ಸಕಾಲದಲ್ಲಿ ಪುರಸಭೆಯ ತೆರಿಗೆ ಪಾವತಿಸಿ ಶೇಕಡಾ ೫ ರಿಯಾಯಿತಿ ಪಡೆಯಿರಿ

ಚಿಟಗುಪ್ಪ:ಮೇ.೨೧: ಸರ್ಕಾರದ ಅಧೀನ ಕಾರ್ಯದರ್ಶಿಗಳು ನಗರಾಭಿವೃದ್ಧಿ ಇಲಾಖೆ ಬೆಂಗಳೂರು ಇವರ ಆದೇಶದಂತೆ ಪಟ್ಟಣದ ಎಲ್ಲಾ ಸಾರ್ವಜನಿಕರು ಪ್ರಸ್ತುತ ವರ್ಷದ ೨೦೨೫-೨೬ನೇ ಸಾಲಿನ ತಮ್ಮಗೆ
ಸಂಬAಧಿಸಿದ ಆಸ್ತಿಯ ತೆರಿಗೆಯನ್ನು ದಿನಾಂಕ: ೩೦-೦೬-೨೦೨೫ರ ಒಳಗೆ ಪಾವತಿಸಿ ಸರ್ಕಾರದಿಂದ
ಆಸ್ತಿ ತೆರಿಗೆಯಲ್ಲಿ ಶೇ.೫% ರಷ್ಟು ರಿಯಾಯಿತಿಯ ಸದುಪಯೋಗ ಪಡೆದುಕೊಳ್ಳಬೇಕು ಹಾಗೂ ಈ ಹಿಂದಿನ ವರ್ಷ ಆಸ್ತಿ ತೆರಿಗೆ, ನೀರಿನ ತೆರಿಗೆ ಮತ್ತು ಉದ್ದಿಮೆ ಪರವಾನಿಗೆ ತೆರಿಗೆಯನ್ನು ಕೂಡ ಪಾವತಿಸಿ ಪಟ್ಟಣದ ಅಭಿವೃದ್ಧಿಗೆ ಸಹಕರಿಸಬೇಕೆಂದು ಪುರಸಭೆ ಮುಖ್ಯಾಧಿಕಾರಿ ಹುಸಾಮೋದ್ದೀನ್ ಬಾಬಾ ಪತ್ರಿಕಾ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.