
ಮುದ್ದೇಬಿಹಾಳ : ಯಾವದೇ ರೋಗ ರುಜುಗಳು ಬಂದAತಹ ವ್ಯಕ್ತಿಗಳ ಆರೋಗ್ಯವನ್ನು ವೈದ್ಯರು ಗುಣಪಡಿಸುತ್ತಾರಲ್ಲದೇ ಅವರ ಜೊತೆ ಔಷಧ ವ್ಯಾಪಾರಸ್ಥರೂ ಸಹ ಸಹಕಾರ ಮನೋಭಾವನೆಯಿಂದಲೂ ತುರ್ತುಗತಿಯಲ್ಲಿ ಜೀವ ಉಳಿಸುವ ಕಾರ್ಯಕ್ಕೆ ಮುಂದಾಗುತ್ತಾರೆAದು ತಾಳಿಕೋಟೆಯ ಶ್ರೀ ಖಾಸ್ಗತೇಶ್ವರ ಮಠದ ಪೀಠಾಧಿಪತಿಗಳಾದ ಬಾಲಶಿವಯೋಗಿ ಶ್ರೀ ಸಿದ್ದಲಿಂಗದೇವರು ನುಡಿದರು.
ರವಿವಾರರಂದು ಸ್ಥಳೀಯ ಏಪಿಎಂಸಿ ಸಭಾಂಗಣದಲ್ಲಿ ತಾಲ್ಲೂಕು ಔಷಧ ವ್ಯಾಪಾರಸ್ಥರ ಸಂಘದ ಆಶ್ರಯದಲ್ಲಿ ಏರ್ಪಡಿಸಲಾದ ವಿಶ್ವ ಔಷಧ ತಜ್ಞರ ದಿನಾಚರಣೆ ಹಾಗೂ ಸನ್ಮಾನ ಸಮಾರಂಭದ ಧಿವ್ಯ ಸಾನಿಧ್ಯವಹಿಸಿ ಮಾತನಾಡುತ್ತಿದ್ದ ಶ್ರೀಗಳು ವೈದ್ಯರಾದವರು ರೋಗಗಳನ್ನು ಪತ್ತೆ ಹಚ್ಚಿದರೆ, ಔಷಧ ತಜ್ಞರು ಅದಕ್ಕೆ ವೈದ್ಯರ ಸಲಹೆಯಂತೆ ಸರಿಯಾಗಿ ಔಷಧವನ್ನು ನೀಡಿ ಜೀವ ಉಳಿಸುವ ಕಾರ್ಯಕ್ಕೆ ಮುಂದಾಗುತ್ತಾರೆ ಗ್ರಾಮೀಣ ಭಾಗದಲ್ಲಿಯೂ ಔಷಧ ವ್ಯಾಪಾರಸ್ಥರು ದೇವರಂತೆ ತಮ್ಮ ಸೇವಾಕಾರ್ಯಕ್ಕೆ ಮುಂದಾಗಿ ಔಷಧ ಮಾರಾಟಗಾರರೆಂಬುದನ್ನು ತಿಳಿದುಕೊಳ್ಳದೇಸಂಭAದಿತರ ನೋವನ್ನು ಅರ್ಥಮಾಡಿಕೊಂಡು ತಕ್ಕಂತೆ ಮಾತ್ರೆ ಹಾಗೂ ಔಷಧಗಳನ್ನು ನೀಡಿ ಜೀವ ಉಳಿಸುವ ಕಾರ್ಯಕ್ಕೆ ಮುಂದಾಗುತ್ತಾರೆAದು ಹೇಳಿದ ಶ್ರೀಗಳು ಔಷಧ ವ್ಯಾಪಾರಸ್ಥರು ದರ್ಮ ಮತ್ತು ಪ್ರಾಮಾಣಿಕತನದಿಂದ ತಮ್ಮ ಸೇವಾಕಾರ್ಯಕ್ಕೆ ಮುಂದಾಗುತ್ತಾರೆAದರು.
ಮುಖ್ಯ ಅತಿಥಿಗಳಾಗಿ ಆಗಮಿಸಿದ ವಿಜಯಪುರ ಸಹಾಯಕ ಔಷಧ ನಿಯಂತ್ರಕರಾದ ಆರ್.ಪರಶುರಾಮ ಮಾತನಾಡಿ, ಔಷಧ ವ್ಯಾಪಾರಸ್ಥರ ಸಂಘದಿAದ ಅನೇಕ ಜನ ಉಪಯೋಗಿ ಕಾರ್ಯಕ್ರಮಗಳನ್ನು ಹಮ್ಮಿಕೊಂಡು ತಮ್ಮ ವೃತ್ತಿಯಲ್ಲಿ ಸನ್ಮಾರ್ಗದೊಂದಿಗೆ ನಡೆದು ಸಾರ್ವಜನಿಕರ ಆಸೆಯಂತೆ ಅವರ ಬೇಡಿಕೆಯಂತೆ ವೈದ್ಯರ ಸಲಹೆ ಮೇರೆಗೆ ಮುಂದಾಗುವAತಹ ಕಾರ್ಯ ಮಾಡುತ್ತಾ ಸಾಗಿರುವದು ಗುಣಗಾನಮಯವಾಗಿದೆ ಎಂದರು.
