
ಭಾಲ್ಕಿ:ಡಿ.೧೭:ಪಟ್ಟಣದ ಚನ್ನಬಸವಾಶ್ರಮದಲ್ಲಿಲಿಂಗೈಕ್ಯ ಚನ್ನಬಸವ ಪಟ್ಟದ್ದೇವರ ೧೩೬ನೇ ಜಯಂತ್ಯುತ್ಸವ ಅಂಗವಾಗಿ ಹಿರೇಮಠದ ಹಿರಿಯ ಸ್ವಾಮೀಜಿ ಬಸವಲಿಂಗ ಪಟ್ಟದ್ದೇವರ ಮಾರ್ಗದರ್ಶನದಲ್ಲಿ ಡಿ. ೨೨ರಂದು ಬೆಳಿಗ್ಗೆ ೦೯:೩೦ ಗಂಟೆ ಗೆಭಾಷಣ ಹಾಗೂ ಶರಣರ ಕುರಿತು ಗೀತಗಾಯನ ಸ್ಪರ್ಧೆ ಆಯೋಜಿಸಲಾಗಿದೆ.
ಈ ಸ್ಪರ್ಧೆಗಳಲ್ಲಿ ಪ್ರೌಢ ಹಾಗೂ ಕಾಲೇಜು ವಿಭಾಗದ ವಿದ್ಯಾರ್ಥಿಗಳು ಭಾಗವಹಿಸಬಹುದು.
ಚನ್ನಬಸವ ಪಟ್ಟದ್ದೇವರ ಜೀವನ ಸಾಧನೆ
ಭಾಷಣದ ವಿಷಯವಾಗಿದೆ. ವಿಷಯ ಮಂಡನೆಗೆ ೫ ರಿಂದ ೬ ನಿಮಿಷ ಸಮಯ ಅವಕಾಶ ನೀಡಲಾಗುತ್ತದೆ.
ಸ್ಪರ್ಧೆಗಳಲ್ಲಿ ಪ್ರಥಮ, ದ್ವಿತೀಯ, ತೃತೀಯ ಸ್ಥಾನ ಪಡೆದ ವಿದ್ಯಾರ್ಥಿಗಳಿಗೆ ಪ್ರತ್ಯೇಕವಾಗಿ ವಿಶೇಷ ಬಹುಮಾನ ನೀಡಲಾಗುತ್ತದೆ.
ಭಾಗವಹಿಸಿದ ಎಲ್ಲ ವಿದ್ಯಾರ್ಥಿಗಳಿಗೂ ಪ್ರಮಾಣ ಪತ್ರ ನಿಡಲಾಗುತ್ತದೆ.
ಪ್ರೌಢ ಶಾಲೆ ಮುಖ್ಯಶಿಕ್ಷಕರು, ಕಾಲೇಜುಗಳ ಪ್ರಾಚಾರ್ಯರು ತಮ್ಮ-ತಮ್ಮ ಶಾಲೆಗಳಲ್ಲಿ ಸ್ಪರ್ಧೆಯನ್ನು ನಡೆಸಿ ಪ್ರಥಮ ಬಂದ ವಿದ್ಯಾರ್ಥಿಗಳನ್ನು ಅಂತಿಮ ಸ್ಪರ್ಧೆಗೆ ಕಳುಹಿಸಬೇಕು.
ಹೆಚ್ಚಿನ ಮಾಹಿತಿಗಾಗಿ ಬಾಬು ಬೆಲ್ದಾಳ ಅವರ ಮೊಬೈಲ್ ಸಂಖ್ಯೆ ೯೮೮೦೭೬೮೬೬೨ ಕ್ಕೆ ಸಂಪರ್ಕಿಸಲು ಪ್ರಕಟಣೆ ತಿಳಿಸಿದೆ.

























