ಮನುಷ್ಯನಿಗೆ ನೆಮ್ಮದಿಯೇ ಅತಿ ದೊಡ್ಡ ಸಂಪತ್ತು : ಡಾ.ಬಸವಲಿಂಗ ಅವಧೂತರು

ಹುಮನಾಬಾದ್: ಅ.23:ಮನುಷ್ಯನಿಗೆ ನೆಮ್ಮದಿಯೇ ಅತಿ ದೊಡ್ಡ ಸಂಪತ್ತು. ಹೀಗಾಗಿ ಬಡತನವೇ ಇರಲಿ, ಸಿರಿತನವೇ ಇರಲಿ ಸಂತೃಪ್ತಿಯಿಂದ ಬದುಕಬೇಕು ಎಂದು ತೆಲಂಗಾಣದ ಜಹೀರಾಬಾದ್ ತಾಲ್ಲೂಕಿನ ಮಲ್ಲಯ್ಯಗಿರಿ ಹಾಗೂ ದೇಗಲಮಡಿ ಆಶ್ರಮದ ಪೀಠಾಧಿಪತಿ ಡಾ. ಬಸವಲಿಂಗ ಅವಧೂತರು ನುಡಿದರು.

ತಾಲ್ಲೂಕಿನ ಹುಡಗಿ ಗ್ರಾಮದ ವೀರಕ್ತ ಮಠದಲ್ಲಿ ಶ್ರೀ ಗುರು ಚನ್ನಮಲ್ಲೇಶ್ವರ ಪುಣ್ಯ ಸ್ಮರಣೋತ್ಸವದ ಅಂಗವಾಗಿ ಈಚೆಗೆ ನಡೆದ ಶ್ರೀ ಹಾನಗಲ್ಲಿ ಗುರುಕುಮಾರೇಶ್ವರ ಪುರಾಣ ಮಂಗಲ ಸಮಾರೋಪ ಸಮಾರಂಭದಲ್ಲಿ ದಿವ್ಯ ಸಾನಿಧ್ಯ ವಹಿಸಿ ಅವರು ಮಾತನಾಡಿದರು.

ಮಕ್ಕಳು ಮೊಬೈಲ್‍ನ್ನು ಜ್ಞಾನವೃದ್ಧಿಗೆ ಮಾತ್ರ ಬಳಕೆ ಮಾಡಿಕೊಳ್ಳಬೇಕು. ಇಂದಿನ ಕೇಲ ಮಕ್ಕಳು ಕೆಟ್ಟ ಚಟಕ್ಕೆ ಬಿದ್ದು ತಮ್ಮ ಜೀವನ ವ್ಯರ್ಥ ಮಾಡಿಕೊಳ್ಳುತ್ತಿದ್ದಾರೆ. ಎಂದ ಅವರು ಕೆಟ್ಟ ಚಟಗಳಿಂದ ಆರೋಗ್ಯ ಹಾಳಾಗುತ್ತದೆ ಪೆÇೀಷಕರು ಮಕ್ಕಳನ್ನೂ ಪೆÇಷಿಸಿಕೊಳ್ಳಬೇಕು ಎಂದು ಸಲಹೆ ನೀಡಿದರು.

ಮಹಾತ್ಮರ ಜೀವನ ಸಾಧನೆ ಪುಸ್ತಕಗಳನ್ನು ಓದಿ ಪ್ರೇರಣೆ ಪಡೆದು ಅವರು ಹಾಕಿ ಕೊಟ್ಟ ಮಾರ್ಗದಲ್ಲಿ ನಡೆಯಬೇಕು. ಶಕ್ತಿ ಇರುವಾಗಲೇ ಎಲ್ಲರೂ ಕೆಲಸ ಮಾಡಿ ಬದುಕಬೇಕು, ಪರಮಾತ್ಮನನ್ನು ದಿನಾಲು ಬೆಳಗಿನ ಜಾವ ಪೂಜಿಸುವುದರ ಜತೆಗೆ ಜನ್ಮಕೊಟ್ಟ ತಂದೆ, ತಾಯಿಯ ಸೇವೆ ಮಾಡಬೇಕು ಎಂದರು. ನಾವು ಎಲ್ಲಿಂದ ಬಂದಿದ್ದೇವೆ. ಎಲ್ಲಿಗೆ ಹೋಗಲಿದ್ದೇವೆ ಎಂಬುದ್ದನ್ನು ಅರ್ಥ ಮಾಡಿಕೊಳ್ಳಬೇಕು. ಗಳಿಸಿದ ಎಲ್ಲವನ್ನೂ ಇಲ್ಲೇ ಬಿಟ್ಟು ಹೋಗಲಿದ್ದೇವೆ. ಸತ್ಕಾರ್ಯಗಳ ಪುಣ್ಯ ಮಾತ್ರ ನಮ್ಮೊಂದಿಗೆ ಬರಲಿದೆ ಎಂದರು.

