
ಕೋಲಾರ,ಮಾ,೭-ಕೋಲಾರ ತಾಲ್ಲೂಕು ಮಾರ್ಜೆನಹಳ್ಳಿ ಪಂಚಾಯಿತಿಯ ಪಂಚಾಯಿತಿ ಅಭಿವೃದ್ಧಿ ಅಧಿಕಾರಿಯಾದ ಮಧುಮತಿ ರವರು ಕೂತಂಡಹಳ್ಳಿ ಗ್ರಾಮದ ದಲಿತ ಕುಟುಂಬದ ಲಕ್ಷ್ಮಮ್ಮ ಕೋಂ ಬೈರಪ್ಪ ನವರ ನಿವೇಶನದ ವಿಚಾರವಾಗಿ ಶುಕ್ರವಾರ ೧೧ ಗಂಟೆಗೆ ಸ್ಥಳ ಪರಿಶೀಲನೆ ಮತ್ತು ಮಹಜರ್ ಮಾಡಲು ಸಮಯ ನಿಗಧಿಪಡಿಸದ್ದರು.
ಎದುರುದಾರರ ಪರವಾಗಿ ಶಾಮಿಲಾಗಿರುವ ಮಧುಮತಿಯವರು ಸ್ಥಳಕ್ಕೆ ಬರದೆ ಮೊಬೈಲ್ ಸ್ವಿಚ್ ಆಫ್ ಮಾಡಿಕೊಂಡು ದಲಿತ ಕುಟುಂಬಕ್ಕೆ ಅನ್ಯಾಯ ಮಾಡಿದ್ದಾರೆ.
ಇದನ್ನು ಪ್ರತಿಭಟಿಸಿ ಜಿಲ್ಲಾ ಪಂಚಾಯತ್ ಕಛೇರಿಯ ಮುಂದೆ ಕರ್ನಾಟಕ ದಲಿತ ಸಿಂಹ ಸೇನೆ ಹೂಹಳ್ಳಿ ಪ್ರಕಾಶ್ ನೇತೃತ್ವದಲ್ಲಿ ಪ್ರತಿಭಟನೆ ಮಾಡಲಾಯಿತು.
ಪ್ರತಿಭಟನೆಯ ನಂತರ ಮನವಿ ಪತ್ರವನ್ನು ಜಿಲ್ಲಾ ಮುಖ್ಯ ಕಾರ್ಯನಿರ್ವಹಣಾಧಿಕಾರಿಗಳ ಬದಲಾಗಿ ಡಿ.ಎಸ್. ರಮೇಶ್ ರವರಿಗೆ ನೀಡಲಾಯಿತು. ಮನವಿ ಸ್ವೀಕರಿಸಿದ ಡಿ.ಎಸ್. ರಮೇಶ್ ರವರು ಮಾತನಾಡಿ ಸೋಮವಾಗಿ ಬಗೆಹರಿಸಲು ತಾಲ್ಲೂಕು ಪಂಚಾಯಿತಿ ಕಾರ್ಯನಿರ್ವಹಣಾಧಿಕಾರಿಗಳಿಗೆ ಸೂಚಿಸಿದರು.
ಪ್ರತಿಭಟನೆಯಲ್ಲಿ ಲಕ್ಷ್ಮಮ್ಮ, ಬೈರಪ್ಪ, ಜಿಲ್ಲಾಧ್ಯಕ್ಷರಾದ ಮಾಸ್ತಿಬಾಬು, ಪ್ರಧಾನ ಕಾರ್ಯದರ್ಶಿ ಸಾಮ್ರಾಟ್, ಕೃಷ್ಣಮೂರ್ತಿ, ಸುಬ್ರಮಣಿ, ಹನುಮಾನ್, ಕೆಂಚಪ್ಪ, ರತ್ನಪ್ಪ, ಘಟ್ಟಹಳ್ಳಿ ಮಂಜು ಚೋಳಘಟ್ಟ ರಾಮಚಂದ್ರಪ್ಪ, ವೆಂಕಟೇಶ್, ಮುನಿಯಪ್ಪ ಇನ್ನಿತರರು ಭಾಗವಹಿಸಿದ್ದರು.























