ಶಿಡ್ಲಘಟ್ಟ.ಅ೧೧:ನಿಮ್ಮ ಬುದ್ದಿವಂತ ಮಕ್ಕಳೆ ಇಂದು ಮೊಬೈಲ್ ಫೋನ್‌ಗಳನ್ನು ಅತಿಯಾಗಿ ಬಳಸುತ್ತಿರುವುದರಿಂದ ದಾರಿ ತಪ್ಪುತಿದ್ದಾರೆ ಇದರ ಬಗ್ಗೆ ಪೋಷಕರು ಜಾಗರೂಕರಾಗಬೇಕು ಎಂದು ಎಚ್ಚರಿಕೆ ನೀಡಿದರು. ಆನ್ ಲೈನ್ ಬೆಟ್ಟಿಂಗ್ ಹಾಗೂ ಮಾದಕವಸ್ತುಗಳ ಪ್ರಭಾವದಿಂದ ಮಕ್ಕಳು ದಾರಿ ತಪ್ಪುತ್ತಿರುವುದರಿಂದ ಅವರಿಗೆ ಉತ್ತಮ ವಿದ್ಯಾಭ್ಯಾಸ ಹಾಗೂ ನೈತಿಕ ಮಾರ್ಗದರ್ಶನ ನೀಡಬೇಕೆಂದು ನಗರ ಪೋಲಿಸ್ ಠಾಣೆ ಪಿಎಸ್‌ಐ ವೇಣುಗೋಪಾಲ್ ಜಾಗೃತಿ ಮೂಡಿಸಿದರು.
ನಗರದ ೧೧ನೇ ವಾರ್ಡ್‌ನಲ್ಲಿ ಸಾರ್ವಜನಿಕರ ಸಾಮಾಜಿಕ ಭದ್ರತಾ ವಿಚಾರದಲ್ಲಿ ಎಸ್ ಪಿ ಕುಶಾಲ್ ಚೌಕ್ಸೆ, ಡಿವೈ ಎಸ್ ಪಿ ಮುರಳೀಧರ್ ಮತ್ತು ಶಿಡ್ಲಘಟ್ಟ ವೃತ್ತ ನಿರೀಕ್ಷಕ ಶ್ರೀನಿವಾಸ್ ನೇತೃತ್ವದಲ್ಲಿ ಅನೇಕ ಜಾಗ್ರತೆಯ ಅರಿವು ಮೂಡಿಸುವ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳಲಾಗಿದ್ದು ಅದರ ಅಡಿಯಲ್ಲಿ ಪೊಲೀಸ್ ಇಲಾಖೆಯ ಸಹಯೋಗದಲ್ಲಿ ಮನೆ ಮನೆಗೆ ಪೊಲೀಸ್ ಎಂಬ ಉತ್ತಮ ಕಾರ್ಯಕ್ರಮ ಆಯೋಜಿಸಲಾಯಿತು. ಈ ಕಾರ್ಯಕ್ರಮದಲ್ಲಿ ಪೊಲೀಸ್ ಇಲಾಖೆಯ ಅಧಿಕಾರಿಗಳು, ಪೌರಾಯುಕ್ತೆ ಹಾಗೂ ವಾರ್ಡ್ ಸದಸ್ಯರು ಭಾಗವಹಿಸಿದರು.
ಮಹಿಳೆಯರು ರಂಗೋಲಿ ಹಾಕುವಾಗ ಅಥವಾ ಮಾರುಕಟ್ಟೆಗೆ ತೆರಳುವ ಸಂದರ್ಭಗಳಲ್ಲಿ ವಡವೆ ಕಳ್ಳತನದ ಪ್ರಕರಣಗಳು ಹೆಚ್ಚಾಗಿರುವುದರಿಂದ ಎಚ್ಚರಿಕೆ ವಹಿಸಬೇಕು ಹಾಗೂ ಹೆಣ್ಣು ಮಕ್ಕಳನ್ನು ಚುಡಾಯಿಸುವುದು, ಅಪ್ರಾಪ್ತ ವಯಸ್ಸಿನಲ್ಲಿ ಮದುವೆ ಮಾಡುವುದು, ಡ್ರಗ್ಸ್ ಬಳಕೆ ಇತ್ಯಾದಿ ಅಪರಾಧಗಳು ನಡೆದರೆ ಅಥವಾ ಕಂಡು ಬಂದರೆ ತಕ್ಷಣ ೧೧೨ ಗೆ ಕರೆ ಮಾಡಿ ಅಥವಾ ನೇರವಾಗಿ ನಮಗೆ ಕರೆ ಮಾಡಲು ಸೂಚಿಸಿದರು.