ಶಾಸಕ ಡಾ.ಸಿದ್ದಲಿಂಗಪ್ಪಾ ಪಾಟೀಲ ಅವರು ಮಾತನಾಡಿ, ಹುಡಗಿ ವೀರಕ್ತ ಮಠದ ಶ್ರೀ ಗುರು ಚನ್ಮಮಲ್ಲೇಶ್ವರ ಮಹಿಮೆ ಅಪಾರವಾಗಿದ್ದು, ಮಠದ ಅಭಿವೃದ್ಡಿಗೆ ಅಗತ್ಯ ಸಹಾಯ, ಸಹಕಾರ ನೀಡುವುದಾಗಿ ತಿಳಿಸಿದರು.

ಹುಡಗಿ ವೀರಕ್ತ ಮಠದ ಪುಜ್ಯ ಶ್ರೀ ಚನ್ನಮಲ್ಲ ದೇವರು ಸಾನಿಧ್ಯ ವಹಿಸಿ ಮಾತನಾಡಿ, ಜೀವನದಲ್ಲಿ ಎಲ್ಲರು ಸನ್ಮಾರ್ಗದಲ್ಲಿ ನಡೆಯುವುದರ ಜತೆಗೆ ಗುರುವಿನ ಉಪದೇಶಗಳನ್ನು ಚಾಚೂತಪ್ಪದೆ ಪಾಲಿಸಬೇಕು, ದೇವರು ಕೊಟ್ಟ ಮನುಷ್ಯ ಜನ್ಮ ಅಮೂಲ್ಯವಾಗಿದೆ. ಅದನ್ನು ಒಳ್ಳೆಯ ನಡೆ, ನುಡಿಯ ಮೂಲಕ ಅದನ್ನು ಸಾರ್ಥಕ ಮಾಡಿಕೊಳ್ಳಬೇಕು. ಎಂದು ನುಡಿದರು.

ಹೀರನಾಗಾಂವ್‍ನ ಜಯಶಾಂತಲಿಂಗ ಮಹಾಸ್ವಾಮಿ, ಉದಗೀರ ಹಾವಗಿಸ್ವಾಮಿ ಮಠದ ಡೊಣಗಾಂವ್‍ನ ಡಾ. ಶಂಭುಲಿಂಗ ಶಿವಾಚಾರ್ಯ, ಹುಡಗಿ ಹಿರೇಮಠದ ಸೋಮೇಶ್ವರ ಶಿವಾಚಾರ್ಯ, ಸಾನಿಧ್ಯ ವಹಿಸಿದರು. ಇಲ್‍ಕಲ್ (ಗುಡೂರ)ನ್ ಹಿರೇಮಠದ ಶ್ರೀ ಅನ್ನದಾನೇಶ್ವರ ಸ್ವಾಮಿಗಳಿಂದ ಅಕ್ಟೋಬರ್ 13 ರಿಂದ 19 ವರೆಗೆ ಶ್ರೀ ಹಾನಗಲ್ಲಿ ಗುರುಕುಮಾರೇಶ್ವರ ಪುರಾಣ ಜರುಗಿತು. ಸಂಗೀತ ಕಲಾವಿದ ಚಿದಾನಂದ ಝಳಕಿ(ಕೆ), ಖ್ಯಾತ ತಬಲಾವಾದಕ ಜ್ಞಾನೇಶ್ವರ ಬೆಳಕೋಟಾ ಅವರು ಸಂಗೀತ ಕಾರ್ಯಕ್ರಾಮ ನಡೆಸಿಕೊಟ್ಟರು, ನಿವೃತ್ತ ಶಿಕ್ಷಕ ಶಶಿಕಾಂತ ಕೋಡ್ಲಾ, ನಿರೂಪಿಸಿದರು. ಕಾರ್ಯಕ್ರಮದಲ್ಲಿ ವೀರಕ್ತಮಠದ ಸಮಸ್ತ ಸದ್ಭಕ್ತ ಮಂಡಳಿ ಅವರು ಉಪಸ್ಥಿತರಿದ್ದರು