ಹಾಗೂ ಪ್ರೌಢಶಾಲೆಗಳ ಜಿಲ್ಲಾ ಮಟ್ಟದ ಅಥ್ಲೆಟಿಕ್ಸ್ ಕ್ರೀಡಾಕೂಟದಲ್ಲಿ ಅರಕೇರಿ ಸರ್ಕಾರಿ ಪ್ರೌಢಶಾಲೆಯ ವಿದ್ಯಾರ್ಥಿಗಳು ಉತ್ತಮ ಸಾಧನೆ ಮಾಡಿದ್ದಾರೆ.
೮೦೦ ಮೀಟರ್ ಓಟದ ಸ್ಪರ್ಧೆಯಲ್ಲಿ ಶಾಲೆಯ ವಿದ್ಯಾರ್ಥಿನಿ ಕುಮಾರಿ ಪೂಜಾ ಕೋಳೇಕರ ದ್ವಿತೀಯ ಸ್ಥಾನ ಪಡೆದು, ಬೆಂಗಳೂರಿನ ಕಂಠೀರವ ಕ್ರೀಡಾಂಗಣದಲ್ಲಿ ನಡೆಯಲಿರುವ ರಾಜ್ಯಮಟ್ಟದ ಕ್ರೀಡಾಕೂಟಕ್ಕೆ ಆಯ್ಕೆಯಾಗಿದ್ದಾಳೆ.
ಇದೇ ಕ್ರೀಡಾಕೂಟದಲ್ಲಿ ಶ್ರೀಮಣಿ ಪುಕಾಳೆ ೪೦೦ ಮೀಟರ್ ಹರ್ಡಲ್ಸ್ನಲ್ಲಿ ತೃತೀಯ, ಐಶ್ವರ್ಯ ಉಕ್ಕಲಿ ತ್ರಿವಿಧ ಜಿಗಿತದಲ್ಲಿ ತೃತೀಯ, ಬಳೋಗಿಸಿದ್ಧ ಒಡೆಯರ್ ಹಾಗೂ ಪೂಜಾ ಹೆಗಡೆ ಪೋಲ್ ವಾಲ್ಟ್ನಲ್ಲಿ ತೃತೀಯ ಹಾಗೂ ಸಾಗರ ಸಿಂಧೆ ಮತ್ತು ಆಶಾ ಕೊಂಬಿನ ಹ್ಯಾಮರ್ ಥ್ರೋ ಸ್ಪರ್ಧೆಯಲ್ಲಿ ತೃತೀಯ ಸ್ಥಾನ ಪಡೆದಿದ್ದಾರೆ.
ವಿದ್ಯಾರ್ಥಿಗಳ ಸಾಧನೆಗೆ ಶಾಲಾ ಎಸ್‌ಡಿಎಂಸಿ ಅಧ್ಯಕ್ಷ ಎಸ್.ಎಂ. ಶಿರಾಳಶೆಟ್ಟಿ, ಸದಸ್ಯರಾದ ಪೀರಪಟೇಲ ಪಾಟೀಲ, ಶಿವಾನಂದ ದಳವಾಯಿ, ಗ್ರಾಮಸ್ಥರು, ಮುಖ್ಯೋಪಾಧ್ಯಾಯ ಎಲ್.ಟಿ. ಮುಲ್ಲಾ, ತಂಡದ ಮುಖ್ಯಸ್ಥರಾದ ವಿನಾಯಕ ಕಾಖಂಡಕಿ, ವಿ.ಕೆ. ವಂದನಾ ಹಾಗೂ ಸಿಬ್ಬಂದಿ ವರ್ಗ ಹರ್ಷ ವ್ಯಕ್ತಪಡಿಸಿ, ವಿದ್ಯಾರ್ಥಿಗಳಿಗೆ ಅಭಿನಂದನೆ ಸಲ್ಲಿಸಿದ್ದಾರೆ.