
ಬೆಂಗಳೂರು, ಮಾ. ೫- ರಾಜಧಾನಿ ಬೆಂಗಳೂರಿನ ರಾಜರಾಜೇಶ್ವರಿ ನಗರ ವಿಧಾನಸಭಾ ಕ್ಷೇತ್ರದ ನಾಗರಬಾವಿ ಸಮೀಪದ ಮಲ್ಲತ್ತಹಳ್ಳಿ ಮುದ್ದಿನಪಾಳ್ಯ ಮುಖ್ಯ ರಸ್ತೆಯಲ್ಲಿ ಕಾರ್ಯನಿರ್ವಹಿಸುತ್ತಿರುವ ಸುಖ ಬ್ರೂಬೆರಿ ಕಿಚನ್ ಎಂಬ ಬೃಹತ್ ಬಾರ್ ಮತ್ತು ರೆಸ್ಟೋರೆಂಟ್‌ಗೆ ಸಂಬಂಧಿಸಿದಂತೆ ಐದು ಇಲಾಖೆಗಳ ಅಧಿಕಾರಿಗಳ ಕಿಕ್ ಬ್ಯಾಕ್ ಪಡೆದು ಕಟ್ಟಡ ನಿರ್ಮಾಣಕ್ಕೆ ಅನುಮಾತಿ ನೀಡಿದರೆ ಎಂದು ಬಿಜೆಪಿ ಮುಖಂಡ ಎನ್ ಅರ್ ರಮೇಶ್ ವಿರುದ್ಧ ಅರೋಪ ಮಾಡಿದ್ದಾರೆ.
ಸುಮಾರು ೧,೮೫,೦೦೦ ಚದರ ಅಡಿ ವಿಸ್ತೀರ್ಣದ ಕಟ್ಟಡದಲ್ಲಿ ನಿರ್ಮಾಣಗೊಂಡಿರುವ ಈ ಬೃಹತ್ ಬಾರ್ & ರೆಸ್ಟೋರೆಂಟ್‌ನಲ್ಲಿ ಒಂದೇ ಸಮಯದಲ್ಲಿ ಸುಮಾರು ೨,೦೦೦ ಜನರಿಗೆ ಆಸನ ವ್ಯವಸ್ಥೆ ಇರುವುದಾಗಿ ತಿಳಿದುಬಂದಿದೆ.
ಆದರೆ ಈ ಕಟ್ಟಡ ಸಂಪೂರ್ಣವಾಗಿ ಅನಧಿಕೃತವಾಗಿ ನಿರ್ಮಾಣಗೊಂಡಿದೆ ಎಂದು ದಾಖಲೆಗಳ ಮೂಲಕ ಆರೋಪಿಸಿಸರೆ. ಬಿಬಿಎಂಪಿಯ ಜ್ಞಾನಭಾರತಿ ವಾರ್ಡ್ (೧೨೯) ವ್ಯಾಪ್ತಿಯ ಮಲ್ಲತ್ತಹಳ್ಳಿ ಗ್ರಾಮದ ಸರ್ವೆ ನಂ. ೮೩/೧ಎ ರಲ್ಲಿ ಇರುವ ಎರಡು ಪ್ರತ್ಯೇಕ ಸ್ವತ್ತುಗಳ ಮೇಲೆ ನಿರ್ಮಾಣವಾಗಿದೆ.
PID ೪೧೧ – ಮಾಲೀಕ: ಕೆ. ಸಿದ್ಧರಾಜು
PID ೪೧೨ – ಮಾಲೀಕರು:ಪಿ. ಭಾಗ್ಯ, ಏ. ಶರತ್, ಏ. ಪವನ್ ಕುಮಾರ್, ಏ. ನವನೀತ್ ಎರಡು ಪ್ರತ್ಯೇಕ ವಾಣಿಜ್ಯ ಕಟ್ಟಡಗಳಿಗೆ ನಕ್ಷೆ ಮಂಜೂರಾತಿ ಕೋರಿ ಅರ್ಜಿ ಸಲ್ಲಿಸಿದ್ದರೂ, ಬಳಿಕ ಒಂದೇ ಬೃಹತ್ ಕಟ್ಟಡ ನಿರ್ಮಿಸಲಾಗಿದೆ ಎಂದು ಆರೋಪಿಸಲಾಗಿದೆ.
ನಗರ ಯೋಜನೆ ಇಲಾಖೆಯ ಸಹಾಯಕ ನಿರ್ದೇಶಕ ಹನುಮಂತ ರಾಯಪ್ಪ ನಕ್ಷೆ ಮಂಜೂರಾತಿ ನೀಡಲು ಒಟ್ಟು ೬೬,೭೦,೮೫೫ ಶುಲ್ಕವನ್ನು ಬಿಬಿಎಂಪಿ ಖಾತೆಗೆ ಜಮೆ ಮಾಡುವಂತೆ ಡಿಮ್ಯಾಂಡ್ ನೋಟಿಸ್ ನೀಡಿದ್ದರು.
ಆದರೆ ಈ ಮೊತ್ತ ಪಾಲಿಕೆಯ ಖಾತೆಗೆ ಜಮೆಯಾಗದೇ ಅಧಿಕಾರಿಯೇ ದುರುಪಯೋಗ ಮಾಡಿಕೊಂಡಿದ್ದಾರೆ ಎಂಬ ಗಂಭೀರ ಆರೋಪ ಕೇಳಿಬಂದಿದೆ.























