
ಕಲಬುರಗಿ:ನ.11: ಶಿರೋಳದ ತೋಂಟದಾರ್ಯ ವಿದ್ಯಾಪೀಠದ ಮಾದಾರ ಚನ್ನಯ್ಯ ತರಬೇತಿ ಸಂಸ್ಥೆಯ ಸಾಧನೆ ಗುರುತಿಸಿ ಬೆಸ್ಟ್ ಪರಫಾಮಿರ್ಂಗ್ ಐಟಿಐ ಆಫ್ ಕರ್ನಾಟಕ ಪ್ರಶಸ್ತಿ ಲಭಿಸಿದ್ದು, ಬೆಂಗಳೂರಿನಲ್ಲಿ ಇತ್ತೀಚೆಗೆ ಪ್ರಶಸ್ತಿ ಪ್ರದಾನ ಮಾಡಲಾಯಿತು. ತರಬೇತಿ ಸಂಸ್ಥೆಯ ಕಾರ್ಯ ಸಾಧನೆ ಗುರುತಿಸಿ ರಾಜ್ಯ ಸರ್ಕಾರದ ಕರ್ನಾಟಕ ಕೌಶಲ್ಯ ಅಭಿವೃದ್ಧಿ ನಿಗಮ, ಕರ್ನಾಟಕ ಕೌಶಲ್ಯ ಅಭಿವೃದ್ಧಿ ಪ್ರಾಧಿಕಾರದಿಂದ ಇತ್ತೀಚೆಗೆ ಬೆಂಗಳೂರಿನ ಲಲಿತ ಅಶೋಕ ಹೋಟೆಲ್‍ನಲ್ಲಿ ಆಯೋಜಿಸಿದ್ದ ಬೆಂಗಳೂರು ಕೌಶಲ್ಯ ಶೃಂಗಸಭೆ- 2025
ಸಮಾರಂಭದಲ್ಲಿ ಸಚಿವ ಶರಣಪ್ರಕಾಶ ಪಾಟೀಲ ಅವರು ಪುರಸ್ಕಾರ ನೀಡಿ ಗೌರವಿಸಿದರು.
ಕಾರ್ಯಕ್ರಮದಲ್ಲಿ ಕರ್ನಾಟಕ ಕೌಶಲ್ಯಾಭಿವೃದ್ಧಿ ನಿಗಮದ ಅಧ್ಯಕ್ಷೆ ಶಿವಕಾಂತಮ್ಮ (ಕಾಂತಾ) ನಾಯಕ, ಕೈಗಾರಿಕಾ ತರಬೇತಿ ಮತ್ತು ಉದ್ಯೋಗ ಆಯುಕ್ತರಾದ ಡಾ. ರಾಗಾಪ್ರಿಯ ಆರ್., ರಾಜ್ಯ ಸರ್ಕಾರದ ನಿವೃತ್ತ ಮುಖ್ಯ ಕಾರ್ಯದರ್ಶಿ ವಂದಿತಾ ಶರ್ಮಾ ಇದ್ದರು.
ಮಾದಾರ ಚನ್ನಯ್ಯ ಕೈಗಾರಿಕೆ ತರಬೇತಿ ಸಂಸ್ಥೆ ಎತ್ತರಕ್ಕೆ ಬೆಳೆಯಬೇಕೆಂದರೆ ಡಾ. ತೋಂಟದ ಸಿದ್ದಲಿಂಗ ಶ್ರೀಗಳು, ಗುರುಬಸವ ಶ್ರೀಗಳು, ತೋಂಟದಾರ್ಯ ಸಿದ್ದರಾಮ ಶ್ರೀಗಳು ಮತ್ತು ಸಿಬ್ಬಂದಿ, ಜನರ ಸಹಕಾರದಿಂದ ಪ್ರಶಸ್ತಿ ಬಂದಿದೆ ಎಂದು ಭೈರನಹಟ್ಟಿಯ ಶಾಂತಲಿಂಗ ಶ್ರೀಗಳು ಹೇಳಿದರು. ಜಗದ್ಗುರು ತೋಂಟದಾರ್ಯ ವಿದ್ಯಾಪೀಠದ ಕಾರ್ಯದರ್ಶಿಗಳು ಹಾಗೂ ಶ್ರೇಷ್ಠ ಶಿಕ್ಷಣ ತಜ್ಞರಾದ ಪೆÇ್ರಫೆಸರ್ ಎಸ್ ಎಸ್ ಪಟ್ಟಣ್ ಶೆಟ್ಟರ್ ಮಾದರ ಚೆನ್ನಯ್ಯ ಕೈಗಾರಿಕಾ ತರಬೇತಿ ಸಂಸ್ಥೆಯ ಪ್ರಾಚಾರ್ಯರಿಗೆ, ಸಿಬ್ಬಂದಿ ವರ್ಗದವರಿಗೆ ಗೌರವಿಸಿ ಹರ್ಷ ವ್ಯಕ್ತಪಡಿಸಿದರು. ಸಂಸ್ಥೆಯ ಪ್ರಾಚಾರ್ಯ ಬಸವರಾಜ ಸಾಲಿಮಠ ಮಾತನಾಡಿ ತೋಂಟದ ಸಿದ್ಧಲಿಂಗ ಸ್ವಾಮೀಜಿಯವರು ಗ್ರಾಮೀಣ ಭಾಗದ ನಿರುದ್ಯೋಗಿ ಯುವಕ- ಯುವತಿಯರಿಗೆ ಉದ್ಯೋಗಾಧಾರಿತ ಶಿಕ್ಷಣ ಪಡೆದು ಸ್ವಾವಲಂಬಿ ಬದುಕು ಕಟ್ಟಿಕೊಳ್ಳಲು ಐಟಿಐ ಸಂಸ್ಥೆಗಳಿಂದ ಮಾತ್ರ ಎಂದು ಅರಿತಿದ್ದರು. ಅದನ್ನು ಕಾರ್ಯಗತಗೊಳಿಸುವ ಸಲುವಾಗಿ ಜಗದ್ಗುರು ತೋಂಟದಾರ್ಯ ವಿದ್ಯಾಪೀಠವನ್ನು ಸ್ಥಾಪಿಸಿದರು.
