
ಕಲಬುರಗಿ, ಅ.18: ವಿಶ್ವ ವಿಖ್ಯಾತ ನಾಡ ಹಬ್ಬ ಮೈಸೂರು ದಸರಾ ಸಾಂಸ್ಕøತಿಕ ಕಾರ್ಯಕ್ರಮದಲ್ಲಿ ಆಕಾಶವಾಣಿ ಹಾಗೂ ದೂರದರ್ಶನ ಬಿ-ಹೈ ಶ್ರೇಣಿ ಖ್ಯಾತ ಕಲಾವಿದೆ ಪವಿತ್ರಾ ವಿಶ್ವನಾಥ ಅವರ ಸುಗಮ ಸಂಗೀತ ಗಾಯನ ಸಭಿಕರಿಗೆ ರಸದೌತಣ ನೀಡಿತು.
ಮೈಸೂರು ನಗರದ ನಾದಬ್ರಹ್ಮ ಸಂಗೀತ ಸಭಾ ವೇದಿಕೆಯ ಆವರಣದಲ್ಲಿ ಅನೇಕ ವಚನ, ಭಾವಗೀತೆ, ಮತ್ತು ದಾಸವಾಣಿ ಕಾರ್ಯಕ್ರಮ ನಡೆಸಿಕೊಟ್ಟರು. ಇವರಿಗೆ ಆಕಾಶವಾಣಿ ಹಾಗೂ ದೂರದರ್ಶನ ಬಿ-ಹೈ ಶ್ರೇಣಿ ಕಲಾವಿದ ವೀರಭದ್ರಯ್ಯ ಸ್ಥಾವರಮಠ ಭೂಸನೂರ ತಬಲಾ ಹಾಗೂ ವಿಶ್ವನಾಥ ರಾಜನಾಳ ತಾಳವಾದ್ಯ ಸಾಥ್ ನೀಡಿದರು.





















