
ಕೆ.ಆರ್. ಪುರ, ಅ.೭-ಆರ್ಥಿಕವಾಗಿ ಹಿಂದುಳಿದವರಿಗೆ ಆಧಾರವಾಗುವ ಮೂಲಕ, ಸಮಾಜಮುಖಿ ಸೇವಾಕಾರ್ಯಗಳಲ್ಲಿ ನೆಮ್ಮದಿ ಪಡೆದರೆ ಬದುಕು ಸಾರ್ಥಕ ಎಂದು ಮಹದೇವಪುರ ಬಿಜೆಪಿ ಕ್ಚೇತ್ರ ಕೋಶಾಧ್ಯಕ್ಷ ಎನ್.ಸುರೇಶ್ ಅವರು ತಿಳಿಸಿದರು.
ಮಹದೇವಪುರ ಕ್ಷೇತ್ರದ ದೊಡ್ಡಕನ್ನಲ್ಲಿ ಸಮೀಪದ ವಿಪ್ರೋ ಗೇಟ್ ಬಳಿ ಕಾರ್ಯಕರ್ತರು ಸೇವಾ ದಿನದ ಅಂಗವಾಗಿ ಆಯೋಜಿಸಿದ್ದ ವಿವಿಧ ಸೇವಾ ಕಾರ್ಯಗಳಲ್ಲಿ ಬಡ. ಮಹಿಳೆಯರಿಗೆ ಬಾಗಿನ ಹಾಗೂ ಆಟೋ ಚಾಲಕರಿಗೆ ಸಮವಸ್ತ್ರ ವಿತರಣೆ ಮಾಡಿ ಮಾತನಾಡಿದರು.
ಹಲವು ಸೇವಾ ಕಾರ್ಯಗಳ ಮೂಲಕ ತಮ್ಮ ಹುಟ್ಟುಹಬ್ಬ ಆಚರಣೆ ಮಾಡಿರುವು ಸಂತಸ ತಂದಿದ್ದು,ಪ್ರತಿವರ್ಷ ಸೇವಾಕಾರ್ಯಕ್ಕೆ ಹೆಚ್ಚಿನ ಆದ್ಯತೆ ನೀಡುತ್ತೆನೆ ಎಂದು ಹೇಳಿದರು.
ಜನ್ಮದಿನವನ್ನು ಸೇವಾದಿನಾವಾಗಿಸಿಕೊಂಡು ಜನಸೇವೆ ಮಾಡಬೇಕೆಂದು ನಮ್ಮ ಜೀವನ ಸಾರ್ಥಕವಾಗುತ್ತದೆ ಎಂಬ ನಾನುಡಿಯನ್ನು ನಾಯಕರಾದ ಅರವಿಂದ ಲಿಂಬಾವಳಿ ಅವರು ತೊರಕಿಸಿಕೊಟ್ಟ ಹಾದಿಯಲ್ಲಿ ಸಾಗುತ್ತಿದೇವೆ ಎಂದರು.
ಇದೇವೇಳೆ ಅಭಿಮಾನಿಗಳು ಪುಷ್ಪನಮನ ಸಲ್ಲಿಸಿ, ಕೇಕ್ ಕತ್ತರಿಸಿ ಸಂಭ್ರಮಿಸಿದರು. ಬಿಜೆಪಿ ಮುಖಂಡರಾದ ವಿ.ಆನಂದ್, ರಾಜೇಶ್, ಕೇಶವ, ವರ್ತೂರ್ ದೀಲಿಪ್ ಸೇರಿದಂತೆ ಮತ್ತಿತರರು ಇದ್ದರೂ.






















