Home ಜಿಲ್ಲೆ ನಾಗಪುರ ದೀಕ್ಷಾಭೂಮಿ ದರ್ಶನಕ್ಕಾಗಿ ಯಾತ್ರೆಗೆ ಚಾಲನೆ

ನಾಗಪುರ ದೀಕ್ಷಾಭೂಮಿ ದರ್ಶನಕ್ಕಾಗಿ ಯಾತ್ರೆಗೆ ಚಾಲನೆ

ಬೀದರ್: ಧಮ್ಮ ಚಕ್ರ ಪರಿವರ್ತನಾ ದಿನದ ಅಂಗವಾಗಿ ಮಹಾರಾಷ್ಟ್ರದ ನಾಗಪುರದಲ್ಲಿರುವ ದೀಕ್ಷಾಭೂಮಿಗೆ ದರ್ಶನಕ್ಕಾಗಿ ತೆರಳುವ ಯಾತ್ರಿಕರ ಬಸ್‌ಗೆ ನಾಗಸೇನ್ ನಗರದಲ್ಲಿ ಬುದ್ಧಿಸ್ಟ್ ಸೊಸೈಟಿ ಅಧ್ಯಕ್ಷರಾದ ನಾಗನಾಥರಾವ್ ನಿಡೋಧಿಕರ್ ಅವರು ನೀಲಿ ನಿಶಾನೆ ತೋರಿಸುವ ಮೂಲಕ ಚಾಲನೆ ನೀಡಿದರು.

ನಂತರ ಮಾತನಾಡಿದ ಅವರು, ಜಿಲ್ಲೆಯಿಂದ ಪ್ರತಿವರ್ಷ ದೀಕ್ಷಾಭೂಮಿಗೆ ತೆರಳುವ ಯಾತ್ರಾರ್ಥಿಗಳಿಗೆ ನಮ್ಮ ಸೊಸೈಟಿಯ ವತಿಯಿಂದ ಹಾಗೂ ದಾನಿಗಳ ನೆರವಿನಿಂದ ಸಹಾಯ ನೀಡಲಾಗುತ್ತಿದೆ. ದೀಕ್ಷಾಭೂಮಿಗೆ ಮೂರು ದಿನಗಳ ಪ್ರವಾಸ ಹಮ್ಮಿಕೊಳ್ಳಲಾಗಿದೆ. ದೀಕ್ಷಾಭೂಮಿಗೆ ಬೀದರ್ ನಗರದಿಂದ ಇದುವರೆಗೆ ಸಾವಿರಾರು ಜನರು ಪ್ರತಿವರ್ಷ ನಾಗಪುರ್ ಪ್ರಯಾಣ ಇಚ್ಛೆಯುಳ್ಳವರು ದೀಕ್ಷಾಭೂಮಿಗೆ ನಮ್ಮ ಸಂಸ್ಥೆಯಿAದ ಸವಲತ್ತು ನೀಡಿದ್ದೇವೆ. ಎಲ್ಲ ಯಾತ್ರಿಕರು ಸುರಕ್ಷಿತವಾಗಿ ಹೋಗಿ ಬರಬೇಕು ಎಂದು ಹಾರೈಸಿದರು.

ಪ್ರಯಾಣಕ್ಕೂ ಮುನ್ನ ಭಕ್ತಾದಿಗಳು ನಾಗಸೇನ್ ನಗರದ ಬೌದ್ಧ ಮಂದಿರದಲ್ಲಿ ಡಾ. ಬಾಬಾಸಾಹೇಬ್ ಅಂಬೇಡ್ಕರ್ ಹಾಗೂ ಭಗವಾನ್ ಗೌತಮ ಬುದ್ಧರ ಪ್ರಾರ್ಥನೆ ಸಲ್ಲಿಸಿ, ಬೀದರ್‌ನಿಂದ ನಾಗಪುರಕ್ಕೆ ಪ್ರಯಾಣ ಆರಂಭಿಸಿದರು.

ಈ ಸಂದರ್ಭದಲ್ಲಿ ಬೌದ್ಧ ಸೊಸೈಟಿಯ ಸದಸ್ಯರಾದ ಸುರೇಶ್ ಸಿಂದೆ, ಭಾಗ್ಯವತಿ ನಿಡೋಧಿಕರ್, ಸತ್ಯಶೀಲಾ ನಿಡೋಧಿಕರ್, ಸವಿತಾ ಬೆಲ್ದಾರ್, ಸಾಂಚಿನಿ ನಾಟೇಕರ್ ಹಾಗೂ ಇತರ ಯಾತ್ರಿಕರು ಉಪಸ್ಥಿತರಿದ್ದರು.