
ಕಾಳಗಿ: ಜ.೨೦:ತಾಲ್ಲೂಕಿನ ಕೊಡ್ಲಿ ಗ್ರಾಮ ಪಂಚಾಯತಿನಲ್ಲಿ ಮಹಾತ್ಮ ವೇಮನ ಜಯಂತಿ ಆಚರಣೆಗೆ ಸಂಬAಧಿಸಿದAತೆ ಸರಕಾರದ ಸ್ಪಷ್ಟ ಆದೇಶ ಇದ್ದರೂ, ಗ್ರಾಮ ಪಂಚಾಯತಿಯ ಪಿಡಿಒ ಅವರು ಜಯಂತಿ ಕಾರ್ಯಕ್ರಮಕ್ಕೆ ಹಾಜರಾಗದೆ ನಿರ್ಲಕ್ಷ್ಯ ತೋರಿರುವುದು ಸಾರ್ವಜನಿಕ ಆಕ್ರೋಶಕ್ಕೆ ಕಾರಣವಾಗಿದೆ.
ಸರಕಾರದ ಮಾರ್ಗಸೂಚಿಯಂತೆ ಮಹಾಪುರುಷರ ಜಯಂತಿಗಳನ್ನು ಸರಕಾರಿ ಕಚೇರಿಗಳಲ್ಲಿ ಕಡ್ಡಾಯವಾಗಿ, ಸಮಯಕ್ಕೆ ಸರಿಯಾಗಿ ಆಚರಿಸಬೇಕೆಂಬ ನಿಯಮವಿದ್ದರೂ, ಕೊಡ್ಲಿ ಗ್ರಾಮ ಪಂಚಾಯತಿಯಲ್ಲಿ ಪಿಡಿಒ ಸೇರಿದಂತೆ ಕೆಲ ಸಿಬ್ಬಂದಿಗಳು ಕಾರ್ಯಕ್ರಮಕ್ಕೆ ಗೈರಾಗಿರುವುದು ಗ್ರಾಮಸ್ಥರಲ್ಲಿ ತೀವ್ರ ಅಸಮಾಧಾನ ಮೂಡಿಸಿದೆ. ಬೆಳಿಗ್ಗೆ ನಿಗದಿತ ಸಮಯಕ್ಕೆ ಜಯಂತಿ ಆಚರಣೆ ನಡೆಯಬೇಕಿದ್ದರೂ, ಬೆಳಿಗ್ಗೆ ೧೧.೩೦ರ ಸುಮಾರಿಗೆ ಪಿ ಡಿ ಓ ಆಗಮಿಸಿದರು ಇನ್ನೂ ಕೆಲವೊಬ್ಬರು ‘ನಾಮಕ್ಕೆ ವಾಸ್ತೇ’ ಎಂಬAತೆ ಆಗಮಿಸಿದ್ದು, ಸರಕಾರಿ ಆದೇಶವನ್ನು ಹಾಸ್ಯಾಸ್ಪದವಾಗಿ ತೆಗೆದುಕೊಂಡಿರುವುದಕ್ಕೆ ಉದಾಹರಣೆಯಾಗಿದೆ ಎಂದು ಸಾರ್ವಜನಿಕರು ಆರೋಪಿಸಿದ್ದಾರೆ.
ಗ್ರಾಮದ ಹಿರಿಯರು ಹಾಗೂ ಸಾರ್ವಜನಿಕರು, “ಮಹಾತ್ಮ ವೇಮನವರಂತಹ ಮಹಾನ್ ಸಮಾಜ ಸುಧಾರಕರ ಜಯಂತಿಯನ್ನು ಈ ರೀತಿ ನಿರ್ಲಕ್ಷ್ಯ ಮಾಡುವುದು ಅತ್ಯಂತ ಖಂಡನೀಯ. ಇದು ಸರಕಾರಿ ಅಧಿಕಾರಿಗಳ ಬೇಜವಾಬ್ದಾರಿತನ ಹಾಗೂ ಕರ್ತವ್ಯ ಲೋಪದ ಸ್ಪಷ್ಟ ಪ್ರತಿಬಿಂಬ” ಎಂದು ಆಕ್ರೋಶ ವ್ಯಕ್ತಪಡಿಸಿದ್ದಾರೆ. ಕೆಲ ಗ್ರಾಮಸ್ಥರು ಪಿಡಿಒ ಅವರ ನಡೆಗೆ ಹಿಡಿ ಶಾಪ ಹಾಕುತ್ತಾ, ಅಧಿಕಾರಿಗಳ ವಿರುದ್ಧ ತೀವ್ರ ಅಸಮಾಧಾನ ವ್ಯಕ್ತಪಡಿಸಿದ್ದಾರೆ ಎನ್ನಲಾಗಿದೆ.