ನಗರಸಭೆ ಪೌರಾಯುಕ್ತೆ ಅಮೃತ ಅವರು ಮಾತನಾಡಿ, ಸಾರ್ವಜನಿಕರು ಪೊಲೀಸ್ ಇಲಾಖೆಯೊಂದಿಗೆ ಸಾಮರಸ್ಯದಿಂದ ಇರಬೇಕು ಎಂದು ಮನವಿ ಮಾಡಿದರು. ಸರ್ಕಾರದಿಂದ ಆಯೋಜಿಸಲಾದ ಈ ಕಾರ್ಯಕ್ರಮಗಳಲ್ಲಿ ಅಧಿಕಾರಿಗಳು ಮತ್ತು ಸಾರ್ವಜನಿಕರ ಸಹಭಾಗಿತ್ವ ಅತ್ಯಂತ ಮುಖ್ಯವಾಗಿದೆ ಎಂದು ಹೇಳಿದರು.
ನಗರದಲ್ಲಿ ಗಣತಿ ಸಮೀಕ್ಷೆ ೮೦% ಮುಗಿದಿದ್ದು, ಉಳಿದ ಮನೆಗಳ ಗಣತಿಗೆ ಸಹಕಾರ ನೀಡುವಂತೆ ಮನವಿ ಮಾಡಿದರು. ಯಾರ ಮನೆಗೆ ಗಣತಿ ಅಧಿಕಾರಿಗಳು ಬಂದಿಲ್ಲವೆಂದರೆ, ಸ್ವಯಂಪ್ರೇರಿತರಾಗಿ ಮಾಹಿತಿ ನೀಡಿ ಎಂದರು.
ನಗರಸಭೆ ಸದಸ್ಯರಾದ ಅನಿಲ್ ಕುಮಾರ್ ಮಾತನಾಡಿ ನಮ್ಮ ನೆಚ್ಚಿನ ವಾರ್ಡ್ ಇದು ಈ ೧೧ನೇ ವಾರ್ಡ್‌ನಲ್ಲಿ ನಗರಸಭೆ ಅಧಿಕಾರಿಗಳ ಸಹಕಾರದಿಂದ ನೀರು, ಸ್ವಚ್ಚತೆ, ಬೀದಿ ದೀಪಗಳು ಹಾಗೂ ಜನತೆಗೆ ಅವಶ್ಯವಿರುವ ಮೂಲಭೂತ ಸೌಕರ್ಯಗಳನ್ನು ನೀಡುವಂತಹ ಅನೇಕ ಅಭಿವೃದ್ಧಿ ಕಾರ್ಯಕ್ರಮಗಳನ್ನು ನಡೆಸಿಕೊಂಡು ಬರುತ್ತಿರುವ ಜೊತೆಗೆ
ನಿಮ್ಮಗಳ ಸಹಕಾರ ನನಗೆ ಸಿಕ್ಕಿದೆ ಅದರಂತೆ ಸಹ ಪೋಲಿಸರ ಸಹಕಾರ ಮನಗೆ ಇರಲಿ, ನಮ್ಮ ವಾರ್ಡಿಗೆ ಬೀಟ್ ಪೊಲೀಸ್ ಹೆಚ್ಚಿನ ಅವಶ್ಯಕತೆ ಇದ್ದು ಅಧಿಕಾರಿಗಳು ಗಮನಹರಿಸಲಿ ಎಂದರು. ಸಂದರ್ಭದಲ್ಲಿ ನಗರಠಾಣೆ ಎಎಸ್‌ಐ ಶಂಕ್ರಾಚಾರಿ, ಬೀಟ್ ಮುಖ್ಯ ಪೇದೆ ರಾಜೇಶ್, ಹಾಗೂ ಸಂಪತ್ ಕುಮಾರ್, ೧೧ ನೇ ವಾರ್ಡ್ ಮುಖ್ಯಸ್ಥರು, ಮಹಿಳೆಯರು, ಮಕ್ಕಳು ಹಾಜರಿದ್ದರು.


























