ವಿಮಾನ ಅವಘಡ: ರಾಜಕೀಯ ನಾಯಕರ ಪಟ್ಟಿಗೆ ರೂಪಾನಿ ಸೇರ್ಪಡೆ

ಬೆಂಗಳೂರು,ಜೂ.೧೩:ದೇಶದ ವಿಮಾನ ಅಪಫಾತಗಳಲ್ಲಿ ಕೆಲವು ರಾಜಕೀಯ ನಾಯಕರುಗಳು ಮೃತಪಟ್ಟಿದ್ದು, ನಿನ್ನೆ ಗುಜರಾತ್‌ನ ಅಹಮದಾಬಾದ್ನಲ್ಲಿ ನಡೆದ ವಿಮಾನ ದುರಂರತದಲ್ಲೂ ಗುಜರಾತ್‌ನ ಮಾಜಿ ಮುಖ್ಯಮಂತ್ರಿ ವಿಜಯ್‌ರೂಪಾನ್ ಸಹ ಮೃತಪಟ್ಟಿದ್ದಾರೆ.


ದೇಶದ ವಿವಿಧೆಡೆ ನಡೆದಿರುವ ಹಲವು ವಿಮಾನ ದುರಂತಗಳಲ್ಲಿ ಕೆಲ ರಾಜಕೀಯ ನಾಯಕರು ಮೃತಪಟ್ಟಿದ್ದು, ಇವರ ಸಾಲಿಗೆ ಈಗ ವಿಜಯ್‌ರೂಪಾನಿ ಸಹ ಸೇರ್ಪಡೆಯಾಗಿದ್ದಾರೆ.
ವೈಮಾನಿಕ ಅಪಘಾತಗಳಲ್ಲಿ ಮೃತಪಟ್ಟ ರಾಜಕೀಯ ನಾಯಕರುಗಳ ವಿವರ.


ಸಂಜಯ್‌ಗಾಂಧಿ ಸಾವು


ಮಾಜಿ ಪ್ರಧಾನಿ ಇಂದಿರಾಗಾಂಧಿಯವರ ಕಿರಿಯ ಪುತ್ರರಾದ ಸಂಜಯ್‌ಗಾಂಧಿ ಅವರು ೧೯೮೦ರ ಜೂ. ೨೩ ರಂದು ನವದೆಹಲಿಯಲ್ಲಿ ನಡೆದ ಲಘು ವಿಮಾನ ಅಪಘಾತದಲ್ಲಿ ಮೃತಪಟ್ಟಿದ್ದರು.


ನವದೆಹಲಿಯ ವೈಮಾನಿಕ ನೆಲೆಯಲ್ಲಿ ೩೩ ವರ್ಷದ ಸಂಜಯ್‌ಗಾಂಧಿ ಅವರು ಲಘು ವಿಮಾನ ಹಾರಾಟ ಅಭ್ಯಾಸ ಮಾಡುತ್ತಿರುವಾಗಲೇ ವಿಮಾನ ದುರಂತ ಸಂಭವಿಸಿತ್ತು.


ಮಾಧವ್‌ರಾವ್ ಸಿಂಧ್ಯಾ ಸಾವು


ಕೇಂದ್ರದ ಮಾಜಿ ಸಚಿವ ಕಾಂಗ್ರೆಸ್‌ನ ಪ್ರಮುಖ ನಾಯಕರು ಹಾಗೂ ಮಧ್ಯಪ್ರದೇಶದ ಗ್ವಾಲಿಯರ್ ರಾಜಮನೆತನದ ಮಾಧವ್‌ರಾವ್ ಸಿಂಧ್ಯಾ ಅವರು ೨೦೦೧ರ ಸೆ. ೩೦ ರಂದು ನಡೆದ ವಿಮಾನ ಅಪಘಾತದಲ್ಲಿ ಮೃತಪಟ್ಟಿದ್ದರು.


