
ಸೈದಾಪುರ:ಫೆ.೮:ಪಟ್ಟಣದ ಪ್ರಮುಖ ಪ್ರದೇಶದ ಬಸ್ ನಿಲ್ದಾಣದಕ್ಕೆ ಹೊಂದಿಕೊAಡ ಹೊರ ವಲಯದಲ್ಲಿರುವ ಚರಂಡಿಯ ನೀರು ಸರಿಯಾದ ರೀತಿಯಲ್ಲಿ ಸರಭರಾಜು ಆಗದೆ ರಸ್ತೆ ಮೇಲೆ ಆವಾರಿಸಿ ಸಂಚಾರಕ್ಕೆ ತೊಂದರೆ ಆಗಿರುವುದು ಅಲ್ಲದೆ ನಾಗರಿಕರಲ್ಲಿ ರೋಗದ ಭೀತಿಯನ್ನುಂಟು ಮಾಡುವಂತಿದೆ. ಬಸ್ ನಿಲ್ದಾಣದ ಸುತ್ತಲು ವಿವಿಧ ತಿಂಡಿ ತಿನಸುಗಳ ಅಂಗಡಿಗಳಿವೆ. ದುರ್ವಾಸನೆ ಸೇರಿದಂತೆ ಕೀಟಗಳ ಆವಳಿಯಿಂದ ಗ್ರಾಹಕರು ತೊಂದರೆ ಅನುಭವಿಸುವಂತಾಗಿದೆ. ಪ್ರಮುಖ ರಸ್ತೆಗೆ ಹೊಂದಿಕೊAಡ ಚರಂಡಿಯ ವ್ಯವಸ್ಥೆಯೇ ಈ ವಿಧವಾದರೆ ಗ್ರಾಮಗಳ ಒಳಗೆ ಇರುವ ಬಡವಾಣೆಗಳ ಚರಂಡಿಗಳ ಗತಿ ಏನು ಎಂಬುವುದು ನಾಗರಿಕರ ಆಕ್ರೋಶಕ್ಕೆ ಕಾರಣವಾಗಿದೆ. ಕೂಡಲೇ ಸಂಬAದಿಸಿದ ಅಧಿಕಾರಿಗಳು ಕ್ರಮ ಕೈಗೊಂಡು ಚರಂಡಿ ನೀರು ಸರಭರಾಜು ಆಗುವಂತೆ ಮಾಡಿ ಅನುಕೂಲ ಮಾಡಿಕೊಡವಂತೆ ಗ್ರಾಮಸ್ಥರು ಆಗ್ರಹಿಸಿದ್ದಾರೆ.



























