ಗಣೇಶ ಚತುರ್ಥಿ ಹಾಗೂ ಈದ್ ಮಿಲಾದ್ ಪ್ರಯುಕ್ತವಾಗಿ ಶಾಂತಿಸಭೆ

ಗುರುಮಠಕಲ್:ಅ.೧೯:ಗಣೇಶ ಚತುರ್ಥಿ ಹಾಗೂ ಈದ್ ಮಿಲಾದ್ ಹಬ್ಬವನ್ನು ಧಾರ್ಮಿಕ ಭಾವನೆಗಳಿಗೂ ಧಕ್ಕೆಯಾಗದಂತೆ, ಶಾಂತಿ ಸೌಹಾರ್ದತೆಯೊಂದಿಗೆ ಸಹೋದರತ್ವ ಭಾವದೊಂದಿಗೆ ಬೆರೆತು ಆಚರಿಸಿ ಎಂದು ಡಿ ವಯ್ ಎಸ್ ಪಿ ಸುರೇಶ ಎಂ ಹೇಳಿದರು.ತಾಲೂಕಿನ ಸಮೀಪದ ಚಂಡರಕಿ ಗ್ರಾಮದಲ್ಲಿ ನಡೆದ ಶಾಂತಿ ಸಭೆಯಲ್ಲಿ ಮಾತನಾಡಿದ ಅವರು ಹಬ್ಬದ ವೇಳೆ ಕಾನೂನು ಸುವೆವಸ್ಥೆಗೆ ಯಾವುದೇ ಸಮಸ್ಯೆಗಳು ಎದುರಾಗದಂತೆ ಎಲ್ಲಾ ಸಮುದಾಯದ ಜನರು ಪರಸ್ಪರ ಸಹಕಾರ ಮತ್ತು ಸಹಾನುಭೂತಿಯಿಂದ ಸಹೋದರತ್ವ ಭಾವದಿಂದ ನಡೆದುಕೊಳ್ಳಬೇಕು ಎಂದು ಕರೆನೀಡಿದರು. ಈ ಸಂದರ್ಭದಲ್ಲಿ ಪಿ ಐ ವೀರಣ್ಣ ದೊಡ್ಡಮನಿ ಮಾತನಾಡಿ ಗಣೇಶ ಮೂರ್ತಿಗಳ ವಿಸರ್ಜನೆ ಸಮಯದಲ್ಲಿ ನಿಮ್ಮ ಸಣ್ಣ ಪುಟ್ಟ ಮಕ್ಕಳು ಮೆರವಣಿಗೆಗೆ ಹೋಗದಂತೆ ಮಕ್ಕಳ ಪಾಲಕ ಪೋಷಕರು ಗಮನಹರಿಸಿ ಕೊಳ್ಳಬೇಕೆಂದು ಮನವಿ ಮಾಡಿದರು. ಜೋತೆಗೆ ಪ್ಲಾಸ್ಟರ್ ಆಫ್ ಪ್ಯಾರಿಸ್ (ಪಿ ಒ ಪಿ) ಮೂರ್ತಿಗಳನ್ನು ಸರಕಾರ ನಿಷೇದಿಸಿರುವುದರಿಂದ ಯಾರು ಅವನ್ನು ಖರಿದಿಸಬಾರದು ಹಾಗೂ ಸಾರ್ವಜನಿಕರ ಸುರಕ್ಷತೆಗಾಗಿ ಅಗತ್ಯ ಪೋಲಿಸ್ ಸಿಬ್ಬಂದಿಯನ್ನು ನಿಯೋಜಿಸಲಾಗುವುದು ಎಂದು ತಿಳಿಸಿದರು. ತಹಸೀಲ್ದಾರ್ ಶಾಂತಗೌಡ ಬಿರಾದಾರ್ ಅವರು ಶಾಂತಿಸಭೆಯನ್ನು ಉದ್ದೇಶಿಸಿ ಮಾತನಾಡುತ್ತ ಪರಿಸರ ಸ್ನೇಹಿ ಗಣೇಶ ಮೂರ್ತಿಗಳನ್ನು ಪ್ರತಿಷ್ಠಾಪಿಸಿ, ನಮ್ಮ ಸುತ್ತ ಮುತ್ತಲಿರುವ ನ?ಸರ್ಗಿಕ ಪರಿಸರವನ್ನು ಕಾಪಾಡುವಲ್ಲಿ ನಮ್ಮೆಲ್ಲರ ಪಾತ್ರ ಬಹಾಳ ದೊಡ್ಡದಿದೆ ಆದುದರಿಂದ ತಾವೆಲ್ಲರೂ ಸಹಕರಿಸಬೇಕು ಮತ್ತು ವಿಸರ್ಜನೆಯ ನಂತರ ತ್ಯಾಜ್ಯವಸ್ತುಗಳನ್ನು ನಿಗದಿತ ಸ್ಥಳದಲ್ಲೇ ಹಾಕುವಂತೆ ಸೂಚಿಸಿದರು. ಕಾರ್ಯಕ್ರಮದಲ್ಲಿ ಗ್ರಾ. ಪಂ. ಅಭಿವೃದ್ಧಿ ಅಧಿಕಾರಿ ಗೀತಾ ಪತ್ತಾರ ಸೇರಿದಂತೆ ಗ್ರಾಮದ ಸಾರ್ವಜನಿಕರು ಇದ್ದರು.