ಪಿಡಿಒ ವಿರುದ್ಧ ಕ್ರಮಕ್ಕೆ ಆಗ್ರಹಿಸಿ ಮನವಿ

ಸಂಜೆವಾಣಿ ವಾರ್ತ
ಹುಮನಾಬಾದ್:ಡಿ.೧೪: ಪಂಚಾಯಿತಿ ಹಣ ದುರ್ಬಳಕೆ ಮಾಡಿಕೊಳ್ಳುತ್ತಿರುವ ಪಂಚಾಯಿತಿ ಅಭಿವೃದ್ದಿ ಅಧಿಕಾರಿ ದೇಶಪಾಂಡೆ ಅವರ ವಿರುದ್ಧ ಕ್ರಮ ಕೈಗೊಳ್ಳುವಂತೆ ಒತ್ತಾಯಿಸಿ, ಭಾರತೀಯ ದಲಿತ ಪ್ಯಾಂಥರ್ ವತಿಯಿಂದ ತಾಲೂಕು ಪಂಚಾಯಿತಿ ಕಾರ್ಯನಿರ್ವಾಹಕ ಅಧಿಕಾರಿ ದೀಪಿಕಾ ನಾಯ್ಕರ್ ಅವರಿಗೆ ಮನವಿಪತ್ರ ಸಲ್ಲಿಸಲಾಯಿತು.
ಭಾರತೀಯ ದಲಿತ ಪ್ಯಾಂಥರ ತಾಲ್ಲೂಕು ಅಧ್ಯಕ್ಷ ಗಣಪತಿ ಅಷ್ಟೂರೆ ಮಾತನಾಡಿ, ಸಮಸ್ಯೆ ಕುರಿತು ಕೇಳಲು ಹೋದವರಿಗೆ ಅಗತ್ಯ ಮಾಹಿತಿ ಒದಗಿಸುವುದು ದೂರದ ಮಾತು ಕನಿಷ್ಟ ಸೌಜನ್ಯದಿಂದ ಮಾತೂ ಆಡಿಸುವುದಿಲ್ಲ. ಈ ಅವರು ಈವರೆಗೆ ಡ್ರಾ ಮಾಡಿರುವ ಹಣದ ಬಗ್ಗೆ ಸಮಗ್ರ ತನಿಖೆ ಕೈಗೊಳ್ಳಬೇಕು ಎಂದು ಒತ್ತಾಯಿಸಿದರು.
ಈ ಸಂದರ್ಭದಲ್ಲಿ ಪ್ಯಾಂಥರ್ ಉಪಾಧ್ಯಕ್ಷ ಸಿದ್ಧಾರ್ಥ ಜಾನವೀರ, ಸುಶೀಲ ಭೋಲಾ, ವಿಠಲ್ ನಾಯಕ, ಅನಂತ ಮಾಳೆ, ವಿಶಾಲ ಸಿಂಧನಕೇರಿ, ಗೌತಮ ಜಾನವೀರ, ದಶರಥ ದಾಂಡೇಕರ್ , ಸಾಯಿ ಕುಮಾರ್ ಸೇರಿದಂತೆ ಉಪಸ್ಥಿತರಿದ್ದರು.
ಪಿಡಿಒ ದೇಶಪಾಂಡೆ ಈವರೆಗೆ ಎಲ್ಲಿಲ್ಲಿ ಕೆಲಸ ಮಾಡಿದ್ದಾರೋ ಎಲ್ಲ ಕಡೆ ಅವರ ಮೇಲೆ ಹಣ ದುರ್ಬಳಕೆ ಆರೋಪವಿದೆ. ಈಗ ಕೆಲಸ ಮಾಡುತ್ತಿರುವ ಗ್ರಾಮ ಪಂಚಾಯಿತಿಯಲ್ಲೂ ಸಹ ಅವರು ಲಕ್ಷಾಂತರ ರೂಪಾಯಿ ಹಣ ದುರ್ಬಳಕೆ ಮಾಡಿಕೊಂಡಿದ್ದು ಅವರು ವಿರುದ್ಧ ಕ್ರಮ ಜರುಗಿಸುವಂತೆ ಒತ್ತಾಯಿಸಿದರು