
ಸಂಜೆ ವಾಣಿ ವಾರ್ತೆ
ಜಮಖಂಡಿ:ಫೆ.೧:ಸಮಾಜದಲ್ಲಿ ಪೋಲಿಸ್ ಸೇವೆ ತುಂಬಾ ಅತ್ಯನ್ನುತ ವಾಗಿರುವ ಸೇವೆ ಅದೃಷ್ಟ ಹೊಂದಿರುವರಿಗೆ ಮಾತ್ರ ಪೋಲಿಸ್ ಹುದ್ದೆಗೆ ಭರ್ತಿಯಾಗುವ ಅವಕಾಶ ಜಾಸ್ತಿ ಎಂದು ಡಿ.ವಾಯ್.ಎಸ್.ಪಿ ಸಯ್ಯದ ರೋಷನ್ ಜಮೀರ ಹೇಳಿದರು
ಜಮಖಂಡಿ ಗ್ರಾಮೀಣ ಪೋಲಿಸ್ ಠಾಣೆ ಆವರಣದಲ್ಲಿ ಶನಿವಾರ ನಡೆದ ಗ್ರಾಮೀಣ ಠಾಣೆ ಅಪರಾಧ ವಿಭಾಗದ ಪಿ.ಎಸೈ.ಎಚ್.ಎಮ್.ಹಾದಿಮನಿ ಅವರ ಸೇವಾ ವಯೋ ನಿವೃತ್ತಿ ಸಮಾರಂಭದಲ್ಲಿ ಮಾತನಾಡಿದ ಅವರು ಇತರೆ ಇಲಾಖೆಗಳಿಗೆ ಹೋಲಿಸಿದರೆ ಪೋಲಿಸ್ ಇಲಾಖೆ ಹಗಲು ರಾತ್ರಿ ಎನ್ನದೆ ಹೆಚ್ಚಿನ ಪರಿಶ್ರಮ ಪಡುವ ಇಲಾಖೆ. ಬೇರೆಬೇರೆ ಕಡೆ ವರ್ಗಾವಣೆ ಹೊಂದುವದು ಮತ್ತು ಸೋತುತ್ರವಾಗಿ ಸುಧೀರ್ಘ ಕಾಲ ಸೇವೆ ಸಲ್ಲಿಸಿ ನಿವೃತ್ತಿಯಾಗುವದು ಅದು ನಮಗೆ ಹೆಮ್ಮೆಯ ದಿನ ಎಂದು ಹೇಳಿದರು.
ಎಂತಹ ಕಸ್ಟಕರ ಪರಿಸ್ಥಿತಿಯಲ್ಲಿ ಕೂಡ ತಮ್ಮ ಸಿಂಪತೆ ಕಳಿದುಕೊಳ್ಳದೆ ಶಾಂತಿಯುತ ವಾಗಿ ತಮ್ಮ ಕರ್ತವ್ಯವನ್ನು ಎದುರಿಸುತ್ತಾರೆ ಅವರೆ ಒಬ್ಬ ಒಳ್ಳೆಯ ಅಧಿಕಾರಿ.ನಮ್ಮ ವ್ಯಾಪ್ತಿಯಲ್ಲಿ ಮುಂದೆ ಆಗುವಂತಹ ಘಟನೆಗಳನ್ನು ಅರಿತು ಅದಕ್ಕೆ ಅಗತ್ಯ ಕ್ರಮಗಳನ್ನು ಕೈಗೊಂಡರೆ ಅದೆ ಒಳ್ಳೆಯ ಕರ್ತವ್ಯ. ಎಂತಹ ಕಷ್ಟಕರ ಸಂಧರ್ಭ ಬಂದರು ಕೊಡ ಹೆದರದೆ ಚಾಕಚ್ಯಕತೆಯಿಂದ ನಿರ್ವಹಣೆ ಮಾಡಿ ತಿಳಿ ಗೊಳಿಸುವ ವಾತಾವರಣವನ್ನು ಮಾಡಬೇಕಾಗುತ್ತದೆ ಅಂತಹ ಶಾಂತಿ ಸಭಾವದ ನಿಷ್ಠಾವಂತ ಹಾಗೂ ನೇರವಾಗಿ ಹೆಳುವ ವ್ಯಕ್ತಿ ಹೊಸಮನಿ ಅವರು ಸುಧಿರ್ಘವಾಗಿ ೩೩ ವರ್ಷ ೮ ತಿಂಗಳ ಸೇವೆಯನ್ನು ಸಲ್ಲಿಸಿ ಇಂದು ನಿವೃತ್ತಿ ಹೊಂದಿದ್ದಾರೆ ಅವರ ಜೀವನ ಸುಖಕರವಾಗಿ ಸಾಗಲಿ ಎಂದರು
ಪೋಲಿಸರ ಮಕ್ಕಳು ಒಳ್ಳೆಯ ಹುದ್ದೆಗಳಲ್ಲಿ ಇರಬೇಕು ಬಹಳ ಜನ ಪೋಲಿಸರ ಮಕ್ಕಳು ವಿವಿಧ ಹುದ್ದೆಯಲ್ಲಿದ್ದಾರೆ.ಈ ಸಮಾಜದಲ್ಲಿ ಹೆಚ್ವಿನಮಟ್ಟದಲ್ಲಿ ಕರ್ತವ್ಯ ನೀರ್ವಹಿಸುತ್ತೆವೆ ಆದರೆ ಮಕ್ಕಳ ಕಾಳಜಿ ವಹಿಸುವದು ತುಂಬಾ ಕಡಿಮೆ ಆದರಿಂದ ಮಕ್ಕಳ ಶಿಕ್ಷಣದ ಬಗ್ಗೆ ಒತ್ತು ನೀಡಿ ಇವತ್ತಿನ ದಿವಸ ಶಿಕ್ಷಣದ ಬಗ್ಗೆ ಯಾರು ಒತ್ತು ನೀಡುತ್ತಾರೆ ಅವರು ಸಮಾಜದಲ್ಲಿ ಮುಂದೆ ಬರುತ್ತಾರೆ ಎಂದರುಗ್ರಾಮಿಣ ಠಾಣೆ ಪಿ.ಎಸೈ.ಗಂಗಾಧರ ಪೂಜೆರಿ ಹಾಗೂ ಶಹರ ಠಾಣೆ ಪಿ.ಎಸೈ.ಅನೀಲ ಕುಂಬಾರ ಮಾತನಾಡಿದರು ಅರ್ಜುನ ನ್ಯಾಮಗೌಡ ಸ್ವಾಗತಿಸಿ ವಂದಿಸಿದರು























