Home ಜಿಲ್ಲೆ ನಾಟಕಗಳು ಸಮಾಜದ ಕನ್ನಡಿ: ಹಾಸಿಂಪೀರ ವಾಲೀಕಾರ

ನಾಟಕಗಳು ಸಮಾಜದ ಕನ್ನಡಿ: ಹಾಸಿಂಪೀರ ವಾಲೀಕಾರ

ಸಂಜೆವಾಣಿ ವಾರ್ತೆ,
ವಿಜಯಪುರ, ಅ. ೨೪: ನಾಟಕಗಳು ಕೇವಲ ಮನರಂಜನೆಯ ಮಾಧ್ಯಮವಲ್ಲ. ಅವು ಸಮಾಜದ ಕನ್ನಡಿ, ಮನುಷ್ಯನ ಭಾವನೆಗಳು, ಜೀವನದ ಮೌಲ್ಯಗಳು ಹಾಗೂ ಸಾಮಾಜಿಕ ಸಮಸ್ಯೆಗಳನ್ನು ಪರಿಣಾಮಕಾರಿಯಾಗಿ ಜನರ ಮುಂದೆ ತೆರೆದಿಡುವ ಶಕ್ತಿಯುತ ಕಲಾಮಾಧ್ಯಮವಾಗಿವೆ ಎಂದು ಕನ್ನಡ ಸಾಹಿತ್ಯ ಪರಿಷತ್ತಿನ ಜಿಲ್ಲಾಧ್ಯಕ್ಷ ಹಾಸಿಂಪೀರ ವಾಲೀಕಾರ್ ಹೇಳಿದರು.
ಗುರುವಾರ ರಾತ್ರಿ ಹಿಟ್ಟಿನಹಳ್ಳಿ ಶ್ರೀ ಲಕ್ಷ್ಮೀದೇವಿ ಜಾತ್ರಾ ಮಹೋತ್ಸವದ ಅಂಗವಾಗಿ ಆಯೋಜಿಸಿದ್ದ ‘ಸಿಕ್ಕಿದ ಸೊಸೆ ಅಥವಾ ತಾಯಿಯ ಕರುಳು’ ನಾಟಕದ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು.
ರಂಗಾಯಣ, ನೀನಾಸಂ, ಸಾಣೇಹಳ್ಳಿ, ಗುಬ್ಬಿ ವೀರಣ್ಣ, ಚಿತ್ರರಂಗ ಕಂಪನಿ ಹಾಗೂ ಶೇಖ್ ಮಾಸ್ತರ್ ಕಂಪನಿ ಸೇರಿದಂತೆ ವಿವಿಧ ನಾಟಕ ತಂಡಗಳು ಕಳೆದ ಐದು ದಶಕಗಳಿಂದ ಗುಣಮಟ್ಟದ ನಾಟಕಗಳನ್ನು ಪ್ರದರ್ಶಿಸುತ್ತಾ ಬಂದಿವೆ. ಗ್ರಾಮೀಣ ಪ್ರದೇಶಗಳಲ್ಲಿಯೂ ಇಂದಿಗೂ ನಾಟಕಗಳಿಗೆ ಉತ್ತಮ ಬೇಡಿಕೆ ಹಾಗೂ ಪ್ರೇಕ್ಷಕರ ಬೆಂಬಲವಿದೆ ಎಂದು ಅವರು ಹೇಳಿದರು.
ಸಹಕಾರಿ ಧುರೀಣ ರಾಮನಗೌಡ ಪಾಟೀಲ ಯತ್ನಾಳ ಮಾತನಾಡಿ, ಆಧುನಿಕತೆಯ ಭರಾಟೆಯಲ್ಲಿ ನಾಟಕಗಳ ಪ್ರದರ್ಶನ ವಿರಳವಾಗುತ್ತಿದೆ. ಆದರೆ ರಂಗಭೂಮಿಯ ನೇರ ಅನುಭವದ ಮಾಧ್ಯಮಕ್ಕೆ ಇಂದಿಗೂ ಜನರಲ್ಲಿ ಆಸಕ್ತಿ ಕಡಿಮೆಯಾಗಿಲ್ಲ. ನಾಟಕಗಳು ತಮ್ಮ ಜನಪ್ರಿಯತೆಯನ್ನು ಉಳಿಸಿಕೊಂಡು ಬಂದಿವೆ ಎಂದರು.
ನಾಟಕಗಳು ಕಥೆಗಳನ್ನು ನೇರವಾಗಿ ಪ್ರೇಕ್ಷಕರ ಮುಂದಿಡುವುದರ ಜತೆಗೆ ನಟನೆಯ ಶಕ್ತಿಯಿಂದ ಕ್ಷಣಾರ್ಧದಲ್ಲೇ ಪ್ರೇಕ್ಷಕರನ್ನು ಆಕರ್ಷಿಸುತ್ತವೆ. ಹೀಗಾಗಿ ಸಮಾಜದ ಮೇಲೆ ಪರಿಣಾಮ ಬೀರುವ ಪ್ರಬಲ ಮಾಧ್ಯಮವಾಗಿ ನಾಟಕಗಳು ಮುಂದುವರಿಯುತ್ತಿವೆ ಎಂದು ಅವರು ಅಭಿಪ್ರಾಯಪಟ್ಟರು.
ಕಾರ್ಯಕ್ರಮದಲ್ಲಿ ಈರಯ್ಯಸ್ವಾಮಿ ಹಿರೇಮಠ, ಮುರುಗಯ್ಯ ಮಠಪತಿ, ಸಾಹಿತ್ಯ ವಹಿಸಿದ ಅಶೋಕ ಬಗಲಿ, ಪ್ರವೀಣಕುಮಾರ ನಾಟೀಕಾರ (ಪಾಟೀಲ), ಬಸವರಾಜ ಕಳಸಗೊಂಡ, ನಾರಾಯಣ ಅಂಗಡಗೇರಿ, ಜಗನ್ನಾಥ ಚೌಧರಿ, ಶರಣು ಸಾಲಿ ಸಾಹೇಬಗೌಡ ಬಿರಾದಾರ, ಸಂತೋಷ ಪಡನಾಡ, ಸಿದ್ದನಗೌಡ ಬಿರಾದಾರ, ಸಂಗನಗೌಡ ಬಿರಾದಾರ, ದುಂಡಪ್ಪ ಬಗಲಿ, ವಿಠ್ಠಲ ಸಾರವಾಡ, ರವಿ ನಾಟೀಕಾರ, ರಾಚು ಬೋಳಣ್ಣವರ, ಮಹೇಶ ಬೆನಕಟ್ಟಿ, ಕಲ್ಲಪ್ಪ ಗಲಗಿ, ಪ್ರಕಾಶ ಚಿಕ್ಕಲಕಿ, ಹಣಮಂತ ಓಂಟಿಹಟ್ಟಿ, ಬಾಬು ಗಾಯಕ್ವಾಡ, ಬಂದೇನವಾಜ ಮುಲ್ಲಾ, ಚಂದ್ರಕಾAತ ಗಾವಡೆ, ಶರಣು ಉಕ್ಕಲಿ ಸೇರಿದಂತೆ ಹಲವರು ಉಪಸ್ಥಿತರಿದ್ದರು.