
ಬೀದರ,ಮೇ.೨೮: ತಾಲೂಕಿನ ಶ್ರೀಮಂಡಲ ಗ್ರಾಮದಲ್ಲಿ ಸರ್ಕಾರದಿಂದ ಮಂಜೂರಾದ ಕಂಪೌAಡ್ ವಾಲ್ ಕಾಮಗಾರಿಗೆ ೧೦ ಲಕ್ಷ ರೂ ಅನುದಾನ ಮಂಜೂರಾಗಿದ್ದು, ಈಗಾಗಲೇ ಅನುದಾನವು ಕೂಡ ಬಿಡುಗಡೆಯಾಗಿದೆ. ಆದರೆ ಕಂಪೌAಡ್ ವಾಲ್ ನಿರ್ಮಾಣ ಮಾಡದೇ ಈ ಅನುದಾನವನ್ನು ದುರುಪಯೋಗ ಪಡಿಸಿಕೊಳ್ಳಲಾಗಿದೆ
೨೦೨೨-೨೪ನೇ ಸಾಲಿನಲ್ಲಿ ಸಮುದಾಯ ಭವನ ಮಂಜೂರಾಗಿದ್ದು, ಮೊದಲನೇ ಕಂತು ೨೫ ರೂ ಲಕ್ಷ ಅನುದಾನ ಬಿಡುಗಡೆಯಾಗಿದ್ದು, ಕಾಮಗಾರಿ ಕೂಡ ಪ್ರಾರಂಭ ಆಗಿದೆ. ಆದರೆ ಸಮುದಾಯ ಭವನ ಕಾಮಗಾರಿಯು ಗುಣಮಟ್ಟದಿಂದ ಕೂಡಿಲ್ಲ.
ಶ್ರೀಮಂಡಲ ಗ್ರಾಮದಲ್ಲಿ ಸಮುದಾಯ ಭವನ ಕಾಮಗಾರಿಯ ಎರಡನೇ ಕಂತಿನ ಬಿಲ್ಲು ೨೫ ರೂ ಲಕ್ಷ ಅನುದಾನವನ್ನು ಬಿಡುಗಡೆ ಮಾಡದಂತೆ ಜಿಲ್ಲಾ ಅಧಿಕಾರಿಗಳು, ಅಲ್ಪಸಂಖ್ಯಾತರ ಕಲ್ಯಾಣ ಇಲಾಖೆಗೆ ಹಲವು ಬಾರಿ ದೂರುಗಳನ್ನು ಸಲ್ಲಿಸಲಾಗಿತ್ತು. ಆದರೆ ಕೂಡ ಎರಡನೇ ಕಂತಿನ ಅನುದಾನ ಬಿಡುಗಡೆ ಮಾಡಿದ್ದಾರೆ.
ಈ ವಿಷಯಗಳ ಬಗ್ಗೆ ಜಿಲ್ಲಾಧಿಕಾರಿಗಳಿಗೆ ಅಧಿಕಾರಿಗಳ ವಿರುದ್ಧ ದೂರು ಸಲ್ಲಿಸಿದರೂ ಕೂಡ ಇಲ್ಲಿಯವರೆಗೆ ಮಾನ್ಯ ಜಿಲ್ಲಾಧಿಕಾರಿಯವರು ಯಾವುದೇ ಕ್ರಮ ಕೈಗೊಳ್ಳದ ಕಾರಣ ಜಾಂಭವ ಯುವ ಸೇನೆ ಜಿಲ್ಲಾ ಸಮಿತಿಯ ವತಿಯಿಂದ ಜಿಲ್ಲಾಧಿಕಾರಿಗಳ ಕಚೇರಿಯ ಎದುರಿಗೆ ಪ್ರತಿಭಟನೆಯನ್ನು ಹಮ್ಮಿಕೊಳ್ಳಲಾಯಿತು ಪ್ರತಿಭಟನೆಯಲ್ಲಿ ಪೀಟರ್ ಶ್ರೀಮಂಡಲ್, ಸಾಮಸನ್ ಚಿಲ್ಲರ್ಗಿ, ಚಿದಾನಂದ ಮರಖಲ್, ಯೇಸುದಾಸ ಚಿಲ್ಲರ್ಗಿ, ರಾಹುಲ ರಾಯ್, ಸಿಮೊನ್ ಬೆನಕನಳ್ಳಿ, ಲಾಜರ್ ಚಿಲ್ಲರ್ಗಿ, ಅನೀಲ ಸೋಲಂಕೆ, ಬಾಬು ಶ್ರೀಮಂಡಲ, ಅಯಾಜ್ ಖಾನ್, ದೀಪಕ ಮರಖಲ್, ಸುಧಾಕರ ಶ್ರೀಮಂಡಲ, ಡೇವಿಡ್ ಕಂಗಟಿ, ಅರುಣ, ರಾಹುಲ, ನಿತಿನ ಚಿಲ್ಲರ್ಗಿ, ಅಜಯ, ರಾಹುಲ ಮೈಲೂರ್, ಅರುಣಾ, ಡೇವಿಡ್ ನಂದ್ಯಾಳ, ಆಕಾಶ ಇನ್ನಿತರರು ಇದ್ದರು