
ಬೀದರ: ಜೂ.10: ಕ್ರೀಡೆಗಳಿಂದ ದೈಹಿಕ, ಬೌದ್ಧಿಕ ಬೆಳವಣಿಗೆಯಗುವುದರೊಂದಿಗೆ ಮಾನಸಿಕ ಒತ್ತಡಗಳು ಕಡಿಮೆಯಾಗಿ ಏಕಾಗ್ರತೆ ಚಿತ್ತತೆಗೆ ಸಹಕಾರಿಯಾಗುತ್ತದೆ. ಪ್ರತಿಯೋರ್ವ ಕ್ರೀಡಾಪಟುಗಳು ಓದಿನೊಂದಿಗೆ ನಿತ್ಯ ಒಂದು ತಾಸು ಆಟಗಳನ್ನು ಆಡಬೇಕು ಎಂದು ಬೀದರ ಜಿಲ್ಲಾ ಟೇಬಲ್ ಟೆನ್ನಿಸ್ ಸಂಘದ ಅಧ್ಯಕ್ಷ ರಾಜಶೇಖರ ಬಸವಣಪ್ಪ ಜವಳೆ ಅವರು ತರಬೇತಿ ವಿದ್ಯಾರ್ಥಿಗಳಿಗೆ ಕರೆ ನೀಡಿದರು.
ಅವರು ಬೀದರ ನಗರದ ನೆಹರು ಒಳಾಂಗಣ ಕ್ರೀಡಾಂಗಣದಲ್ಲಿ ಜಿಲ್ಲಾಡಳಿತ, ಜಿಲ್ಲಾ ಪಂ¬ಚಾಯತ್, ಯುವ ಸಬಲಿಕರಣ ಮತ್ತು ಕ್ರೀಡಾ ಇಲಾಖೆ ಹಾಗೂ ಬೀದರ ಜಿಲ್ಲಾ ಟೇಬಲ್ ಟೆನ್ನಿಸ್ ಸಂಘದ ಸಂಯುಕ್ತಾಶ್ರಯದಲ್ಲಿ 2025-26ನೇ ಸಾಲಿನ ಬೇಸಿಗೆ ಕ್ರೀಡಾ ತರಬೇತಿ ಶಿಬಿರದ ಸಮಾರೋಪ ಸಮಾರಂಬದಲ್ಲಿ ಪ್ರಮಾಣ ಪತ್ರಗಳನ್ನು ವಿತರಿಸಿ ಮಾತನಾಡುತಿದ್ದರು. ಮುಂದುವರೆದು ಮಾತನಾಡಿದ ಅವರು ಈ ತರಬೇತಿಯಲ್ಲಿ 16 ಜನ ವಿದ್ಯಾರ್ಥಿ-ವಿದ್ಯಾರ್ಥಿನಿಯರುಗಳಿಗೆ ಅಥ್ಲೆಟಿಕ್, ವಾಲಿಬಾಲ್, ಬಾಸ್ಕೇಟ್ ಬಾಲ್, ಹಾಕಿ, ಬ್ಯಾಡ್ಮಿಂಟಿನ್, ಫುಟಬಾಲ್, ಟೇಬಲ್ ಟೆನ್ನಿಸ್ ಕ್ರೀಡೆಗಳ ತರಬೇತಿ ನೀಡಲಾಯಿತು. ಎಂ. ಎ. ಖಾನ್, ವಿಶಾಲ ಪವಾರ, ಮತ್ತು ಸುನೀಲ ಮೊಟ್ಟಿರವರುಗಳು 21 ದಿನಗಳ ಕಾಲ ತರಬೇತಿ ಉತ್ತಮವಾಗಿ ನೀಡಿರುವರು ಜಿಲ್ಲೆಯಲ್ಲಿ ಕ್ರೀಡಾಪಟುಗಳ ಸಂಖ್ಯೆ ಹೆಚ್ಚಾಗಬೇಕೆಂದು ಜವಳೆ ಕರೆ ನೀಡಿದರು.
ಕಾರ್ಯಕ್ರಮದಲ್ಲಿ ಸುರೇಶ ಹಳೆಂಬರ, ವೀರೇಶ ವಡ್ಡಿ, ನರೇಶ, ಚಂದ್ರಕಾಂತ ಅಪ್ಪಾಜಿ, ವಿದ್ಯಾವತಿ ಕೊಪ್ಪರದ, ಶ್ರೀನಿವಾಸ, ಆನಮದ ಪಾಟೀಲ ಸೇರಿದಂತೆ ಇತರೆ ಗಣ್ಯರು ವೇದಿಕೆಯ ಮೇಲಿದ್ದರು.