Home ಜಿಲ್ಲೆ ಪ್ರತಿ ಮೆಟ್ರಿಕ್ ಟನ್‌ನಿಗೆ ರೂ. ೫೦ ರಂತೆ ಬಾಕಿ ಬಿಲ್ ಜಮೆ

ಪ್ರತಿ ಮೆಟ್ರಿಕ್ ಟನ್‌ನಿಗೆ ರೂ. ೫೦ ರಂತೆ ಬಾಕಿ ಬಿಲ್ ಜಮೆ


ಚನ್ನಮ್ಮನ ಕಿತ್ತೂರ,ಅ.೧೬: ಸಮೀಪದ ಶ್ರೀ ಸೋಮೇಶ್ವರ ಸಹಕಾರಿ ಸಕ್ಕರೆ ಕಾರ್ಖಾನೆ ಸಂಸ್ಥಾಪಕ ಮಾಜಿ ಶಾಸಕ ದಿ. ರಮೇಶ ಬಾಳೇಕುಂದರಗಿ ಹಾಗೂ ಈ ಭಾಗದ ಎಲ್ಲ ಮುಖಂಡರು ಜೊತೆಗೂಡಿ ಈ ಕಾರ್ಖಾನೆ ನಿರ್ಮಾಣ ಮಾಡುವುದರಲ್ಲ ಪ್ರಮುಖ ಪಾತ್ರ ವಹಿಸಿದ್ದಾರೆ. ಎಂದು ಉದ್ಯಮಿ ಹಾಗೂ ಕಾರ್ಖಾನೆ ಅಧ್ಯಕ್ಷ ಬಸವರಾಜ.ರ.ಬಾಳೇಕುಂದರಗಿ ಹೇಳಿದರು.


ಕಾರ್ಖಾನೆಯಲ್ಲಿ ಸುದ್ದಿಗಾರರೊಂದಿಗೆ ಮಾಡಿದವರು ನಮ್ಮ ಕಾರ್ಖಾನೆ ರಾಜ್ಯದಲ್ಲಿ ನಂ.೧ ಎನಿಸಿಕೊಂಡು ಸಕ್ಕರೆ ಇಳುವರಿಯಲ್ಲಿ ಪ್ರಥಮ ಸ್ಥಾನ ಪಡೆದುಕೊಂಡಿದೆ. ಇದು ರೈತರ ಪಾಲಿಗೆ ಜೀವನಾಡಿಯಾಗಿ ಹೊರಹೊಮ್ಮಿದ್ದು ಬರುವ ಹಂಗಾಮಿನಲ್ಲಿ ಒಳ್ಳೆಯ ಕಬ್ಬು ಪೂರೈಸಿ ಹೆಚ್ಚಿನ ಸಕ್ಕರೆ ಇಳುವರಿ ತೆಗೆಯಲು ರೈತ ಬಾಂಧವರ ಸಹಕಾರ ಬಹಳ ಮುಖ್ಯ. ಬೇರೆಡೆ ಕಾರ್ಖಾನೆಗಳಿಗೆ ಕಬ್ಬು ಪೂರೈಸದೇ ನಮ್ಮ ಕಾರ್ಖಾನೆಗೆ ಕಬ್ಬು ಪೂರೈಸಿ ಎಫ್‌ಆರ್‌ಪಿಯಂತೆ ದರ ನೀಡುತ್ತೇವೆ. ನಿಮ್ಮೇಲ್ಲರ ಸಹಕಾರ ಅಗತ್ಯ. ರೈತ ಮತ್ತು ಕಾರ್ಮಿಕರ ಏಳಿಗೆ ನಮ್ಮ ಮುಖ್ಯ ಉದ್ದೇಶ. ೨೦೨೫-೨೬ನೇ ಸಾಲಿನ ಕಬ್ಬು ಪೂರೈಸಿದ ರೈತರಿಗೆ ಪ್ರತಿ ಮೆಟ್ರಿಕ್ ಟನ್‌ನಿಗೆ ರೂ. ೫೦ ರಂತೆ ಹಾಗೂ ಕಬ್ಬು ಕಟಾವು ಸಾಗಾಣಿಕೆ ತಂಡಗಳ ಬಿಲ್ಲನ್ನು ಬರುವ ಸಾಲಿನ ಕಬ್ಬು ನೂರಿಸುವ ಹಂಗಾಮಿಗೆ ಜಮೆ ಮಾಡಲಾಗಿದೆ ಎಂದು ಬಾಳೇಕುಂದರಗಿ ತಿಳಿಸಿದರು. ಈ ವೇಳೆ ನಿರ್ದೇಶಕ ಮಂಡಳಿ ಇದ್ದರು.