
ಬೀದರ್ :ಮೇ.2: ಕಾವ್ಯ ಮತ್ತು ಸಂಗೀತವು ಜೀವನದ ಅವಿಭಾಜ್ಯ ಅಂಗವಾಗಿದೆ., ಕಾವ್ಯ ಆತ್ಮವಾದರೆ ಸಂಗೀತ ಅದರ ಶರೀರ ಎನ್ನುವ ಹಾಗೇ ಕಾವ್ಯ, ಅನುಭವ, ಅಧ್ಯಯನಗಳಿಂದ ಮೂಡಿಬಂದರೆ ಉತ್ತಮ ಕಾವ್ಯ. ಹಾಗೆಯೇ ಸಂಗೀತವಾಗಿ ಮೂಡಿಬಂದ ಆ ಕವಿತೆಗಳು ಮನಸ್ಸಿಗೆ ಶಾಂತಿಯನ್ನು ನೀಡುತ್ತವೆ.ಒತ್ತಡದ ಬದುಕಿನಲ್ಲಿ ಬದುಕುತ್ತಿರುವ ನಾವಿಂದು ಈಗ ನಮಗೆ ಅತ್ಯಂತ ಜರೂರಿ ಸಂಗೀತ. ಒಂದಿಷ್ಟು ಸಂಗೀತ ಆಲಿಸುವುದರಿಂದ ಬಾಳಿಗೆ ನೆಮ್ಮದಿ ದೊರೆಯತ್ತದೆ.ಎಂದು ಖ್ಯಾತ ಕವಯಿತ್ರಿ ಡಾ. ಶ್ರೇಯಾ ಮಹೇಂದ್ರಕರ್ ಮಾತನಾಡಿದರು. ಅವರು ನಗರದ ಮೈಲೂರು ಕ್ರಾಸ್ ಹತ್ತಿರವಿರುವ ಮಹಾಲಕ್ಷ್ಮಿ ಸಭಾಂಗಣದಲ್ಲಿ ದೇಶಪಾಂಡೆ ಸಾಹಿತ್ಯಿಕ ಮತ್ತು ಸಾಂಸ್ಕøತಿಕ ಪ್ರತಿಷ್ಠಾನ ಬೀದರ ಹಾಗೂ ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಬೆಂಗಳೂರು ಇವರ ಸಂಯುಕ್ತಾಶ್ರಯದಲ್ಲಿ ಏರ್ಪಡಿಸಿದ್ದ ಕವಿಗೋಷ್ಠಿ, ಗೌರವ ಸನ್ಮಾನ ಹಾಗೂ ಸಂಗೀತ ಕಲಾ ಉತ್ಸವ ಕಾರ್ಯಕ್ರಮದಲ್ಲಿ ಭಾಗವಹಿಸಿ ನುಡಿದರು. ಅವರು ಮುಂದುವರೆದು ಅಶ್ಲೀಲ, ಅಸಭ್ಯ ಸಂಗೀತ ಭವಿಷ್ಯದ ಬದುಕಿಗೆ ಮಾರಕವಾಗಬಹುದು ಅಂತಹ ಕಾವ್ಯ, ಸಂಗೀತಗಳಿಗೆ ಅವಕಾಶ ಕೊಡಬಾರದು.ಅದು ನಮಗೆ ನೋವುಂಟು ಮಾಡುತ್ತದೆ. ಏಕೆಂದರೆ ಕಾವ್ಯ ಮತ್ತು ಸಂಗೀತ ಬದುಕಿನ ಜೀವನಾಡಿ ಎಂದು ಕಾರ್ಯಕ್ರಮವನ್ನು ಉದ್ಘಾಟಿಸಿ ನುಡಿದರು. ಪೂಜ್ಯಶ್ರೀ ಕಿರಣ ಮಹಾರಾಜರವರು ಕಾರ್ಯಕ್ರಮದ ದಿವ್ಯ ಸಾನಿಧ್ಯವನ್ನು ವಹಿಸಿದ್ದರು ಡಾ. ನಿಜಲಿಂಗ ರಗಟೆಯವರು ತಮ್ಮ ಆಶಯ ನುಡಿಗಳಲ್ಲಿ ಕಾವ್ಯ ಮಾನವೀಯ ಮೌಲ್ಯಗಳು ಎತ್ತಿಹಿಡಿಯಬೇಕು. ಕಾವ್ಯ ಅದೊಂದು ವಾಕ್ಯವಲ್ಲ ಅದು ಮನಸ್ಸನ್ನು ಆನಂದಗೊಳಿಸುವ ಅದ್ಭುತ ಮಂತ್ರ. ಸಾಮಾಜಿಕ ಕಳಕಳಿ ಹೆಚ್ಚಿಸುವ, ಲೋಕದ ಅಂಕುಡೊಂಕುಗಳನ್ನು ತಿದ್ದುವ ಕಾರ್ಯವೇ ಕಾವ್ಯದ ಮೂಲ ಉದ್ದೇಶವಾಗಬೇಕೆಂದರು. ಮುಖ್ಯ ಅತಿಥಿಗಳಾದ ಖ್ಯಾತ ಸಂಗೀತ ಗಾಯಕಿ ಶ್ರೀಮತಿ ರೇಖಾ ಅಪ್ಪಾರಾವ ಸೌದಿ ಅವರು ಮಾತನಾಡಿ ಸಂಗೀತವೇ ಬದುಕಿನ ಪರಿಛಾಯೆ. ಸಂಗಿತವಿಲ್ಲದಿದ್ದರೆ ಈ ಲೋಕವೇ ,ಬರಡಾಗುತ್ತಿತ್ತು ಎಂದು ಹೇಳುವುದರೊಂದಿಗೆ ಎರಡು ಮಧುರವಾದ ಭಾವಗೀತೆಗಳನ್ನು ಹಾಡಿ ಪ್ರೇಕ್ಷಕರ ಮನಸ್ಸುಗಳನ್ನು ತಣಿಸಿದರು. ಮುಖ್ಯ ಅತಿಥಿಗಳಾದ ರಾಮಚಂದ್ರಗಣಪೂರರವರು ಕಾವ್ಯ ಕುರಿತಂತೆ ತಮ್ಮ ಅನುಭವಗಳನ್ನು ವೇದಿಕೆಯಲ್ಲಿ ಹಂಚಿಕೊಂಡರು. ಕಾರ್ಯಕ್ರಮದ ಅಧ್ಯಕ್ಷತೆಯನ್ನು ವಹಿಸಿದ್ದ ಶ್ರೀಮತಿ ಚೆನ್ನಮ್ಮವಲ್ಲೆಪುರೆರವರು ಮಾತನಾಡಿ ಕಾವ್ಯ ಕೇವಲ ಅಕ್ಷರ ಜೋಡಣೆಯಲ್ಲ ಅದೊಂದು ನಮ್ಮ ಭಾವನೆಗಳ ಪ್ರತಿಬಿಂಬ. ಕಾವ್ಯ ಜವಾಬ್ದಾರಿಯಿಂದ ಬರೆಯಬೇಕು, ಕವಿತೆ ದ್ವೇಷ ಮಧ್ಯೆ ಪ್ರೀತಿ ಹರಿಸಬೇಕು. ಮಹಿಳೆಯರ ಶೋಷಣೆ ವಿರುದ್ಧ ಬಂಡೇಳುವ, ಅನ್ಯಾಯ ಭ್ರಷ್ಟಾಚಾರಗಳಿಗೆ ಖಂಡಿಸುವಂತಹ ಕಾವ್ಯವಾಗಬೇಕು. ಪ್ರಚಲಿತ ವಿದ್ಯಮಾನಗಳ ಒಳಗೊಂಡಂತೆ ಪಂಪ, ರನ್ನ,ಕುವೆಂಪು, ಬೇಂದ್ರೆರವರ ಕಾವ್ಯಗಳನ್ನು ಅಧ್ಯಯನ ಮಾಡುವ ಮೂಲಕ ಗಟ್ಟಿ ಕವಿತೆಗಳನ್ನು ಕೊಡಬೇಕೆಂದು ಕರೆ ನೀಡಿದರು. ಈ ಸಂದರ್ಭದಲ್ಲಿ ಕವಿ, ಕವಯಿತ್ರಿಯರಾದ ಧನರಾಜ್ ಅಣಕಲ್, ಧನಲಕ್ಷ್ಮಿ ಪಾಟೀಲ , ಸ್ವರೂಪರಾಣಿ ನಾಗೂರ್, ಪ್ರೇಮ ಅವನಾಶ್, ಮಾಯಾದೇವಿ ಗೋಖಲೆ, ಸುಜಾತ ಹೊಸಮನಿ, ಎಸ್ ಬಿ ಕುಚಬಾಳ ,ಕುಸುಮ ಹತ್ಯಾಳ, ವೀರಶೆಟ್ಟಿ ಪಾಟೀಲ್, ಸುರೇಖಾ, ಅರವಿಂದ ಕುಲಕರ್ಣಿ, ಬಾಪುರಾವ ಮಡಕಿ ಮುಂತಾದವರು ತಮ್ಮ ಸ್ವರಚಿತ ಕವನಗಳನ್ನು ವಾಚನ ಮಾಡಿದರು. ಈ ವೇಳೆ ಗೌರವ ಸನ್ಮಾನಕ್ಕೆ ಭಾಜನರಾದ ಎಂ ಎಸ್ ಮನೋಹರ, ಶ್ರೀ ಮತಿ ಇಂದುಮತಿ ಸುತಾರ, ಸಂಗಮೇಶ್ ಬಿರಾದರ, ಉಮಾ ಕಾಂತ ಮೀಸೆ, ದೇವದಾಸ್ ಚಿಮ್ಕೋಡ, ವೀರಭದ್ರಪ್ಪ ಉಪ್ಪಿನ, ಹಣುಮ ಪಾಜಿ, ಸುಧಾಕರ ಪಾಟೀಲ್ ಮರ್ಕಲ್, ನಾಗೇಂದ್ರ ದಂಡೆ, ಶಂಭುಲಿಂಗ ವಾಲ್ದೊಡ್ಡಿ, ಸೂರ್ಯಕಾಂತ ಕುಲಕರ್ಣಿ, ಸುಧಾಕರ ಪಾಟೀಲ್, ಅಶೋಕ್ ಬೂದಿಹಾಳ, ವಿಜಯ ಕುಮಾರ್ ಸೋನಾರೆ ಇವರೆಲ್ಲರಗೆ ಸನ್ಮಾನಿಸಲಾಯಿತು. ಸಂಗೀತ ಸಂಸ್ಕೃತಿಕ ಈ ಕಾರ್ಯಕ್ರಮದಲ್ಲಿ ಕಲಾವಿದರಾದ ಶ್ರೀ ಶಿವಕುಮಾರ ಪಾಂಚಾಳ, ಮಲ್ಲಿಕಾರ್ಜುನ್ ರಾಂಪುರೆ, ರಮೇಶ್ ಕೋಳಾರ್, ಚಂದ್ರಕಾಂತ್ ಪೂಜಾರಿ, ಶ್ರೀಮತಿ ಗಂಗಮ್ಮ , ಶ್ರೀಮತಿ ಶಿಲ್ಪಾ ಪಾಟೀಲ, ಶ್ರೀಮತಿ ಮಹಾದೇವಿ, ಅಕ್ಶಮಹಾದೇವಿ ಮಹಿಳಾ ಭಜನೆ ಮತ್ತು ಸಾಂಸ್ಕೃತಿಕ ಸಂಘದ ಮಹಿಳೆಯರ ವಚನ ಗಾಯನ, ಶಿವರಾಜ ಕಾಳಶೆಟ್ಟಿ, ಜಗನ್ನಾಥ ಯರ್ನಳ್ಳಿ, ರೇವಣಪ್ಪ ಮೂಲಗೆ, ದಿಲೀಪ್ ಕುಮಾರ ಕಾಡವಾದ, ಅಂಕಿತಾ ಬಚ್ಚಣ್ಣ ಮುಂತಾದ ದಿಗ್ಗಜ ಸಂಗೀತ ಕಲಾವಿದರು ತಮ್ಮ ಸಂಗೀತ ಕಲೆಯನ್ನು ವಿವಿಧ ವಾದ್ಯಗಳೊಂದಿಗೆ ಗೀತೆಗಳನ್ನು ಹಾಡಿ ಜನರ ಮನಸ್ಸಿಗೆ ಆನಂದವನ್ನು ನೀಡಿದರು. ಕಾರ್ಯಕ್ರಮದಲ್ಲಿ ಕುಮಾರಿ ಆಸ್ತಾ ಬಚ್ಚಣ್ಣ ಮತ್ತು ಕುಮಾರಿ ಪ್ರಿಯಾಂಕರವರು ತಮ್ಮ ತಮ್ಮ ನೃತ್ಯಗಳನ್ನು ಪ್ರದರ್ಶಿಸಿ ಎಲ್ಲರ ಮೆಚ್ಚುಗೆಗೆ ಪಾತ್ರರಾದರು. ಪ್ರಾರಂಭದಲ್ಲಿ ಮಹೇಶ್ ಬಚ್ಚಣ್ಣನವರು ಕಾರ್ಯಕ್ರಮಕ್ಕೆ ಸ್ವಾಗತಿಸಿದರೆ ಶಿಲ್ಪಾ ಮಜಗೆ, ಯೋಗೇಂದ್ರ ಯದಲಾಪೂರೆಯವರು ಕಾರ್ಯಕ್ರಮವನ್ನು ನಿರೂಪಿಸಿದರು. ಎಂ.ಜಿ. ದೇಶಪಾಂಡೆಯವರು ಪ್ರಸ್ತಾವಿಕ ನುಡಿಗಳನ್ನಾಡಿದರು. ಈ ಸಂದರ್ಭದಲ್ಲಿ ಹಲವಾರು ಗಣ್ಯರು ಜನನ ಪಾಲ್ಗೊಂಡಿದ್ದರು. ಶ್ರೀ ಮಲ್ಲಿಕಾರ್ಜುನ ಸ್ವಾಮಿ ಸಂಗಮ ಅವರು ಕಾರ್ಯಕ್ರಮಕ್ಕೆ ವಂದಿಸಿದರು.


