ಉತ್ತರ ಪ್ರದೇಶದ ಕಾನ್ಪುರದಲ್ಲಿ ನಡೆಯಬೇಕಿದ್ದ ಸಾರ್ವಜನಿಕ ಸಭೆಗೆ ತೆರಳುವಾಗ ಮಾಯನಪುರಿ ಜಿಲ್ಲೆಯಲ್ಲಿ ನಡೆದ ವಿಮಾನ ಅಪಘಾತದಲ್ಲಿ ಮಾಧವ್‌ರಾವ್ ಸಿಂಧ್ಯಾ ದುರಂತ ಸಾವಿಗೀಡಾಗಿದ್ದರು. ಅವರ ಜತೆ ಸಿಂಧ್ಯಾರ ಆಪ್ತ ಕಾರ್ಯದರ್ಶಿ, ಮೂವರು ಪತ್ರಕರ್ತರು ಹಾಗೂ ಪೈಲಟ್ ಸಹ ಮೃತಪಟ್ಟಿದ್ದರು.


ಜಿಎಂಸಿ ಬಾಲಯೋಗಿ ಸಾವು


ಲೋಕಸಭೆಯ ಸ್ಪೀಕರ್ ಆಗಿದ್ದ ತೆಲಗುದೇಶಂ ಪಕ್ಷದ ಹಿರಿಯ ನಾಯಕರಾಗಿದ್ದ ಆಂಧ್ರಪ್ರದೇಶದ ಜಿಎಂಸಿ ಬಾಲಯೋಗಿಯವರು ೨೦೦೨ರ ಮಾ. ೩ ರಂದು ಆಂಧ್ರಪ್ರದೇಶದ ಕೃಷ್ಣಾ ಜಿಲ್ಲೆಯಲ್ಲಿ ಹೆಲಿಕ್ಯಾಪ್ಟರ್‌ನಲ್ಲಿ ಪ್ರಯಾಣಿಸುತ್ತಿದ್ದಾರೆ. ಅಪಘಾತದಲ್ಲಿ ಮೃತಪಟ್ಟಿದ್ದರು.


ಓಂ ಪ್ರಕಾಶ್ ಜಿಂದಾಲ್ ಸಾವು


ಹರಿಯಾಣದ ಇಂಧನ ಸಚಿವರಾಗಿದ್ದ ಉದ್ಯಮಿ ಓಂ ಪ್ರಕಾಶ್‌ಜಿಂದಾಲ್ ಅವರು ೨೦೦೫ರಲ್ಲಿ ಹೆಲಿಕ್ಯಾಪ್ಟರ್ ದುರಂತದಲ್ಲಿ ಸಾವನ್ನಪ್ಪಿದ್ದರು.


ವೈಎಸ್‌ಆರ್ ಸಾವು


ಆಂಧ್ರಪ್ರದೇಶದ ಮುಖ್ಯಮಂತ್ರಿಯಾಗಿದ್ದ ವೈಎಸ್ ರಾeಶೇಖರರೆಡ್ಡಿ ಅವರು ೨೦೦೯ರಲ್ಲಿ ಆಂಧ್ರದ ನೆಲ್ಲಮಾಲ ಅರಣ್ಯ ಪ್ರದೇಶದಲ್ಲಿ ಹವಾಮಾನ ವೈಪರೀತ್ಯದಿಂದಾಗಿ ವೈಎಸ್‌ಆರ್ ಪ್ರಯಾಣಿಸುತ್ತಿದ್ದ ಹೆಲಿಕ್ಯಾಪ್ಟರ್ ಅಪಘಾತಕ್ಕೀಡಾಗಿ ಮೃತಪಟ್ಟಿದ್ದರು.


ದೋರ್ಜಿಖಂಡು ಸಾವು


ಅರುಣಾಚಲ ಪ್ರದೇಶದ ಮುಖ್ಯಮಂತ್ರಿಯಾಗಿದ್ದ ದೋರ್ಜಿಖಂಡು ಅವರು ೨೦೧೧ ಏಪ್ರಿಲ್‌ನಲ್ಲಿ ಸಂಭವಿಸಿದ್ದ ಹೆಲಿಕ್ಯಾಪ್ಟರ್ ದುರಂತದಲ್ಲಿ ಮೃತಪಟ್ಟಿದ್ದರು.