ಸನ್ಮಾರ್ಗದತ್ತ ನಡೆದಾಗ ಜೀವನದಲ್ಲಿ ನೆಮ್ಮದಿ:ರಾಜಶೇಖರ್ ಶಿವಾಚಾರ್ಯರು ಕರೆ

ಕಲಬುರಗಿ:ಅ.27:ಮನುಷ್ಯನ ಜೀವನದಲ್ಲಿ ನಾವೆಲ್ಲರೂ ಒಳ್ಳೆ ರೀತಿಯಿಂದ ನಡೆದಾಗ ಜೀವನದಲ್ಲಿ ಸ್ವಾರ್ಥಕತೆ ಕಾಣಲು ಸಾಧ್ಯವೆಂದು ಚವಪೂರಿ ಹಿರೇಮಠ ಪೂಜ್ಯ ಶ್ರೀ ಡಾ.ರಾಜಶೇಖರ ಶಿವಾಚಾರ್ಯರು ತಿಳಿಸಿದರು.
ಅವರು ಕಲಬುರ್ಗಿ ನಗರದ ಗೋಕುಲ್ ನಗರ ಜೆಡಿಎ ಲೇಔಟ್ ಫಿಲ್ಟರ್ ಬೇಡ ರಸ್ತೆಯಲ್ಲಿರುವ ಶ್ರೀ ಶಿವ ಮಂದಿರ ಟ್ರಸ್ಟ್ ಹಾಗೂ ಅಕ್ಕ-ತಂಗಿಯರ ದೇವಾಲಯ ದಲ್ಲಿ ನಿರ್ಮಿಸಿದ ನೂತನ ಶ್ರೀ ಶಿವ ಮಂದಿರ ಧಾರ್ಮಿಕ ಸಾಂಸ್ಕøತಿಕ ಭವನ ದ ಉದ್ಘಾಟನಾ ಕಾರ್ಯಕ್ರಮದ ಸಮ್ಮುಖ ವಹಿಸಿ ಮಾತನಾಡಿದರು.
ಶ್ರೀಮ.ನಿ ಪ್ರ.ಸ್ವ ಗುರುಪಾದಲಿಂಗ ಮಹಾ ಶಿವಯೋಗಿಗಳು ಮುತ್ಯಾನ ಬಬಲಾದ ಅವರ ಅಮೃತ ಹಸ್ತದಿಂದ ಶಿವ ಮಂದಿರ ಟ್ರಸ್ಟ್ ಹಾಗೂ ಅಕ್ಕತಂಗಿಯರ ದೇವಾಲಯದಲ್ಲಿ ನಿರ್ಮಿಸಿದ ಧಾರ್ಮಿಕ ಸಂಸ್ಕೃತಿಕ ಭವನವನ್ನು ಲೋಕಾರ್ಪಣೆ ಮಾಡಿದರು
ಸಮ್ಮುಖ ವಹಿಸಿ ಮಾತನಾಡಿದ ಪೂಜ್ಯ ಶ್ರೀ ಡಾ” ರೇವಣಸಿದ್ದ ಶಿವಾಚಾರ್ಯರು ಮಾತನಾಡುತ್ತಾ ಇಂದಿನ ದಿನಮಾನಗಳಲ್ಲಿ ತಮ್ಮ ತಮ್ಮ ಮನೆಯಂಗಳದಲ್ಲಿ ಯಾವುದೇ ಕಾರ್ಯಕ್ರಮ ಮಾಡಬೇಕಾದರೆ ಬಹಳ ಕಷ್ಟ ಧಾರ್ಮಿಕ ಹಾಗೂ ಇನ್ನಿತರ ಕಾರ್ಯಕ್ರಮ ಮಾಡಬೇಕಾದರೆ ಇಂತಹ ಸಂಸ್ಕೃತಿಕ ಭವನ ಬಹಳ ಅಗತ್ಯವೆಂದು ಅವರು ಹೇಳಿದರು.
