ಮನೆ ಮುಂದೆ ನಿಲ್ಲಿಸಿದ ಬೈಕ್‍ಗಳಿಂದ ಪೆಟ್ರೋಲ್ ಕಳ್ಳತನ

ಕಲಬುರಗಿ,ಜೂ.6-ನಗರದ ಹೈಕೋರ್ಟ್ ಹತ್ತಿರದ ಏಷಿಯನ್ ಗ್ರೀನ್ ಪಾರ್ಕ್ ಲೇಔಟ್‍ನಲ್ಲಿ ಮನೆ ಮುಂದೆ ನಿಲ್ಲಿಸಿದ ಬೈಕ್‍ಗಳ ಪೈಪ್ ಕತ್ತರಿಸಿ ಪೆಟ್ರೋಲ್ ಕಳ್ಳತನ ಮಾಡುತ್ತಿರುವ ಪ್ರಕರಣಗಳು ನಡೆಯುತ್ತಿವೆ.
ಇದರಿಂದ ಲೇಔಟ್ ನಿವಾಸಿಗಳು ಕಂಗಾಲಾಗಿ ಹೋಗಿದ್ದಾರೆ.
ತಡರಾತ್ರಿ ಕಳ್ಳರು ಲೇಔಟ್ ಒಳಗೆ ನುಸುಳಿ ಮನೆ ಮುಂದೆ ನಿಲ್ಲಿಸಲಾದ ಬೈಕ್‍ಗಳ ಪೈಪ್ ಕತ್ತರಿಸಿ ಪೆಟ್ರೋಲ್ ಕಳ್ಳತನ ಮಾಡಿಕೊಂಡು ಹೋಗುತ್ತಿದ್ದು, ಇದರಿಂದ ಲೇಔಟ್ ನಿವಾಸಿಗಳು ಇನ್ನಿಲ್ಲದ ಸಂಕಷ್ಟ ಎದುರಿಸುವಂತಾಗಿದೆ.
ಬೈಕ್‍ಗಳ ಪೈಪ್ ಕತ್ತರಿಸಿ ಪೆಟ್ರೋಲ್ ಕಳ್ಳತನ ಮಾಡಿಕೊಂಡು ಹೋಗುತ್ತಿರುವುದರಿಂದ ಬೈಕ್ ಮೇಲೆ ಕೆಲಸಕ್ಕೆ ಹೋಗುವವರು ತೀವ್ರ ಸಮಸ್ಯೆ ಎದುರಿಸುವಂತಾಗಿದೆ. ಕಳೆದ ಹಲವಾರು ದಿನಗಳಿಂದ ಈ ಪ್ರಕರಣಗಳು ನಡೆಯುತ್ತಿವೆ ಎನ್ನಲಾಗಿದ್ದು, ಇತ್ತೀಚೆಗೆ ಇಂತಹ ನಾಲ್ಕೈದು ಪ್ರಕರಣಗಳು ನಡೆದಿರುವುದು ಬೆಳಕಿಗೆ ಬಂದಿದೆ.
ತಡರಾತ್ರಿ ಕಳ್ಳರು ಲೇಔಟ್ ಒಳಗೆ ನುಸುಳಿ ಬೈಕ್‍ಗಳ ಪೈಪ್ ಕತ್ತರಿಸಿ ಪೆಟ್ರೋಲ್ ಕಳ್ಳತನ ಮಾಡಿಕೊಂಡು ಹೋಗುತ್ತಿದ್ದು, ಮನೆ ಮುಂದೆ ಬೈಕ್ ನಿಲ್ಲಿಸಲು ಸಹ ನಿವಾಸಿಗಳು ಆತಂತ ಪಡುವಂತಾಗಿದೆ. ವಾರದಲ್ಲಿ ಒಂದು ಬಾರಿಯಾದರೂ ಈ ಪ್ರಕರಣಗಳು ಮರುಕಳಿಸುತ್ತಿದ್ದು, ಕಳ್ಳರು ಯಾವುದೇ ರೀತಿಯ ಭಯ, ಅಂಜಿಕೆ ಇಲ್ಲದೆ ಬೈಕ್‍ಗಳ ಪೈಪ್ ಕತ್ತರಿಸಿ ಪೆಟ್ರೋಲ್ ಕಳ್ಳತನ ಮಾಡಿಕೊಂಡು ಹೋದ ದೃಶ್ಯಾವಳಿಗಳು ಲೇಔಟ್‍ನ ಕೆಲವು ಮನೆಗಳ ಮುಂದೆ ಅಳವಡಿಸಲಾದ ಸಿಸಿಟಿವಿ ಕ್ಯಾಮೆರಾಗಳಲ್ಲಿ ಸೆರೆಯಾಗಿವೆ.
ಪೊಲೀಸ್ ಇಲಾಖೆ ಈ ಬಗ್ಗೆ ನಿಗಾವಹಿಸಿ ಮನೆ ಮುಂದೆ ನಿಲ್ಲಿಸಿದ ಬೈಕ್‍ಗಳ ಪೈಪ್ ಕತ್ತರಿಸಿ ಪೆಟ್ರೋಲ್ ಕಳ್ಳತನ ಮಾಡುತ್ತಿರವ ಕಳ್ಳರನ್ನು ಸೆರೆ ಹಿಡಿದು ಅವರ ಮೇಲೆ ಕಾನೂನಿನ ಪ್ರಕಾರ ಸೂಕ್ತ ಕ್ರಮ ಜರುಗಿಸಬೇಕು ಎಂದು ಲೇಔಟ್ ನಿವಾಸಿಗಳು ಆಗ್ರಹಿಸಿದ್ದಾರೆ.
ಪೊಲೀಸ್ ಇಲಾಖೆ ಈ ಬಗ್ಗೆ ನಿಗಾ ವಹಿಸಿ ಮನೆ ಮುಂದೆ ನಿಲ್ಲಿಸಿದ ಬೈಕ್‍ಗಳ ಪೈಪ್ ಕತ್ತರಿಸಿ ಪೆಟ್ರೋಲ್ ಕಳ್ಳತನ ಮಾಡುತ್ತಿರುವ ಕಳ್ಳರನ್ನು ಬಂಧಿಸಿ ಅವರ ವಿರುದ್ಧ ಸೂಕ್ತ ಕ್ರಮ ಜರುಗಿಸಲು ಅಗತ್ಯವಾದ ಕ್ರಮ ಕೈಗೊಳ್ಳಬೇಕಿದೆ.