ಚೌಳಿ ಕಮಾನ್ ಹತ್ತಿರ ೨೫ ವರ್ಷಗಳಿಂದ ವಾಸಿಸುವ ಅಲೆಮಾರಿ ಕುಟುಂಬಗಳಿಗೆ ಜಾಗ ಕೋರಿ ಮನವಿ

ಬೀದರ್:ಡಿ.೧೧:ಚೌಳಿ ಕಮಾನ್ ಹತ್ತಿರ ೨೫ ವರ್ಷಗಳಿಂದ ಬೀದಿ ಬದಿ ಚರಂಡಿಗಳ ಪಕ್ಕದಲ್ಲಿ ಗುಡಿಸಲುಗಳಲ್ಲಿ ವಾಸಿಸುತ್ತಿರುವ ೮೪ ಅಲೆಮಾರಿ ಕುಟುಂಬಗಳಿಗೆ ಶಾಶ್ವತ ವಸತಿ ಕಲ್ಪಿಸುವಂv ?ವಿಶ್ವಕ್ರಾಂತಿ ದಿವ್ಯಪೀಠ ಹಾಗೂ ಅಲೆಮಾರಿ ಸಮುದಾಯ ಹೋರಾಟಗಾರ ಅಧ್ಯಕ್ಷರಾದ ಓಂಪ್ರಕಾಶ ರೊಟ್ಟೆ ಅವರು ಇಂದು ಜಿಲ್ಲಾಧಿಕಾರಿಗಳಿಗೆ ಮನವಿ ಸಲ್ಲಿಸಿದ್ದಾರೆ.
ಅಂತರರಾಷ್ಟ್ರೀಯ ಮಾನವ ಹಕ್ಕುಗಳ ದಿನದ ಅಂಗವಾಗಿ ಸಲ್ಲಿಸಲಾದ ಮನವಿಯಲ್ಲಿ, ಬಾಗೆ ಕಾರಂಜಾ ಗ್ರಾಮದ ಸರ್ವೆ ನಂ. ೪೫/೧ ಜಾಗದಲ್ಲಿ ಕುಟುಂಬಗಳು ಗುಡಿಸಲು ಕಟ್ಟಿಕೊಂಡು ವಾಸಿಸುವಂತೆ ಅವಕಾಶ ಕಲ್ಪಿಸಬೇಕು ಎಂದು ಬೇಡಲಾಗಿದೆ. ಜೊತೆಗೆ ಜಾಗದ ತಕ್ಷಣದ ಅಳತೆಯನ್ನು ಮಾಡುವಂತೆ ತಹಸೀಲ್ದಾರರಿಗೆ ಜಿಲ್ಲಾಡಳಿತ ಸೂಚನೆ ನೀಡಬೇಕೆಂದೂ ಮನವಿ ಮಾಡಲಾಗಿದೆ.
ಒಟ್ಟು ೬೪ ಮಕ್ಕಳಿಗಾಗಿ ಅಂಗನವಾಡಿ ಕೇಂದ್ರವನ್ನು ಕೂಡ ತುರ್ತಾಗಿ ಸ್ಥಾಪಿಸಬೇಕು ಎಂದು ಮನವಿ ಹೇಳಿದೆ.
೨೦೧೭ರ ಘಟನೆಗೆ ಪುನರಾವರ್ತನೆ ಬೇಡ ಮನವಿಯಲ್ಲಿ ೨೦೧೭ರಲ್ಲಿ ಶ್ರೀಮಂತರ ಅಡ್ಡಿಪಡಿಸುವಿಕೆಯಿಂದ, ಮಧ್ಯರಾತ್ರಿ ಅಲೆಮಾರಿ ಕುಟುಂಬಗಳ ಗುಡಿಸಲುಗಳನ್ನು ಎಅಃ ಮೂಲಕ ಕೆಡವಿದ ಘಟನೆ ಉಲ್ಲೇಖಿಸಲಾಗಿದೆ.
ಅಂದಿನ ಜಿಲ್ಲಾಧಿಕಾರಿ ಎಸ್.ಆರ್. ಮಹಾದೇವಪ್ಪ ಹಾಗೂ ನ್ಯಾಯಾಧೀಶರು ಆ ಘಟನೆಗೆ ಸಾಕ್ಷಿಯಾಗಿದ್ದರೂ, ಇಂತಹ ಘಟನೆ ಮತ್ತೆ ಮರುಕಳಿಸುವ ಆತಂಕ ವ್ಯಕ್ತವಾಗಿದೆ.
ಜನವರಿ ೧, ೨೦೨೬ರೊಳಗೆ ಚೌಳಿ ಕಮಾನ್ ಪ್ರದೇಶದಿಂದ ಬಾಗ ಕಾರಂಜಾಗೆ ಎಲ್ಲಾ ಕುಟುಂಬಗಳನ್ನು ಸ್ಥಳಾಂತರಿಸಲು ಸರ್ಕಾರ ತಕ್ಷಣ ಕ್ರಮ ಕೈಗೊಳ್ಳಬೇಕೆಂದು ಮನವಿ ಮಾಡಲಾಗಿದೆ.ಒಂದು ವೇಳೆ ಜನವರಿ ೧ ಸ್ಥಳಾಂತರ ಮಾಡದಿದ್ದರೆ ಜನವರಿ ೨ ಕ್ಕೆ ಜಿಲ್ಲಾಧಿಕಾರಗಳ ಕಚೇರಿ ಎದುರೆ ಅಮರಣ ಉಪವಾಸ ಸತ್ಯಾಗ್ರಹ ಹಮ್ಮಿಕೊಳ್ಳಲಾಗುವುದೇಂದು ಜಿಲ್ಲಾಧಿಕಾರಿಗಳಿಗೆ ಎಚ್ಚರಿಸಿದ್ದಾರೆ.