
ಕೊಲ್ಹಾರ:ಮೇ.೨೪:ಪಟ್ಟಣದ ಶ್ರೀ ಪಟ್ಟದೇವರು ಹಿರೇಮಠದ ನೂತನ ಕಟ್ಟಡ ಉದ್ಘಾಟನೆ ಉಪಮುಖ್ಯಮಂತ್ರಿ ಡಿ ಕೆ ಶಿವಕುಮಾರ್ ಉದ್ಘಾಟನೆ ಮಾಡಿದರು,ಈ ಸಂದರ್ಭದಲ್ಲಿ ಶ್ರೀ ಪ್ರಭು ಕುಮಾರ ಶಿವಾಚಾರ್ಯ ಮಹಾಸ್ವಾಮಿಗಳು, ಅಥಣಿಯ ಶಿವಬಸವ ಮಹಾಸ್ವಾಮಿಗಳು, ಜೈನಾಪುರದ ರೇಣುಕಾಚಾರ್ಯ ಮಹಾಸ್ವಾಮಿಗಳು ಭಾಗಿಯಾಗಿದ್ದರು ನಂತರ ಉಪಮುಖ್ಯಮಂತ್ರಿ ಡಿ ಕೆ ಶಿವಕುಮಾರ್ ರವರನ್ನು ಶ್ರೀಗಳು ಸನ್ಮಾನಿಸಿ ಗೌರವಿಸಿ ನೆನಪಿನ ಕಾಣಿಕೆ ನೀಡಿದರು.
ಈ ಸಂದರ್ಭದಲ್ಲಿ ಸಚಿವರಾದ ಶಿವಾನಂದ ಎಸ್ ಪಾಟೀಲ ಹಾಗೂ ಸಿಂದಗಿ ಶಾಸಕರಾದ ಅಶೋಕ ಮನಗೂಳಿ, ಮಾಜಿ ವಿಧಾನ ಪರಿಷತ್ ಸಭಾಪತಿ ಎಸ್ ಆರ್ ಪಾಟೀಲ, ಮಾಜಿ ಜಿಲ್ಲಾ ಪಂಚಾಯತ ಮಾಜಿ ಸದಸ್ಯರಾದ ಕಲ್ಲು ದೇಸಾಯಿ ಭಾಗಿಯಾಗಿದ್ದರು.
ವಿಶೇಷತೆ:ಕೊಲ್ಹಾರ : ಶುಕ್ರವಾರ ಸಕ್ಕರೆಯ ನಾಡು ವಿಜಯಪುರ ಜಿಲ್ಲೆಯ ಕೊಲ್ಹಾರ ಪಟ್ಟಣಕ್ಕೆ ಆಗಮಿಸಿದ ಉಪಮುಖ್ಯಮಂತ್ರಿ ಡಿ ಕೆ ಶಿವಕುಮಾರ್ ರವರಿಗೆ ಸಕ್ಕರೆ ನಾಡಿನ ಅಭಿಮಾನಿಗಳಿಂದ ಕಬ್ಬಿನಿಂದ ತಯಾರಿಸಿದ ಬೃಹತ್ ಕಬ್ಬಿನಹಾರ ಜೆಸಿಬಿ ಮೂಲಕ ಹಹಾಕಿ ಪಟ್ಟಣಕ್ಕೆ ಸ್ವಾಗತಿಸಲಾಯಿತು.ಸಚಿವ ಶಿವಾನಂದ ಎಸ್ ಪಾಟೀಲ, ಮಾಜಿ ವಿಧಾನ ಪರಿಷತ್ ಸಭಾಪತಿ ಎಸ್ ಆರ್ ಪಾಟೀಲ,ಶಾಸಕ ಅಶೋಕ ಮನಗೂಳಿ, ಪಟ್ಟಣ ಪಂಚಾಯಿತಿ ಅಧ್ಯಕ್ಷ ಚನ್ನಮಲ್ಲಪ್ಪ ಗಿಡ್ಡಪ್ಪಗೋಳ, ಪಟ್ಟಣ ಪಂಚಾಯಿತಿ ಉಪಾಧ್ಯಕ್ಷೆ ರಾಜಮಾ ನದಾಫ,ಮಾಜಿ ಜಿಲ್ಲಾ ಪಂಚಾಯಿತಿ ಸದಸ್ಯರಾದ ಕಲ್ಲು ದೇಸಾಯಿ, ತಾನಾಜಿ ನಾಗರಾಳ, ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷರ ಆರ್ ಬಿ ಪಕಾಲಿ, ಪಟ್ಟಣ ಪಂಚಾಯಿತಿ ಸದಸ್ಯರಾದ ಶ್ರೀಶೈಲ ಮುಳವಾಡ, ಮಹಾಂತೇಶ ಗಿಡ್ಡಪ್ಪಗೋಳ,ತೌಶೀಪ ಗಿರಗಾಂವಿ, ಬನಪ್ಪ ಬಾಲಗೊಂಡ,ದಶರಥ ಈಟಿ, ನಿಂಗಪ್ಪ ಗಣಿ, ಮತ್ತು ಈರಣ್ಣ ಬಾಗಿ, ಸಾವಿರಾರು ಕಾರ್ಯಕರ್ತರು ಉಪಸ್ಥಿತರಿದ್ದರು