ಫಿಸಿಕ್ಸ್ ವಾಲಾ ತರಬೇತಿ ಕೇಂದ್ರದ ಶಾಖೆ ಉದ್ಘಾಟನೆ

ಕಲಬುರಗಿ:ಜು.೨: ನೀಟ್ ಮತ್ತು ಜೆಇಇ ತರಬೇತಿಯ ಭಾರತದ ನಂಬರ್ ಒನ್ ಸಂಸ್ಥೆಯಾದ ಫಿಸಿಕ್ಸ್ ವಾಲಾ ತರಬೇತಿ ಕೇಂದ್ರದ ಶಾಖೆಯು ಕಲಬುರಗಿಯಲ್ಲಿ ನೂತನವಾಗಿ ಪ್ರಾರಂಭಿಸಲಾಯಿತು.

ನಗರದ ಓಲ್ಡ್ ಜೇವರ್ಗಿ ರಸ್ತೆಯ ಬಳಿ ಇರುವ ಸಂಜೀವಿನಿ ಕಾಂಪ್ಲೆಕ್ಸ್ ನ ವಿದ್ಯಾಪೀಠ ಪಾಠಶಾಲಾದಲ್ಲಿ ನೂತನವಾಗಿ ಸ್ಥಾಪಿಸಲಾದ ನೀಟ್ ಮತ್ತು ಜೆಇಇ ತರಬೇತಿಯ ಭಾರತದ ನಂಬರ್ ಒನ್ ಸಂಸ್ಥೆಯಾದ ಫಿಸಿಕ್ಸ್ ವಾಲಾ ತರಬೇತಿ ಕೇಂದ್ರವನ್ನು ಅಫಜಲಪುರ ಶಾಸಕ ಎಂ.ವೈ ಪಾಟೀಲ್ ಅವರು ಉದ್ಘಾಟಿಸಿದರು.

ಶಾಸಕ ಎಂ ವೈ ಪಾಟೀಲ್, ಮಾಜಿ ಶಾಸಕ ದತ್ತಾತ್ರೇಯ ಪಾಟೀಲ್ ರೇವೂರ್ ಹಾಗೂ ಅನೇಕ ಜನ ಗಣ್ಯರು, ನೀಟ್ ಮತ್ತು ಜೆಇಇ ತರಬೇತಿಯ ಭಾರತದ ನಂಬರ್ ಒನ್ ಸಂಸ್ಥೆಯಾದ ಫಿಸಿಕ್ಸ್ ವಾಲಾ ತರಬೇತಿ ಕೇಂದ್ರವು ಕಲ್ಬುರ್ಗಿಯಲ್ಲಿ ಪ್ರಾರಂಭವಾಗಿದ್ದು ಸಂತೋಷದ ಸಂಗತಿ. ಈ ಭಾಗದ ವಿದ್ಯಾರ್ಥಿಗಳಿಗೆ ಇದು ತುಂಬಾ ಸಹಕಾರ ವಾಗಲಿದೆ ಎಂದು ಹರ್ಷ ವ್ಯಕ್ತಪಡಿಸಿದ್ದರು.

ಈ ಸಂಧರ್ಭದಲ್ಲಿ ಪಾಲಿಕೆ ಸದಸ್ಯ ರಾಜು ದೇವದುರ್ಗ, ಡಾ.ಅಲ್ಲಮಪ್ರಭು ದೇಶಮುಖ, ಕಲಬುರಗಿ ಶಾಖೆಯ ಮುಖ್ಯಸ್ಥರಾದ ಆನಂದ ಶೇರಿಕರ್, ಚಂದು ದೇಸಾಯಿ, ಅಂಬ್ರೇಶ್ ಪಾಟೀಲ್, ಶರಣಪ್ಪ ಶೆಟ್ಟಿ ಸೇರಿದಂತೆ ಅನೇಕರು ಉಪಸ್ಥಿತರಿದ್ದರು.