Home ಜಿಲ್ಲೆ ಕ್ರೀಡೆಯಿಂದ ದೈಹಿಕ, ಮಾನಸೀಕ ಬೆಳೆವಣಿಗೆ ಸಾಧ್ಯ

ಕ್ರೀಡೆಯಿಂದ ದೈಹಿಕ, ಮಾನಸೀಕ ಬೆಳೆವಣಿಗೆ ಸಾಧ್ಯ

ಮುದ್ದೇಬಿಹಾಳ : ತಾಲೂಕಿನ ಕೇಸಾಪೂರ ಗ್ರಾಮದ ಸಿದ್ಧಾರ್ಥ ಪಬ್ಲಿಕ್ ಸ್ಕೂಲ್ ಆವರಣದಲ್ಲಿ ಕ್ಷೇತ್ರ ಶಿಕ್ಷಣಾಧಿಕಾರಿಗಳು ಹಾಗೂ ಕ್ಷೇತ್ರ ಸಮನ್ವಯ ಅಧಿಕಾರಿಗಳ ಕಾರ್ಯಾಲಯ ಮುದ್ದೇಬಿಹಾಳ ಸಿದ್ದಾರ್ಥ ಪಬ್ಲಿಕ್ ಸ್ಕೂಲ್ ಸಹಯೋಗದಲ್ಲಿ ನಾಲತವಾಡ ಹೋಬಳಿ ಮಟ್ಟದ ಪ್ರಾಥಮಿಕ ಶಾಲೆಗಳ ಕ್ರೀಡಾಕೂಟ ಶನಿವಾರರಂದು ಜರುಗಿತು.
ಕರ್ನಾಟಕ ರಾಜ್ಯ ಪ್ರಾಥಮಿಕ ಶಾಲೆ ಶಿಕ್ಷಕರ ಸಂಘದ ಅಧ್ಯಕ್ಷ ಬಸವರಾಜ ಮುದ್ನೂರ, ದೈಹಿಕ ಪರಿವೀಕ್ಷಕ ಎಸ್ ಬಿ ಕುಂಬಾರ ಮಾತನಾಡಿ ವಿದ್ಯಾರ್ಥಿಗಳು ಕೇವಲ ಪಠ್ಯಪುಸ್ತಕಕ್ಕೆ ಸೀಮಿತವಾಗದೆ, ಪಠ್ಯೇತರ ಚಟುವಟಿಕೆಗಳಲ್ಲಿ ಭಾಗವಹಿಸಬೇಕು. ಇದರಿಂದ ಮಕ್ಕಳಲ್ಲಿ ದೈಹಿಕ ಸಾಮರ್ಥ್ಯದೊಂದಿಗೆ ಮಾನಸಿಕ ಸ್ಥೈರ್ಯ, ನಾಯಕತ್ವ ಗುಣ ಬೆಳೆಯುತ್ತದೆ ಮಕ್ಕಳು ಶಾಲಾ ಹಂತದಲ್ಲಿಯೇ ಪಠ್ಯೆದೊಂದಿಗೆ ಪಠ್ಯೇತರ ಚಟುವಟಿಕೆಗಳಲ್ಲಿಯೂ ಭಾಗಿಯಾಗಬೇಕು. ಕ್ರೀಡೆಯು ಮಕ್ಕಳ ಮಾನಸಿಕ, ದೈಹಿಕ ಬೆಳೆವಣಿಗೆಗೆ ಸಹಕಾರಿಯಾಗುವದರಿಂದ ಶಿಕ್ಷಕರು ವಿದ್ಯಾರ್ಥಿಗಳಿಗೆ ಕ್ರೀಡೆಗಳ ಮಹತ್ವಗಳನ್ನು ತಿಳಿಸಿಕೊಡುವದರೊಂದಿಗೆ ಅಂತವರ ಪ್ರತಿಭೆಗಳನ್ನು ಪ್ರೋತ್ಸಾಹಿಸುವ ಕಾರ್ಯ ಮಾಡಬೇಕೆಂದು ಸಲಹೆ ನೀಡಿದರು.
