
ಮಧುಗಿರಿ, ಡಿ. ೨೭- ಕಾವ್ಯ ತನ್ನದೇ ಶಕ್ತಿಯುತ ಸ್ಥಾನವನ್ನು ಗಿಟ್ಟಿಸಿಕೊಳ್ಳುತ್ತದೆ ಎಂದು ಸಾಹಿತಿ ಬಿದಲೋಟಿ ರಂಗನಾಥ್ ಹೇಳಿದರು.
ಪಟ್ಟಣದ ಕನ್ನಡ ಭವನದ ಕೆ. ಎಂ ಶಂಕರಪ್ಪ ವೇದಿಕೆಯಲ್ಲಿ ನಡೆದ ೭ ನೇ ಸಾಹಿತ್ಯ ಸಮ್ಮೇಳನದ ಕವಿಗೋಷ್ಠಿ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು.
ಕಾವ್ಯಕ್ಕೆ ತನ್ನದೇ ಆದ ವಿಶೇಷ ಗುಣವಿದೆ. ಕವಿಯಾದವರು ಸಮಾಜ ಮುಖಿಯಾಗಿ ಚಿಂತಿಸಬೇಕು. ಪ್ರಸ್ತುತ ವಿದ್ಯಮಾನಗಳನ್ನು ಆಲಿಸುತ್ತಾ ಕಾವ್ಯದ ಮೂಲಕ ಸಮಾಜವನ್ನು ಎಚ್ಚರಿಸುವ ಕೆಲಸ ಮಾಡಬೇಕು.
ಇತ್ತೀಚಿನ ದಿನಗಳಲ್ಲಿ ಕವಿಗಳು ಬರೆದ ಕವಿತೆಗಳ ಸಂಕಲನಗಳನ್ನು ಪ್ರಕಟಿಸಲು ಪ್ರಕಾಶಕರು ಹಿಂದೇಟು ಹಾಕುತ್ತಿರುವುದು ನೋವಿನ ಸಂಗತಿ. ಇದರಿಂದ ವರ್ತಮಾನದ ಕವಿಗಳ ಕಾವ್ಯ ಓದುಗರಿಗೆ ತಲುಪುತ್ತಿಲ್ಲ.ಎಂದರು.
ಮಲ್ಲಿಕಾ ಬಸವರಾಜು ಮಾತನಾಡಿ, ತಾನು ಸುಖವಾಗಿದ್ದ ಮಾತ್ರಕ್ಕೆ ತನ್ನ ಸುತ್ತಲಿನ ಜಗತ್ತು ಸುಖವಾಗಿದೆ ಎಂದು ಭಾವಿಸದೆ ತನ್ನ ಸಹ ಜೀವಿಗಳ ನೋವು ತನ್ನದೇ ಎಂದು ಭಾವಿಸಿದಾಗ ಮಾತ್ರ ಕಾವ್ಯ ಕಟ್ಟಲು ಸಾಧ್ಯ ಎಂದು ಹೇಳಿದರು.
ಈ ಸಂದರ್ಭದಲ್ಲಿ ನವೀನ್ ಪೂಜಾರಹಳ್ಳಿ, ಮಾರುತೀಶ್ ಕಸಾಪುರ, ಲಿಂಗರಾಜು, ಕೆ.ಶಾಂತಕುಮಾರ್, ವೀಣಾ ಶ್ರೀನಿವಾಸ್, ಗಂಗರಾಜು, ನಾಗರಾಜು, ಮಂಜು, ಬಿಜವರ ಡಾ. ಅಮರಾವತಿ ದ್ರೇಹಾಚಾರ್. ಮಂಜು ಬಿಜವರ, ಡಾ. ಅಮರಾವತಿ ದ್ರೇಹಾಚಾರ್, ನಟರಾಜು ತಿಮ್ಲಾಪುರ, ಮುಕುಂದರಾಜು, ಸರ್ವಮಂಗಳ, ಮಂಜುಳ, ಮೂಡ್ಲಗಿರೀಶ್ ಮತ್ತಿತರರು ಉಪಸ್ಥಿತರಿದ್ದರು.


























