Home ಜಿಲ್ಲೆ ಕಲಬುರಗಿ ಕಷ್ಟ ಸುಖಗಳು ನೆರಳು ಬಿಸಿಲು ಜೀವನದಲ್ಲಿ ತಾಳ್ಮೆ ಮುಖ್ಯ : ಮಳೇಂದ್ರ ಶಿವಾಚಾರ್ಯ

ಕಷ್ಟ ಸುಖಗಳು ನೆರಳು ಬಿಸಿಲು ಜೀವನದಲ್ಲಿ ತಾಳ್ಮೆ ಮುಖ್ಯ : ಮಳೇಂದ್ರ ಶಿವಾಚಾರ್ಯ

ಮಾದನಹಿಪ್ಪರಗಿ:ಫೆ16: ಜೀವನದಲ್ಲಿ ಯಾವುದು ಶಾಶ್ವತವಲ್ಲ. ಕಷ್ಟಸುಖ ನೆರಳು ಬಿಸಿಲಿನಂತೆ. ತಾಳ್ಮೆಯಿಂದ ಸಂಸಾರ ನಡೆಸಿ ಗುರುವಿನ ಸ್ಮರಣೆಯಿಂದ ನೆಮ್ಮದಿಯೊಂದೆ ಶಾಶ್ವತ ಎಂದು ಅಪಜಲಪೂರ ರಾಜಗುರು ಸಂಸ್ಥಾನ ಹಿರೆಮಠದ ವಿಶ್ವರಾಧ್ಯ ಮಳೇಂದ್ರ ಶಿವಾಚಾರ್ಯರರು ಹೇಳಿದರು.
ಗ್ರಾಮದ ಸಂಗಮೇಶ್ವರ ಹಾಗೂ ಖಂಢೇಶ್ವರ ದೇವಸ್ಥಾನದ ಮಹಾದ್ವಾರದ ಲೋಕಾರ್ಪಣೆ ನಿಮತ್ಯ ಹಮ್ಮಿಕೊಂಡಿದ್ದ ಸಾಮೂಹಿಕ ವಿವಾಹಗಳ ಧರ್ಮಸಭೆಯ ದಿವ್ಯಸಾನಿಧ್ಯವಹಿಸಿ ಮಾತನಾಡುತ್ತಿದ್ದರು. ವರದಕ್ಷಿಣೆ ಪಡೆಯದ, ಹೆತ್ತವರಲ್ಲಿ ಪಾಲು ಕೇಳದ, ಕಾಯಕದಿಂದ ದಾಸೋಹ ಮಾಡುವವರು ಮಾತ್ರ ನಿಜವಾದ ಪುರುಷರಾಗಿರುತ್ತಾರೆ. ಜೀವನದಲ್ಲಿ ಉತ್ತಮ ನಡೆ ನುಡಿ ಉತ್ತಮ ವಿಚಾರಗಳು ಅಳವಡಿಸಿಕೊಂಡರೆ ಮನೆತನಕ್ಕೆ ಗೌರವ. ಸಂಸಾರದ ಬಂಡಿ ಸಾಗಲು ಒಳ್ಳೆಯ ಮನಸ್ಸು ಮುಖ್ಯ. ನಿಮ್ಮ ಮಕ್ಕಳಿಗೆ ಉತ್ತಮ ಸಂಸ್ಕಾರ ನೀಡಿರಿ. ನಿಮ್ಮ ಮುಪ್ಪಿನ ಭವಿಷ್ಯ ಸುಖಕರವಾಗುತ್ತದೆ ಎಂದು ನವ ವಧು ವರರಿಗೆ ಕಿವಿ ಮಾತು ಹೇಳಿದರು. ಐನಾಪುರ ಸಿದ್ದಲಿಂಗೇಶ್ವರ ಸಂಸ್ಥಾನ ಮಠದ ಉಪಮನ್ಯು ಶಿವಾಚಾರ್ಯರು ಮಾತನಾಡುತ್ತ. ಸಂಸಾರದಲ್ಲಿ ಸತಿಪತಿಗಳು ಹೊಂದಾಣಿಕೆ ಮಾಡಿಕೊಂಡು ಒಬ್ಬರನ್ನೊಬ್ಬರು ಅರಿತು ಬದುಕು ಸಾಗಿಸಬೇಕು ಧರ್ಮ ಹಾದಿಯಲ್ಲಿ ನಡೆದು ಮತ್ತೊಬ್ಬರಿಗೆ ಮಾದರಿಯಾಗಿರಬೇಕೆಂಧು ನವ ದಂಪತಿಗಳಿಗೆ ಸಲಹೆ ನೀಡಿದರು. ಆಳಂದ ತಾಲೂಕ ಮಾಜಿ ಶಾಸಕ ಸುಭಾಷ ಆರ್.