ಈ ಕುರಿತು ಪ್ರತಿಕ್ರಿಯೆ ನೀಡಿದ ತಾಲ್ಲೂಕು ಪಂಚಾಯತ ಕಾರ್ಯನಿರ್ವಾಹಕಾಧಿಕಾರಿ ಬಸಲಿಂಗಪ್ಪ ಡಿಗ್ಗಿ ಅವರು,
“ವಿಷಯ ತಿಳಿದುಕೊಂಡು ಸಹ ಜಯಂತಿಗೆ ಹಾಜರಾಗದ ಸಿಬ್ಬಂದಿಗಳು ಹಾಗೂ ಪಿಡಿಒ ವಿರುದ್ಧ ಶಿಸ್ತು ಕ್ರಮ ಕೈಗೊಳ್ಳಲಾಗುವುದು” ಎಂದು ಸ್ಪಷ್ಟ ಹೇಳಿಕೆ ನೀಡಿದ್ದಾರೆ.
ಆದರೆ ಮತ್ತೊಂದೆಡೆ, ಕೊಡ್ಲಿ ಪಿಡಿಒ ದೆವಿಂದ್ರಪ್ಪ ಪೂಜಾರಿ ಅವರು,
“ಜಿಲ್ಲಾ ಪಂಚಾಯತಿನಲ್ಲಿ ಕೆಲಸ ಇರುವ ಕಾರಣ ನಾನು ಹೋಗಿದ್ದೆ. ನಮ್ಮ ಸಿಬ್ಬಂದಿಗಳು ಜಯಂತಿ ಮಾಡುತ್ತಾರೆ” ಎಂದು ಬೆಜವಾಬ್ದಾರಿ ರೀತಿಯಲ್ಲಿ ಪ್ರತಿಕ್ರಿಯೆ ನೀಡಿದ್ದಾರೆ ಎಂದು ತಿಳಿದುಬಂದಿದೆ.
ಇನ್ನೂ ಗಂಭೀರ ಸಂಗತಿ ಎಂದರೆ, ಈ ಅವ್ಯವಸ್ಥೆಯನ್ನು ಪ್ರಶ್ನಿಸಿದ ವರದಿಗಾರರ ವಿರುದ್ಧ ಗ್ರಾಮ ಪಂಚಾಯತಿಯ ಕಂಪ್ಯೂಟರ್ ಆಪರೇಟರ್ ಪ್ರಭುದಾಸ್ ರಾಠೋಡ ಅವರು,
“ಯಾರು ಇದ್ದರೂ ಏನು ಕೇಳುವವರು? ಯಾರು ಏನು ಮಾಡ್ತಿರಾ ಮಾಡಿ ಕೊಳ್ಳಿ” ಎಂದು ಅವಾಚ್ಯ ಶಬ್ದಗಳಿಂದ ನಿಂದಿಸಿರುವ ಆರೋಪ ಕೇಳಿಬಂದಿದೆ. ಸರಕಾರಿ ಕಚೇರಿಯೊಳಗೆ ಸಾರ್ವಜನಿಕ ಸೇವಕರೇ ಈ ರೀತಿಯ ಅಸಭ್ಯ ವರ್ತನೆ ತೋರಿರುವುದು ಆಡಳಿತದ ಶಿಸ್ತಿನ ಮೇಲೆಯೇ ಪ್ರಶ್ನಾರ್ಥಕ ಚಿಹ್ನೆ ಮೂಡಿಸಿದೆ.
ಒಟ್ಟಾರೆ, ಸರಕಾರದ ಆದೇಶ, ಮಹಾಪುರುಷರ ಗೌರವ, ಸಾರ್ವಜನಿಕ ಭಾವನೆ-ಗಳಿಗೆ ಕೊಡ್ಲಿ ಗ್ರಾಮ ಪಂಚಾಯತಿಯ ಈ ನಡೆಗೆ ಸಂಬAಧಪಟ್ಟ ಮೇಲಾಧಿಕಾರಿಗಳು ತಕ್ಷಣವೇ ಗಂಭೀರ ಕ್ರಮ ಕೈಗೊಳ್ಳಬೇಕು ಎಂಬ ಒತ್ತಾಯ ಸಾರ್ವಜನಿಕ ವಲಯದಲ್ಲಿ ಜೋರಾಗಿದೆ.























