ಸ್ವದೇಶಿ ಬಿಎಸ್ ಎನ್ ಎಲ್ 4 ಜಿ ನೆಟ್ವರ್ಕ್ ಉದ್ಘಾಟಿಸಿದ ಪಿಎಂ ನರೇಂದ್ರ ಮೋದಿ

ಕಲಬುರಗಿ: ಸೆ.29: ಪ್ರಧಾನ ಮಂತ್ರಿ ಶ್ರೀ ನರೇಂದ್ರ ಮೋದಿ ಅವರು ಒಡಿಶಾ ರಾಜ್ಯದ ಜಾರ್ಸುಗುಡದಲ್ಲಿ ಭಾರತದಾದ್ಯಂತ ಸುಮಾರು 98000 ಬಿಎಸ್‍ಎನ್ ಎಲ್ ಸಂಪೂರ್ಣ ಸ್ವದೇಶಿ 4ಜಿ ನೆಟ್‍ವರ್ಕ್ ತಂತ್ರಜ್ಞಾನ ಟವರ್‍ಗಳನ್ನು ಉದ್ಘಾಟಿದ್ದಾರೆ. ಈ ನಿಟ್ಟಿನಲ್ಲಿ ಕಲಬುರಗಿ ಜಿಲ್ಲೆಯ ಬಿಎಸ್‍ಎನ್‍ಎಲ್ ಅಧಿಕಾರಿಗಳು ಕಲಬುರಗಿ ನಗರದ ಬಿಎಸ್ ಎನ್ ಎಲ್ ಮುಖ್ಯ ಕಚೇರಿಯಲ್ಲಿ ವರ್ಚಲ್ ಮೂಲಕ ಕಾರ್ಯಕ್ರಮವನ್ನು ವೀಕ್ಷಿಸಿದರು. ಬಳಿಕ ಬಿ ಎಸ್ ಎನ್ ಎಲ್ (ಕಲಬುರಗಿ, ಯಾದಗಿರಿ ಮತ್ತು ಬೀದರ ಜಿಲ್ಲೆಗಳ) ಪ್ರಧಾನ ವ್ಯವಸ್ಥಾಪಕ ಪಿ. ಪಾಣಿಪ್ರಸಾದ್ ಮಾತನಾಡಿ ಕಲಬುರಗಿ ಜಿಲ್ಲೆಯ ಆಳಂದ ತಾಲೂಕಿನ ಕಾಮನಳ್ಳಿ ಬೀದರ್ ಜಿಲ್ಲೆಯ ಆರು ಗ್ರಾಮ ಹಾಗೂ ಕಲಬುರಗಿ ಜಿಲ್ಲೆಗೆ ಒಟ್ಟು 35ಗ್ರಾಮಗಳಿಗೆ 4ಜಿ ನೆಟ್ವರ್ಕ್ ಸೌಲಭ್ಯ ದೊರಕಿದೆ ಎಂದರು. ಬಿಎಸ್ ಎನ್ ಎಲ್ ಅತ್ಯುತ್ತಮ ಯೋಜನೆ ನೀಡುತ್ತಿದೆ ಗ್ರಾಹಕರು ಇದರ ಸದ್ಬಳಕೆ ಮಾಡಿಕೋಳ್ಳ ಬೇಕು . ಈಗಾಗಲೇ ಕಲಬುರಗಿ ಮತ್ತು ಯಾದಗಿರಿ ಜಿಲ್ಲೆಗಳಲ್ಲಿ 180 4ಜಿ ಟವರ್ ನೆಟ್ವರ್ಕ್ ಕಾರ್ಯದಲ್ಲಿವೆ . ಗ್ರಾಹಕರು ತಮ್ಮ ಹತ್ತಿರದ ಬಿಎಸ್ ಎನ್ ಎಲ್ ಅಥವಾ ಬಿಎಸ ಎನ್ ಎಲ್ ಪ್ರಾಚೈಸಿ ಹೊಂದಿರುವ ಅಂಗಡಿಗಳಲ್ಲಿ ತಮ್ಮ ಆಧಾರ್ ಕಾರ್ಡನ್ನು ನೀಡಿ ಸಿಮ್ ಪಡೆದುಕೊಳ್ಳಬಹುದು . ಹೆಚ್ಚಿ ಸಂಖ್ಯೆಯಲ್ಲಿ ಗ್ರಾಹಕರು ಬಿಎಸ್ ಎನ್ ಎಲ್ ನೆಟ್ವರ್ಕ್ ಉಪಯೋಗ ಮಾಡಿಕೊಳ್ಳಿ ಎಂದರು..

ಈ ಸಂದರ್ಭದಲ್ಲಿ ಡಿಜಿಎಂ ಅನಂತ್ ರಾಮ್ ಚೌದರಿ ಸಂಜೀವ ಕಸಬೆ , ಸುನಿಲ್ ಗಣಪತಿ , ಹಿತೇಂದ್ರ ತಿವಾರಿ, ಸಂಜಯ್ ನಿಕಮ್, ಸೊಹೈಲ್ ಅಹ್ಮದ , ದೇವಸಾಸು ಸೇರಿದಂತೆ ಇನ್ನಿತರ ಅಧಿಕಾರಿಗಳು ಉಪಸ್ಥಿತರಿದ್ದರು.