
ಚಿಕ್ಕಬಳ್ಳಾಪುರ, ಜೂ.೪-ಚಿಕ್ಕಬಳ್ಳಾಪುರ ನಗರ ಪೊಲೀಸ್ ಠಾಣೆ ವ್ಯಾಪ್ತಿ ರಾಷ್ಟ್ರೀಯ ಹೆದ್ದಾರಿ ೪೪ ಬಿ.ಬಿ. ರಸ್ತೆಯ ಜನನಿ ಬಿಡ ಅಂಗಡಿಯಿಂದ ಗ್ರೌಂಡ್ ಫ್ಲೋರ್ ನಲ್ಲಿ ವ್ಯಕ್ತಿ ಒಬ್ಬನ ಶವ ಕಂಡುಬಂದಿದ್ದು ಕದ್ರಿ ಪ್ರಕರಣ ನಗರ ಪೊಲೀಸ್ ಠಾಣೆಯಲ್ಲಿ ದಾಖಲಾಗಿ ನಗರ ಪೊಲೀಸರು ತನಿಖೆ ಆರಂಭಿಸಿದ್ದಾರೆ.
ಈ ವ್ಯಕ್ತಿಯನ್ನು ಬಹುಶಹ ರಾತ್ರಿ ಯಾರೋ ಅಪರಿಚಿತ ದುಷ್ಕರ್ಮಿಗಳು ತಲೆಗೆ ಬಲವಾದ ಏಟು ಕೊಟ್ಟ ಕೊಲೆ ಮಾಡಿದ್ದು ಮೃತನ ತಲೆ ಭಾಗ ರಕ್ತ ಸಿಗ್ತಾವಾಗಿರುವುದು ಸ್ಥಳದಲ್ಲಿ ಕಂಡು ಬಂದಿದೆ.
ಬೆಳ್ಳಂ ಬೆಳಗ್ಗೆ ವಿಷಯ ತಿಳಿಯುತ್ತಿದ್ದಂತೆಯೇ ಸಾವಿರಾರು ಮಂದಿ ನಾಗರಿಕರು ಕುತೂಹಲದಿಂದ ಮೃತ ವ್ಯಕ್ತಿಯನ್ನು ನೋಡಲು ಗುಂಪು ಗುಡಿದ್ದು ಪೊಲೀಸರು ಪರಿಸ್ಥಿತಿ ನಿಯಂತ್ರಿಸಲು ಹಾಗೂ ರಾಷ್ಟ್ರೀಯ ಹೆದ್ದಾರಿ ಬಿಬಿ ರಸ್ತೆ ಆಂಧ್ರ ಸಂಪರ್ಕದ ಬೆಂಗಳೂರು ಮಾರ್ಗ ಮಧ್ಯೆ ಓಡಾಡುವ ವಾಹನಗಳನ್ನು ಸರವಾಗ ಸರಗವಾಗಿ ಸಂಚರಿಸುವ ವ್ಯವಸ್ಥೆ ಕಲ್ಪಿಸಲು ಹರಸಾಹಸ ಪಡುತ್ತಿರುವುದು ಕಂಡು ಬಂದಿದೆ.
ಅತ್ಯಂತ ಜನ ರಾಷ್ಟ್ರೀಯ ಹೆದ್ದಾರಿ ರಸ್ತೆ ಇದಾಗಿದ್ದು ಇಂತಹ ಸ್ಥಳದಲ್ಲಿ ಕೊಲೆ ನಡೆದಿರುವುದು ನಾಗರಿಕರು ಹುಬ್ಬೇರಿಸುವಂತೆ ಮಾಡಿದೆ.
ಸ್ಥಳಕ್ಕೆ ಹಿರಿಯ ಪೊಲೀಸ್ ಅಧಿಕಾರಿಗಳು ಶ್ವಾನದಳ ಬೆಳ್ಳಚಿ ತಜ್ಞರು ಆಗಮಿಸಿ ಪ್ರಕರಣವನ್ನು ದಾಖಲಿಸಿಕೊಂಡು ಮುಂದಿನ ತನಿಕೆ ಕೈಗೊಂಡಿರುತ್ತಾರೆ.