ಕಾರ್ಯಕ್ರಮದ ಅಧ್ಯಕ್ಷತೆಯನ್ನು ಶ್ರೀ ಶರಣಬಸಪ್ಪ ಪಾಟೀಲ್ ಅಷ್ಟಗಿ ಶ್ರೀ ಶಿವಮಂದಿರ ಟ್ರಸ್ಟ್ ಹಾಗು ಅಕ್ಕತಂಗಿ ದೇವಾಲಯ
ಮುಖ್ಯ ಅತಿಥಿಗಳಾಗಿ ಶ್ರೀಪ್ರವೀಣ ಪಾಟೀಲ ಹರವಾಳ ಅಧ್ಯಕ್ಷರು ಜೆಸ್ಕಾಂ ಕಲ್ಬುರ್ಗಿ ಶ್ರೀಮತಿ ಜಯಶ್ರೀ ಬಸವರಾಜ ಮತ್ತಿಮೂಡ ಮಾತನಾಡಿದರು
ಮಹಾನಗರ ಪಾಲಿಕೆ ಸದಸ್ಯರ ಶ್ರೀ ದಿಗಂಬರ ನಾಡಗೌಡ ಶ್ರೀ ಮಂಜುನಾಥ್ ಹವಾಲ್ದಾರ ಎಇಇ ಲೋಕೋಪಯೋಗಿ ಇಲಾಖೆ ಕಲಬುರ್ಗಿ ಶ್ರೀರಾಮಚಂದ್ರ ಅವರಳ್ಳಿ ಬಿಜೆಪಿ ಮುಖಂಡರು
ಶಿವಾನಂದ ರಾಠೋಡ ಉಪಾಧ್ಯಕ್ಷರು ಶ್ರೀ ಶಿವ ಮಂದಿರ ಹಾಗೂ ಅಕ್ಕತಂಗಿ ಟ್ರಸ್ಟ್ ಕಲ್ಬುರ್ಗಿ
ಸಹದೇವ ಬಿರಾದಾರ ಕಾರ್ಯದರ್ಶಿಗಳು ಶ್ರೀ ಶಿವ ಮಂದಿರ ಹಾಗೂ ಅಕ್ಕ ತಂಗಿ ಟ್ರಸ್ಟ್ ಕಲ್ಬುರ್ಗಿ
ರೇವಪ್ಪ ಸೊರಡೆ ಗೋಕುಲ ನಗರ ಗೋಪಾಲ ಪಾಲಾದಿ ಉದ್ಯಮಿದಾರರ ಕಲಬುರ್ಗಿ ಶಿವಾನಂದ ಮಾಳಗಿ ಶರಣು ಆಲಗೂಡ
ಶಿವಶಂಕರ ಬಿರಾದಾರ ಹಾಗೂ ಕಲಾತಂಡದವರಿಂದ ಸಂಗೀತ ಕಾರ್ಯಕ್ರಮ ಈ ಕಾರ್ಯಕ್ರಮದ ನಿರೂಪಣೆಯನ್ನು ಶ್ರೀ ಪರಮೇಶ್ವರ ಚೀಲಿ ವರನಾಳ ಅವರಿಂದ
ಈ ಪವಿತ್ರ ಕಾರ್ಯಕ್ರಮದಲ್ಲಿ ಬಡಾವಣೆಯ ಸದ್ಭಕ್ತರು ಭಾಗವಹಿಸಿ ಕಾರ್ಯಕ್ರಮದಲ್ಲಿ ಭಾಗವಹಿಸಿದರು ಶಿವ ಮಂದಿರ್ ಅಕ್ಕತಂಗಿ ದೇವಾಲಯ ಟ್ರಸ್ಟ್ ಅಧ್ಯಕ್ಷರು ಉಪಾಧ್ಯಕ್ಷರು ಸರ್ವ ಸದಸ್ಯರು ಬಡಾವಣೆ ಸದ್ಭಕ್ತರು ಭಾಗವಹಿಸಿದ್ದರು