ಸಿದ್ದಾರ್ಥ ಪಬ್ಲಿಕ್ ಸ್ಕೂಲ್ ನ ಕಾರ್ಯದರ್ಶಿ ರಾಮಣ್ಣ ಖಾನಾಪುರ ಮಾತನಾಡಿ ಗ್ರಾಮೀಣ ಪ್ರತಿಭೆಗಳು ಅಂತಾರಾಷ್ಟ್ರೀಯ ಮಟ್ಟದಲ್ಲಿ ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸಿ ಸಾಧನೆ ಮಾಡಬೇಕು ಗ್ರಾಮೀಣ ಭಾಗದಿಂದ ಬಂದಂತಹ ಜಾವಲಿನ್ ಥ್ರೋಬಾಲ್ ಕ್ರೀಡೆಯಲ್ಲಿ ಹಾಗೂ ನೀರಜ್ ಛೋಪ್ರಾ ಪದಕಗಳನ್ನು ಗೆದ್ದು ದೇಶಕ್ಕೆ ಕೀರ್ತಿಯನ್ನು ತಂದಿವರಾಗಿದ್ದಾರೆ ಇಂತಹ ಸಾಧನೆಗಳು ಗ್ರಾಮೀಣ ಭಾಗದ ವಿದ್ಯಾರ್ಥಿಗಳಿಗೆ ಪ್ರೇರಣಾದಾಯಕವಾಗಬೇಕು ವಿದ್ಯಾರ್ಥಿಗಳು ವಿದ್ಯಾಬ್ಯಾಸದ ಜೊತೆಗೆ ಕ್ರೀಡೆಗಳಲ್ಲಿಯೂ ಭಾಗವಹಿಸಬೇಕೆಂದರು. ವಿದ್ಯಾರ್ಥಿಗಳ ಉತ್ತಮ ಪ್ರತಿಭೆಗಳನ್ನು ಗುರುತಿಸಿ ಅವರಿಗೆ ಸೂಕ್ತ ತರಬೇತಿಯನ್ನು ನೀಡುವ ಕಾರ್ಯ ದೈಹಿಕ ಶಿಕ್ಷಕರು ಮಾಡಬೇಕೆಂದು ತಿಳಿಸಿದರು.
ಶಿಕ್ಷಣ ಸಂಯೋಜಕ ಎ.ಬಿ ಬಗಲಿ ಸಿದ್ದಾರ್ಥ ಪಬ್ಲಿಕ್ ಸ್ಕೂಲ್ ನ ಪ್ರಾಂಶುಪಾಲ ದಾಸಪ್ಪ ಮಾತನಾಡಿ ನಿಯಮಿತವಾಗಿ ಕ್ರೀಡೆಯಲ್ಲಿ ಪಾಲ್ಗೊಳ್ಳುವುದರಿಂದ ದೈಹಿಕ ಕ್ಷಮತೆ ಹೆಚ್ಚುವುದರ ಜತೆಗೆ ಏಕಾಗ್ರತೆ ಮತ್ತು ಕಲಿಕೆಯ ಸಾಮರ್ಥ್ಯವೂ ವೃದ್ಧಿಯಾಗುತ್ತದೆ. ಕ್ರೀಡಾಕೂಟದಲ್ಲಿ ಗೆಲುವು ಸಾಧಿಸುವುದಕ್ಕಿಂತ ಶಿಸ್ತುಬದ್ಧವಾಗಿ ಭಾಗವಹಿಸುವುದು ಮತ್ತು ಕ್ರೀಡಾ ಮನೋಭಾವ ಬೆಳೆಸಿಕೊಳ್ಳುವುದು ಮುಖ್ಯವಾಗಿದೆ ಸೋಲು ಎದುರಾದಾಗ ನಿರಾಶರಾಗದೆ, ಅದನ್ನು ಮುಂದಿನ ಗೆಲುವಿಗೆ ಮೆಟ್ಟಿಲಾಗಿ ಪರಿಗಣಿಸಬೇಕು ಎಂದು ವಿದ್ಯಾರ್ಥಿಗಳಿಗೆ ಕಿವಿಮಾತು ಹೇಳಿದರು.
