ಪೊಲೀಸ್ ದಾಳಿ: 18.98 ಲಕ್ಷ ಮೌಲ್ಯದ 55 ಕ್ವಿಂಟಾಲ್ ಅಕ್ರಮ ಪಡಿತರ ಅಕ್ಕಿ ವಶ

ಕಲಬುರಗಿ,ಡಿ.6: ಎರಡು ಪ್ರತ್ಯೇಕ ಪ್ರಕರಣಗಳಲ್ಲಿ ಅಕ್ರಮವಾಗಿ ಅನ್ಯ ರಾಜ್ಯಕ್ಕೆ ಪಡಿತರ ಅಕ್ಕಿಸಾಗಿಸುತ್ತಿದ್ದ ವಾಹನಗಳ ಮೇಲೆ ದಾಳಿ ನಡೆಸಿದ ನಗರ ಪೊಲೀಸರು 18.98 ಲಕ್ಷ ರೂ ಮೌಲ್ಯದ 55 ಕ್ವಿಂಟಾಲ್ ಅಕ್ಕಿ ವಶ ಪಡಿಸಿಕೊಂಡಿದ್ದಾರೆ.
ಕಲಬುರಗಿ ನಗರದ ಸಬ್ ಅರ್ಬನ್ ಪೆÇಲೀಸ ಠಾಣೆ ವ್ಯಾಪ್ತಿಯ ಅಳಂದ ಚೆಕ್ ಪೆÇೀಸ್ಟ್ ಹತ್ತಿರ ಆರೋಪಿ ಬೀದರ ಜಿಲ್ಲೆ ಹುಮನಾಬಾದ್ ತಾಲೂಕಿನ ದುಬಲಗುಂಡಿ ನಿವಾಸಿ ಚಾಲಕ ನಸಿರೋದ್ದೀನ್ ಪಾಷಾಮೀಯಾ ಚಿದರಿ( 38 ) ಎಂಬಾತನನ್ನು ವಶಕ್ಕೆ ಪಡೆದು ವಿಚಾರಣೆಗೊಳಪಡಿಸಿದಾಗ ಆರೋಪಿ ಅಕ್ಕಿ ಚೀಲಗಳು ಮಲ್ಲಿಕಾರ್ಜುನ ಖೇಮಜಿ ಹಾಗೂ ಇತರರಿಗೆ ಸಂಬಂಧಿಸಿದ್ದು ಎಂದು ತಿಳಿಸಿದ್ದು ಅಕ್ಕಿ ಚೀಲಗಳನ್ನು ಗುಜರಾತ ರಾಜ್ಯದ ಅಹ್ಮದಬಾದಗೆ ಸಾಗಿಸುತ್ತಿರುವುದಾಗಿ ತಿಳಿಸಿದ್ದಾನೆ.
ಇನ್ನೊಂದು ಪ್ರಕರಣದಲ್ಲಿ ಕಲಬುರಗಿ ನಗರದ ವಿಶ್ವವಿದ್ಯಾಲಯ ಪೆÇಲೀಸ್ ಠಾಣೆ ವ್ಯಾಪ್ತಿಯ ಸೇಡಂ ರಸ್ತೆ ಗೀತಾ ನಗರದ ಬಳಿ ದಾಳಿ ನಡೆಸಿ ಆರೋಪಿತನಾದ ಚಾಲಕ ಬೀದರ ಜಿಲ್ಲೆ ಹುಮನಾಬಾದ್ ತಾಲೂಕಿನ ದುಬಲಗುಂಡಿ ನಿವಾಸಿ ರಾಜು ನರಸಿಂಗರಾವ್ ( 28 )ಎಂಬಾತನನ್ನು ವಶಕ್ಕೆ ಪಡೆದು ವಿಚಾರಣೆಗೊಳಪಡಿಸಿದಾಗ ಆರೋಪಿತನು ಅಕ್ಕಿ ಚೀಲಗಳು ದುಬಲಗುಂಡಿಯ ಜಾಕೀರ ಪಾಷಾಮೀಯಾ ಚಿದ್ರಿ ಎಂಬುವವರಿಗೆ ಸಂಬಂಧಿಸಿದ್ದು ಎಂದು ತಿಳಿಸಿದ್ದು ಅಕ್ಕಿ ಚೀಲಗಳನ್ನು ಯಾದಗಿರಿಯಿಂದ ಮಹಾರಾಷ್ಟ್ರ ಹಾಗೂ ಗುಜರಾತ ರಾಜ್ಯಕ್ಕೆ ಸಾಗಿಸುತ್ತಿರುವುದಾಗಿ ತಿಳಿಸಿದ್ದಾನೆ.
ಪೆÇಲೀಸ್ ಆಯುಕ್ತ ಡಾ. ಶರಣಪ್ಪ ಎಸ್.ಡಿ. ಅವರ ನಿರ್ದೇಶನದಂತೆ, ಉಪ ಪೊಲೀಸ್ ಆಯುಕ್ತರಾದ ಕನ್ನಿಕಾ ಸಿಕ್ರಿವಾಲ್, ಪ್ರವೀಣ ಹೆಚ್. ನಾಯಕ್, ಸಹಾಯಕ ಪೊಲೀಸ್ ಆಯುಕ್ತ ಬಸವೇಶ್ವರ ಹೀರಾ ಅವರ ಮಾರ್ಗದರ್ಶನದಲ್ಲಿ ಸಿಬ್ಬಂದಿಯವರಾದ ಶಂಕರಲಿಂಗ, ಮಹ್ಮದ್ ಗೌಸ್, ಬೀರಣ್ಣ, ಲಕ್ಷ್ಮಿಕಾಂತ ,ದತ್ತಾತ್ರೇಯ,ಜೈಭೀಮ ಅವರನ್ನೊಳಗೊಂಡ ತಂಡವು ದಾಳಿಯಲ್ಲಿ ಭಾಗವಹಿಸಿತ್ತು.ದಾಳಿಯನ್ನು ಯಶಸ್ವಿಯಾಗಿ ಕೈಗೊಂಡ ಅಧಿಕಾರಿ ಮತ್ತು ಸಿಬ್ಬಂದಿಯವರನ್ನು ಪೆÇಲೀಸ್ ಆಯುಕ್ತ ಡಾ.ಶರಣಪ್ಪ ಎಸ್.ಡಿ. ಶ್ಲಾಘಿಸಿದ್ದಾರೆ