ಅಧ್ಯಕ್ಷತೆ ವಹಿಸಿದ ಔಷಧ ವ್ಯಾಪಾರಸ್ಥರ ಸಂಘದ ಜಿಲ್ಲಾಧ್ಯಕ್ಷ ಕೆ.ಆರ್.ಎತ್ತಿನಮನಿ ಹಾಗೂ ಸಂಘದ ಜಿಲ್ಲಾ ಕಾರ್ಯದರ್ಶಿ ಎಸ್.ವಿ.ಸಿದ್ದಾಪೂರ, ಆಯುಷ ಫೆಡರೇಷನ್ ಆಫ್ ಇಂಡಿಯಾದ ಅಧ್ಯಕ್ಷ ಡಾ.ಸಿ.ಕೆ.ಶಿವಯೋಗಿಮಠ ಹಾಗೂ ಕ. ಅರ್ಬನ್ ಬ್ಯಾಂಕ್ ಮಾಜಿ ಅಧ್ಯಕ್ಷ ಸತೀಶ ಓಸ್ವಾಲ್, ಉದ್ಯಮಿ ಅಯೂಬ್ ಮನಿಯಾರ್ ಔಷಧ ವ್ಯಾಪಾರಸ್ಥರ ಸೇವಾ ಕಾರ್ಯಗಳ ಕುರಿತು ಗುಣಗಾನ ಮಾಡುವದರೊಂದಿಗೆ ಮೆಚ್ಚುಗೆ ವ್ಯಕ್ತಪಡಿಸಿದರು.
ಸಂಘದ ಗೌರವ ಕಾರ್ಯದರ್ಶಿ ಸಂಗಮೇಶ ಗುಡ್ಡೋಡಗಿ, ವೈದ್ಯರ ಸಂಘದ ತಾಲ್ಲೂಕು ಅಧ್ಯಕ್ಷ ಡಾ.ಡಿ.ಬಿ.ಓಸ್ವಾಲ್, ಸಂಘದ ಅಧ್ಯಕ್ಷ ಜಿ.ಎಂ.ಹಿರೇಮಠ ಇದ್ದರು.
ಇದೇ ಸಮಯದಲ್ಲಿ ದೇಹದಾನಿಗಳಾದ ಶ್ರೀಮತಿ ಶೈಲಜಾ ತುಕಾರಾಮ ಕಲಾಲ(ಟಿಂಗ್ರಿಕರ) ಹಾಗೂ ಸಮಾಜ ಸೇವಕರಾದ ವೀರಶೈವ ಲಿಂಗಾಯತ ಸಮಾಜದ ಅಧ್ಯಕ್ಷರಾದ ಪ್ರಭುರಾಜ ಕಲ್ಬುರ್ಗಿ, ನೀಲಕಂಠರಾವ್ ನಾಡಗೌಡ, ದಿ. ಕರ್ನಾಟಕ ಕೋ ಆಪ್ ಬ್ಯಾಂಕ್ ನಿ.ದ ನಿಕಟಪೂರ್ವ ಅಧ್ಯಕ್ಷರಾದ ಸತಿಶ ಓಸ್ವಾಲ್, ಮನಿಯಾರ ಚಾರಿಟೇಬಲ್ ಟ್ರಸ್ಟ್ ಅಧ್ಯಕ್ಷರಾದ ಅಯ್ಯೂಬ ಮನಿಯಾರ, ಬೈತುಲ್ಮಾಲ್ ಟ್ರಸ್ಟ್ ಅಧ್ಯಕ್ಷರಾದ ಜಬ್ಬಾರ ಗೋಲಂದಾಜ, ಹಿರಿಯ ವೈದ್ಯರಾದ ಡಾ||ಎಸ್.ಬಿ. ವಡವಡಗಿ, ಡಾ|| ಎಸ್.ಆಯ್. ಜುಲ್ಪಿ ಹಾಗೂ ಔಷಧ ತಜ್ಞರಾದ ಮಲ್ಲಿಕಾರ್ಜುನ ಕಲ್ಲುಂಡಿ, ಚನ್ನವೀರಯ್ಯ ಸಾಲಿಮಠ ಅವರನ್ನು ಸನ್ಮಾನಿಸಿ ಗೌರವಿಸಲಾಯಿತು.
ಗವಾಯಿ ಸಂಗಮೇಶ ಶಿವಣಗಿ ಪ್ರಾರ್ಥಿಸಿದರು. ಹೇಮಾ ಬಿರಾದಾರ ನಿರೂಪಿಸಿದರು.
ಈ ಸಮಯದಲ್ಲಿ ಔಷಧ ವ್ಯಾಪಾರಸ್ಥರ ಸಂಘದ ಪದಾಧಿಕಾರಿಗಳು ಉಪಸ್ತಿತರಿದ್ದರು.























