Home ಜಿಲ್ಲೆ ಕವಿತೆಗಳು ಸಾಧಕರ ಜೀವನದ ಆದರ್ಶಗಳು ಮುಂದಿನ ಪೀಳಿಗೆಗೆ ತಿಳಿಸುತ್ತವೆ: ಕೂಡ್ಲಿಕರ್

ಕವಿತೆಗಳು ಸಾಧಕರ ಜೀವನದ ಆದರ್ಶಗಳು ಮುಂದಿನ ಪೀಳಿಗೆಗೆ ತಿಳಿಸುತ್ತವೆ: ಕೂಡ್ಲಿಕರ್

ಸಂಜೆವಾಣಿ ವಾರ್ತೆ
ಬೀದರ್:ಫೆ.೧೧: ಶಿವಾಜಿಯ ಖಡ್ಗದರ್ಶನ, ಹಿಂದವಿ ಸಾಮ್ರಾಜ್ಯ ಸ್ಥಾಪನೆಯ ಜನಕ, ಶಿವನೇರಿಕೋಟೆಯ ಶೂರ, ಸೇನಾನಾಯಕನ ಧೈರ್ಯ ಮುಂತಾದ ಛತ್ರಪತಿ ಶಿವಾಜಿ ಮಹಾರಾಜರ ಕುರಿತಾದ ಕವನಗಳ ವಾಚನ ಪ್ರೇಕ್ಷಕರ ಮತ್ತು ವಿದ್ಯಾರ್ಥಿಗಳ ಮನಗೆದ್ದವು. ಕವಿತೆಗಳು ಸಾಧಕರ ಜೀವನದ ಆದರ್ಶಗಳನ್ನು ಮುಂದಿನ ಯುವ ಪೀಳಿಗೆಗೆ ತಿಳಿಸಿಕೊಡುತ್ತವೆ ಎಂದು ಮಹಿಳಾ ಸಾಹಿತಿ ಡಾ. ಸುನಿತಾ ಕೂಡ್ಲಿಕರ್ ತಿಳಿಸಿದರು.
ಕರ್ನಾಟಕ ಮರಾಠ ಸಮುದಾಯ ಅಭಿವೃದ್ಧಿ ನಿಗಮ ಬೆಂಗಳೂರು, ಕರ್ನಾಟಕ ಸಾಹಿತ್ಯ ಸಂಘ, ಕರ್ನಾಟಕ ಪಶುವೈದ್ಯಕೀಯ ಪಶು ಹಾಗೂ ಮೀನುಗಾರಿಕೆಗಳ ವಿಶ್ವವಿದ್ಯಾಲಯ ಬೀದರ ಹಾಗೂ ಕರ್ನಾಟಕ ಕಾಲೇಜಿ ಇತಿಹಾಸ ವಿಭಾಗದ ಸಂಯುಕ್ತಾಶ್ರಯದಲ್ಲಿ ಕರ್ನಾಟಕ ಕಾಲೇಜಿನ ಸಭಾಂಗಣದಲ್ಲಿ “ಯುವ ನಾಯಕತ್ವಕ್ಕೆ ಛತ್ರಪತಿ ಶಿವಾಜಿ ಮಹಾರಾಜರ ಜೀವನ ದರ್ಶನ” ವಿಷಯದ ಮೇಲೆ ಆಯೋಜಿಸಿದ ಬಹುಶಿಸ್ತೀಯ ರಾಷ್ಟ್ರೀಯ ವಿಚಾರ ಸಂಕಿರಣದ ಕವಿಗೋಷ್ಠಿಯಲ್ಲಿ ಮಾತನಾಡಿದರು.
ಕವಿಗೋಷ್ಠಿಯ ಅಧ್ಯಕ್ಷತೆ ಹಿರಿಯ ಸಾಹಿತಿ ಡಾ. ಎಂ.ಜಿ. ದೇಶಪಾಂಡೆ ವಹಿಸಿದ್ದರು. ಬಸವರಾಜ ಬಿರಾದಾರ, ರವೀಂದ್ರ ಲಂಜವಾಡಕರ, ದಿಲಿಪ ಮಾಲೆ, ಮಲ್ಲಮ್ಮ ಸಂತಾಜಿ, ಡಾ. ಶ್ರೇಯಾ ಮಹಿಂದ್ರಕರ್, ಡಾ. ಗೀತಾ ಪೋಸ್ತೆ, ಲಕ್ಷ್ಮೀ ಕುಂಬಾರ ಸೇರಿದಂತೆ ಹಲವರು ಕವನ ವಾಚನ ಮಾಡಿದರು.