
ಮುನವಳ್ಳಿ,ಫೆ.೨೪: ಪಟ್ಟಣದ ಐತಿಹಾಸಿಕ ಶ್ರೀ ಪಂಚಲಿAಗೇಶ್ವರ ಜಾತ್ರಾ ಮಹೋತ್ಸವ ಶತಮಾನೋತ್ಸವ ಅಂಗವಾಗಿ ರಾಜ್ಯ ಮಟ್ಟದ ಹೊನಲು ಬೆಳಕಿನ ವಾಲಿಬಾಲ ಪಂದ್ಯಾವಳಿ ಜರುಗಿತು.
ವಾಲಿಬಾಲ್ ಪಂದ್ಯಾವಳಿ ಉದ್ಘಾಟಿಸಿ ಜಾತ್ರಾ ಉತ್ಸವ ಸಮಿತಿ ಅಧ್ಯಕ್ಷ ಅಂಬರೀಷ ಯಲಿಗಾರ ಮಾತನಾಡಿ ಪಾಠದ ಜೋತೆಗೆ ಆಟವು ಮುಖ್ಯ ಯುವಕರು ಗ್ರಾಮಿಣ ಬಾಗದಲ್ಲಿ ಜರಗುವ ವಿವಿಧ ಸ್ಪರ್ಧೆಗಳಲ್ಲಿ ಬಾಗವಹಿಸುವದು ಮುಖ್ಯ, ಜಾತ್ರೆ ಹಬ್ಬಗಳು ನಮಗೆ ಸಂಸ್ಕೃತಿ ಸಂಸ್ಕಾರ ತಿಳಿಸುವುದರ ಜೊತೆಗೆ ಒಟ್ಟಿಗೆ ಬಾಳುವ ಸಂದೇಶವನ್ನು ನೀಡುತ್ತವೆ ಎಂದರು.
ಸೋಮಶೇಖರ ಮಠದ ಮುರುಘೇಂದ್ರ ಶ್ರೀಗಳು ಸಾನಿಧ್ಯವಹಿಸಿ ಆಶಿರ್ವಚನದಲ್ಲಿ ಟಿವಿ ಹಾಗೂ ಮೊಬೈಲ ಯುಗದಲ್ಲಿ ಗ್ರಾಮಿಣ ಮಟ್ಟದ ಆಟಗಳು ಕಣ್ಮರೇ ಆಗುತ್ತಿವೆ. ಇಂತಹ ಜಾತ್ರೆಗಳಲ್ಲಿ ವಿವಿಧ ಗ್ರಾಮಿಣ ಆಟಗಳನ್ನು ಆಡಿಸುವ ಮೂಲಕ ಜಾತ್ರೆಗೆ ಮೆರಗು ಬರುತ್ತದೆ. ಯುವಕರು ಇಂತಹ ಆಟಗಳಲ್ಲಿ ಹೆಚ್ಚಿನಸಂಖ್ಯೆಯಲ್ಲಿ ಬಾಗವಹಿಸಿ ತಮ್ಮ ದೇಹದ ಸದೃಡತೆಯನ್ನು ಕಾಪಿಡಿಕೊಳ್ಳಬೇಕು ಎಂದರು.
ಈ ಸ್ಪರ್ಧೆಯಲ್ಲಿ ೨೦ ತಂಡಗಳು ಬಾಗವಹಿಸಿದ್ದವು, ಪ್ರಥಮ ಕುಮಟಾ, ದ್ವಿತೀಯ ಗಂಗಾವತಿ, ತೃತೀಯ ಬದಾಮಿ, ನಗದು ಹಾಗೂ ಟ್ರೋಪಿ ಪಡೆದುಕೊಂಡವು, ಬಾಗವಹಿಸಿದ ತಂಡಗಳಿಗೆ ಸಮಾದನಕರ ಬಹುಮಾನ ನೀಡಲಾಯಿತು.
ಉಮೇಶ ಬಾಳಿ ಹಾಗೂ ದಂಡಾಧಿಕಾರಿ ಮಲ್ಲಿಕಾರ್ಜುನ ಹೆಗ್ಗನ್ನವರ ಮಾತನಾಡಿದರು.
ಎಮ್.ಆರ್.ಗೋಪಶೇಟ್ಟಿ, ವಿರೇಶ ಬ್ಯಾಹಟ್ಟಿ, ನಿಂಗನಗೌಡ ಮಲಗೌಡ್ರ, ಟಿ,ಎನ್.ಮುರಂಕರ, ಪ್ರಭು ಹನಸಿ, ಪ್ರಕಾಶ ಕಾಮಣ್ಣವರ, ಅಜ್ಜು ಹಿರಲಿಂಗಣ್ಣವರ, ದಹಿಕ ಶಿಕ್ಷಕರುಗಳಾದ ಪರುಶುರಾಮ ಕದಂ, ದಾನು ಗದಗಿನ, ಇತರರು ಉಪಸ್ಥಿತರಿದ್ದರು.
ಮೋಹನ ಕಾಮಣ್ಣವರ ಸ್ವಾಗತಿಸಿ, ಕಾ.ನಿ. ಮಲ್ಲಿಕಾರ್ಜುನ ಕಮತಗಿ, ಅಶೋಕ ಸಂಕಣ್ಣವರ ವಂದಿಸಿದರು.
ಸೋಮಶೇಖರ ಮಠದ ಮುರುಘೇಂದ್ರ ಶ್ರೀಗಳು ಸಾನಿಧ್ಯವಹಿಸಿ ಮಾತನಾಡಿದರು.



