ಆ ಮೂಲಕ ಕರ್ನಾಟಕದ ಗ್ರಾಮೀಣ ಪ್ರದೇಶ ಮಂಡಲಗಿರಿ, ಡಂಬಳ, ಮೋರಟಗಿ, ಗದಗ ಹಾಗೂ ಶಿರೋಳ ಸೇರಿ ಒಟ್ಟು 5 ಐಟಿಐಗಳನ್ನು 1983- 84ರಲ್ಲಿ ಪ್ರಾರಂಭಿಸಿದರು.1984ರಲ್ಲಿ ನೀಲಕಂಠಜೀ ಗಣಾಚಾರಿಯವರ ಸರ್ವೋದಯ ಕಾರ್ಯಕರ್ತರ ಸಹಕಾರದಿಂದ ಅಂದಿನ ಶಾಸಕ ಬಿ.ಆರ್. ಯಾವಗಲ್ಲ ಅವರಿಂದ ಮಾದಾರ ಚನ್ನಯ್ಯ ಕೈಗಾರಿಕಾ ತರಬೇತಿ ಕೇಂದ್ರ ಎಂಬ ಹೆಸರಿನಿಂದ ಶಿರೋಳದಲ್ಲಿ ಉದ್ಘಾಟಿಸಲಾಯಿತು.1984ರಲ್ಲಿ ಐಟಿಐ ಎಲೆಕ್ಟ್ರಿಷಿಯನ್
ವೃತ್ತಿಯ ಎರಡು ಘಟಕಗಳ 19 ವಿದ್ಯಾರ್ಥಿಗಳಿಂದ ಪ್ರಾರಂಭಿಸಿ, ವರ್ಷದಿಂದ ವರ್ಷಕ್ಕೆ ಉದ್ಯೋಗಿಗಳನ್ನು ಸೃಷ್ಟಿ ಮಾಡುವ ಸಂಸ್ಥೆಯಾಗಿ ಬೆಳೆಯತೊಡಗಿತು. 1994ರಲ್ಲಿ ಡೀಸೆಲ್ ಮೆಕ್ಯಾನಿಕ್ ಎಂಬ ಮತ್ತೊಂದು ವೃತ್ತಿಯ ಘಟಕವನ್ನು ಪ್ರಾರಂಭಿಸಲಾಯಿತು. ಪ್ರತಿವರ್ಷ 38 ವಿದ್ಯಾರ್ಥಿಗಳಿಗೆ ತರಬೇತಿ ನೀಡಲು ಪ್ರಾರಂಭಿಸಿತು.
ಪ್ರಾರಂಭದಲ್ಲಿ 1 ವೃತ್ತಿಯ 1 ಘಟಕದ 19 ತರಬೇತುದಾರರ ಸಂಸ್ಥೆ ಇಂದು 4 ವೃತ್ತಿಯ 8 ಘಟಕಗಳಲ್ಲಿ 164 ತರಬೇತುದಾರರ ತರಬೇತಿ ಸಾಮರ್ಥ ಹೊಂದಿದೆ. ಸ್ವಂತ, ಸುಸಜ್ಜಿತ ಕಾರ್ಯಾಗಾರ, ವಿಶಾಲವಾದ ಮೈದಾನ, ಅನುಭವಿ ನುರಿತ ಸಿಬ್ಬಂದಿವರ್ಗವನ್ನೊಳಗೊಂಡ ಸಂಸ್ಥೆಗೆ ಶ್ರೀಮಠದ ಉಚಿತ ಪ್ರಸಾದ ನಿಲಯದಲ್ಲಿ ತರಬೇತುದಾರರಿಗೆ ವಸತಿ ಊಟದ ವ್ಯವಸ್ಥೆ ಕಲ್ಪಿಸಲಾಗುತ್ತಿದೆ. ಹಲವು ವರ್ಷಗಳಿಂದ ದೇಶದ ವಿವಿಧ ಪ್ರತಿಷ್ಠಿತ ಖಾಸಗಿ ಕಂಪನಿಗಳಿಂದ ಉದ್ಯೋಗ ಮೇಳ ಹಮ್ಮಿಕೊಂಡು ಬರಲಾಗುತ್ತಿದೆ






