ಗುತ್ತೇದಾರ ಮಾತನಾಡಿ ಈ ಗ್ರಾಮವೂ ತಾಲೂಕಿನಲ್ಲಿಯೇ ಭಕ್ತಿಗೆ ಹೆಸರುವಾಸಿಯಾಗಿದೆ. ಇಲ್ಲಿನ ಪ್ರಸಿದ್ದ ಎರಡು ಮಠಗಳಲ್ಲಿ ಪ್ರತಿವರ್ಷ ಸಾಮೂಹಿಕ ವಿವಾಹಗಳು ನಡೆಯುತ್ತಲೇ ಇರುತ್ತವೆ. ಈ ವರ್ಷ ಮತ್ತೆ ಖಂಡೇಶ್ವರ ದೇವಸ್ಥಾನದಲ್ಲಿ 21 ದಿನಗಳ ಧಾರ್ಮಿಕ ಕಾರ್ಯಕ್ರಮಗಳು ಮುಗಿದು ಇಂದು 13 ಜೋಡಿಗಳ ಉಚಿತ ಸಾಮೂಹಿಕ ವಿವಾಹಗಳು ನೆರವೇರಿಸುತ್ತಿರುವದು ಸಂತಸ ತಂದಿದೆ. ಇಲ್ಲಿ ಜಾತಿ ಮತ ಬೇದ ಮರೆತು ಎಲ್ಲರೂ ಸೇರಿ ಇಂತಹ ಅದ್ಭುತ ಕಾರ್ಯಕ್ರಮ ಮಾಡಿದ್ದಾರೆ. ಇಂದು ಹೊಸ ವೈವಾಹಿಕ ಜೀವನಕ್ಕ ಕಾಲಿಡುತ್ತಿರುವ ನವ ವಧು ವರರು ಭಾಗ್ಯಶಾಲಿಗಳು ವಿವಿಧ ಮಠಧೀಶರ, ರಾಜಕೀಯ ಗಣ್ಯರ, ಗುರು ಹಿರಿಯರೆಲ್ಲರ ಆಶೀರ್ವಾದ ನಿಮಗಿದೆ. ಸಂಸಾರದ ಬಾಳಿನ ಚಕ್ಕಡಿಯಲ್ಲಿ ಸಾಗಲು ನಂಬಿಕೆ ಪ್ರೀತಿ ವಿಶ್ವಾಸ ಬಹಳ ಮುಖ್ಯ. ನವವಧು ಅತ್ತೆ ಮಾವರನ್ನು ತಂದೆ ತಾಯಿಯೆಂದು ತಿಳಿದು ಗೌರವಿಸಿ ನಡೆಯಿರಿ. ತವರಿನ ಬಂಧುಗಳನ್ನು ಬಿಟ್ಟು ಹೊಸ ಮನೆಯನ್ನು ಬೆಳಗಲು ಬಂದ ಹೆಂಡತಿಯ ಕಷ್ಟ ಸುಖಗಳನ್ನು ಅರಿತು ತಾಳ್ಮೆಯಿಂದ ಸಾಗುವದು ವರನ ಜವಾಬ್ದಾರಿ ಎಂದರು.
ವೇದಿಕೆಯ ಮೇಲೆ ಸಿದ್ದಲಿಂಗ ಸ್ವಾಮಿಗಳು ಪೇಠಶಿರೂರ, ರಾಜಶಿವಯೋಗಿ ಸ್ವಾಮಿಗಳು ಶಹಬಾದ, ಶಾಂತವೀರ ಶಿವಾಚಾರ್ಯರು, ಫಕಿರಾನಂದ ಸಾಧು ಮಹಾರಾಜರು ಧರಿಗುಡ್ಡ, ಶಿವದೇವಿ ಮಾತಾಜೀ, ಅಭಿನವ ಶಿವಲಿಂಗ ಸ್ವಾಮಿಗಳು, ಗಣ್ಯರಾದ ಶಂಕರ ಮೇತ್ರೆ ಧುಧನಿ, ದತ್ತರಾಜ ಗುತ್ತೇದಾರ, ಶಂಕರ ದೇಶಮುಖ, ಗುರುಶಾಂತ ಪಾಟೀಲ, ಮೋಹನಗೌಡ ಪಾಟೀಲ, ಮಲ್ಲಿನಾಥ ಪಾಟೀಲ, ಶಸಿಕಾಂತ ಭಕರೆ, ಶಿವಾನಂದ ಪಾಟೀಲ, ಕಲಬುರಗಿ ಜಿಲ್ಲಾ ಮಕ್ಕಳ ರಕ್ಷಣಾ ಸಹಾಯ ವಾಣಿಯ ಮರಳಮ್ಮ , ಆಳಂದ ಸಿಡಿಪಿಓ ಕಚೇರಿಯ ಸಿಬ್ಬಂಧಿಗಳಾದ ಗೋದಾವರಿ ಪತ್ತಾರ, ನಂದಾ ಪಾಟೀಲ ವೇದಿಕೆಯ ಮೇಲಿದ್ದರು. ಬಸವರಾಜ ಪ್ಯಾಟಿ, ಸಾತಪ್ಪ ಕೋಳಶೆಟ್ಟಿ, ಸಿದ್ದರಾಮ ತೋಳನೂರ, ಮಲ್ಲಿನಾಥ ಬಂಬಾಸೆ, ಶಿವಪ್ಪ ಕೋಳಶೆಟ್ಟಿ, ಶಂಕರೆಪ್ಪ ಮುಗಳಿ, ವಿಶ್ವನಾಥ ಪ್ಯಾಟಿ, ಧರ್ಮಣ್ಣ ಆಲೂರೆ, ವಿಶ್ವನಾಥ ಪರೇಣಿ ಹಾಗೂ ಇತರ ಮುಖಂಡರುಗಳು ಹಾಜರಿದ್ದರು.