Home ಜಿಲ್ಲೆ ಶಾಂತಿಪಾಲನಾ ಸಭೆ

ಶಾಂತಿಪಾಲನಾ ಸಭೆ

ರಬಕವಿ-ಬನಹಟ್ಟಿ,ಫೆ7 : ನಮ್ಮ ದೇಶದಲ್ಲಿ ಅನೇಕ ಹಬ್ಬ ಜಾತ್ರೆ ಉರುಸ್ ಗಳು ಭಾವೈಕ್ಯತೆಯಿಂದ ಹಿಂದು ಮುಸ್ಲಿಂ ಸಮಾಜ ಬಾಂಧವರು ಸಡಗರದಿಂದ ಆಚರಿಸಿ ಸೌಹಾರ್ದತೆಯ ಪರಂಪರೆಯನ್ನು ಮುಂದುವರೆಸಿಕೊಂಡು ಹೋಗುತ್ತಿದ್ದಾರೆ. ಹಾಗೆಯೇ ಹೊಸೂರು ಉರಸನ್ನು ಕೂಡಾ ಶಾಂತಿ ಸೌಹಾರ್ದತೆಯಿಂದ ಆಚರಿಸಿ ಎಂದು ಜಮಖಂಡಿ ಡಿವೈಎಸ್‍ಪಿ ಸೈಯದ ರೋಷನ್ ಜಮೀರ ಹೇಳಿದರು,
ಅವರು ರಬಕವಿ ಬನಹಟ್ಟಿ ನಗರಸಭೆ ವ್ಯಾಪ್ತಿಯ ಹೂಸೂರ ಗ್ರಾಮದ ಹಜರತ್ ಪೀರ ಸಿರಾಜಸಾಬ ಮುರಾದಸಾಬ ದರ್ಗಾ ಉರುಸಿನ ನಿಮಿತ್ಯವಾಗಿ ಬನಹಟ್ಟಿ ಪೆÇೀಲೀಸ್ ಠಾಣೆಯಲ್ಲಿ ಹಮ್ಮಿಕೊಂಡ ಶಾಂತಿ ಪಾಲನಾ ಸಭೆಯಲ್ಲಿ ಭಾಗವಹಿಸಿ ಮಾತನಾಡಿದರು.


ಸಿಪಿಐ ಎಚ್. ಆರ್. ಪಾಟೀಲ ಮಾತನಾಡಿ, ಎಲ್ಲರೂ ಶಾಂತಿ ಸೌಹಾರ್ದತೆ ಯಿಂದ ಉರುಸು ಆಚರಣೆ ಮಾಡಬೇಕು ಉರುಸಿನ ಸಂದರ್ಭದಲ್ಲಿ ನಡೆಯುವ ಪ್ರತಿಯೊಂದು ಕಾರ್ಯಕ್ರಮಗಳಲ್ಲಿ ಯಾವುದೇ ಅಹಿತಕರ ಘಟನೆಗಳು ನಡೆಯದಂತೆ ಆಯಾ ಸಮೀತಿಯವರು ನೋಡಿಕೊಳ್ಳಬೇಕು ಅದಕ್ಕೆ ಬೇಕಾಗು ಸೂಕ್ತ ಬಂದೋಬಸ್ತ್ ವ್ಯವಸ್ಥೆ ಮಾಡಲಾಗುವುದು ಎಲ್ಲರೂ ಉರಿಸಿನ ಸಂದರ್ಭದಲ್ಲಿ ಬರುವ ಸಾರ್ವಜನಿಕರಿಗೆ ಯಾವುದೇ ರೀತಿಯ ತೊಂದರೆಯಾಗದಂತೆ ನೋಡಿಕೊಳ್ಳಬೇಕು ಎಂದರು,

ಈ ಸಂದರ್ಭದಲ್ಲಿ ಅಪರಾಧ ವಿಭಾಗದ ಪಿಎ ಪುರಂದರ ಪೂಜಾರಿ, ಹಿರಿಯರಾದ ಶಂಕರೆಪ್ಪ ಬುಜರುಖ, ಸಂಜು ಅಥಣಿ, ಅಶೋಕ ಹಳ್ಳೂರ, ಅಯೂಬಖಾನ ಹೊರಟ್ಟಿ, ಶಿರಾಜ ಹೊರಟ್ಟಿ, ನೂರಮಹ್ಮದ ಮುಜಾವರ ಸೇರಿದಂತೆ ಅನೇಕರು ಉಪಸ್ಥಿತರಿದ್ದರು.