ಕ್ರೀಡಾಕೂಟದಲ್ಲಿ ರಕ್ಕಸಗಿ ಕ್ಲಸ್ಟರ್, ಹಿರೇಮುರಾಳ ಕ್ಲಸ್ಟರ್, ಆಲೂರ ಕ್ಲಸ್ಟರ್, ಅಡವಿಸೋಮನಾಳ ಕ್ಲಸ್ಟರ್, ನಾಲತವಾಡ ಕ್ಲಸ್ಟರ್ ನ ಪ್ರಾಥಮಿಕ ಶಾಲೆಯ ವಿದ್ಯಾರ್ಥಿಗಳು ಭಾಗವಹಿಸಿದ್ದರು.
ಕಬ್ಬಡ್ಡಿ,ಖೋಖೋ, ವಾಲಿವಾಲ್, ಥ್ರೋಬಾಲ್, ಗುಂಡು ಎಸೆತ ಓಟ ಸ್ಪರ್ಧೆಯಲ್ಲಿ ವಿಜೇತ ವಿದ್ಯಾರ್ಥಿಗಳ ತಂಡಕ್ಕೆ ಪ್ರಶಸ್ತಿ ಪತ್ರ ಹಾಗೂ ಆಕರ್ಷಕ ಟ್ರೋಫಿಯನ್ನು ವಿತರಿಸಲಾಯಿತು.
ಈ ಕಾರ್ಯಕ್ರಮದಲ್ಲಿ ಸಿದ್ದಾರ್ಥ ಪಬ್ಲಿಕ್ ಸ್ಕೂಲ್ ನ ಅಧ್ಯಕ್ಷೆ ಶ್ರೀಮತಿ ಸರಸ್ವತಿ ಖಾನಾಪುರ, ನಿರ್ದೇಶಕ ಗೌತಮ್ ಖಾನಾಪುರ, ಶಿಕ್ಷಕರ ಸೊಸೈಟಿ ಅಧ್ಯಕ್ಷ ಪವಾಡಬಸು ಭೂವೇರ್, ಎ.ಜೆ ದಖನಿ, ಎ.ಸಿ ಕಸಬೆಗೌಡರ, ಸಿ ಆರ್ ಪಿ ಎಂ.ವಿ ನೂಲಿನವರ, ಬಿ.ಎಸ್ ಹೂಳಿ, ಬಸನಗೌಡ ಭಗವತಿ, ದೈಹಿಕ ಶಿಕ್ಷಕರಾದ ಜಗದೀಶ ನಾಡಗೌಡ, ಬಿ.ವಿ ಹಿರೇಮಠ, ಮುತ್ತು ಮಾದರ ಸೇರಿದಂತೆ ವಿವಿಧ ಕ್ಲಸ್ಟರ್ ನ ಶಾಲಾ ಶಿಕ್ಷಕರು ವಿದ್ಯಾರ್ಥಿಗಳು ಭಾಗವಹಿಸಿದ್ದರು.
ಶಿಕ್ಷಕ ನಾಗರಾಜ ಪತ್ತಾರ ಸ್ವಾಗತಿಸಿದರು, ಶಿಕ್ಷಕಿ ಸುಜಾತಾ ಅಥಣಿ ನಿರೂಪಿಸಿದರು ಶಿಕ್ಷಕಿ ಮಂಜುಳಾ ಹೂಗಾರ ವಂದಿಸಿದರು.